

ನವದೆಹಲಿ: ಖ್ಯಾತ ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಲಿಯೋನ್ಗೆ 26 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.
ಸೋಫಿಯಾ ಲಿಯೋನ್ ಅವರ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟಿರುವುದಾಗಿ ಆಕೆಯ ಮಲತಂದೆ ಮೈಕ್ ರೊಮೆರೊ ಮಾಹಿತಿ ನೀಡಿದ್ದಾರೆ. ಮಾರ್ಚ್ 01ರಂದು ಆಕೆ ಮೃತಪಟ್ಟಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 1ರಂದು ಅಮೆರಿಕಾದಲ್ಲಿ ಸೋಫಿಯಾ ಲಿಯೋನೆ ಅನುಮಾನಸ್ಪದವಾಗಿ ಅಪಾರ್ಟ್‌ಮೆಂಟ್‌ನಲ್ಲಿ ನಿಧನರಾದರು. ಆದರೆ, ಕುಟುಂಬಸ್ಥರು ಸೋಫಿಯಾ ಲಿಯೋನ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸೋಫಿಯಾ ಲಿಯೋನೆ 1997ರ ಜೂನ್ 10ರಂದು ಅಮೆರಿಕದ ಮಿಯಾಮಿಯಲ್ಲಿ ಜನಿಸಿದರು. ಸೋಫಿಯಾ ಲಿಯೋನೆ 18ನೇ ವಯಸ್ಸಿನಲ್ಲಿಯೇ ನೀಲಿ ಚಿತ್ರಗಳಲ್ಳಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಕಾಗ್ನಿ ಲಿನ್ ಕಾರ್ಟರ್, ಜೆಸ್ಸಿ ಜೇನ್ ಮತ್ತು ಥೈನಾ ಫೀಲ್ಡ್ಸ್ ನಂತರ ಈ ಉದ್ಯಮದಿಂದ ಪ್ರಸಕ್ತ ವರ್ಷ ನಾಲ್ಕನೇ ಮರಣ ಇದಾಗಿದೆ.