More

    ನಾಕೌಟ್​ ಪ್ರವೇಶಿಸಿದ ಮುಂಬೈ ಇಂಡಿಯನ್ಸ್​; ಆರ್​ಸಿಬಿ ಹಾದಿ ಕಷ್ಟಕರ

    ನವದೆಹಲಿ: ಫೆಬ್ರವರಿ 23ರಂದು ಆರಂಭವಾದ ಎರಡನೇ ಆವರತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದ್ದು, ಈಗಾಗಲೇ ಹದಿನಾರು ಪಂದ್ಯಗಳು ಮುಕ್ತಾಯಗೊಂಡಿದೆ. ಶನಿವಾರ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 7 ವಿಕೆಟ್​ಗಳ ಜಯ ಸಾಧಿಸಿದ್ದು, ಪಾಯಿಂಟ್ಸ್ ಟೇಬಲ್​ನಲ್ಲಿ ಬದಲಾವಣೆ ಆಗಿದೆ.

    ಗುಜರಾತ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಹರ್ಮಾನ್​ಪ್ರೀತ್​ ಕೌರ್​ ನೇತೃತ್ವದ ಮುಂಬೈ ಇಂಡಿಯನ್ಸ್​ ಮಹಿಳಾ ತಂಡವು ಅಗ್ರಸ್ಥಾನಕ್ಕೇರಿದ್ದು, ಆಡಿರುವ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಹಾಗೂ ಎರಡು ಪಂದ್ಯದಲ್ಲಿ ಸೋಲುಂಡು +0.343 ರನ್​ರೇಟ್​ನೊಂದಿಗೆ 10 ಅಂಕ ಸಂಪಾದಿಸಿದೆ. 

    ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಎರಡರಲ್ಲಿ ಸೋಲು ಕಂಡು +1.059 ರನ್​ರೇಟ್​ನೊಂದಿಗೆ ಎಂಟು ಅಂಕ ಪಡೆದುಕೊಂಡಿದೆ.

    ಇದನ್ನೂ ಓದಿ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಮುಡಿಗೆ ವಿಶ್ವ ಸುಂದರಿ ಕಿರೀಟ

    ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿದೆ. ಆಡಿರುವ ಆರು ಪಂದ್ಯಗಳಲ್ಲಿ ಸೋಲು ಗೆಲುವನ್ನು ಸಮನಾಗಿ ಕಂಡಿರುವ ಆರ್​ಸಿಬಿ ಒಟ್ಟು 6 ಅಂಕ ಸಂಪಾದಿಸಿ 3ನೇ ಸ್ಥಾನದಲ್ಲಿದೆ. ಆರ್​ಸಿಬಿ ನಾಕೌಟ್​ ಹಾದಿ ಕಷ್ಟಕರವಾಗಿದ ಎಂದು ಹೇಳಲಾಗಿದ್ದು, ಯುಪಿ ವಾರಿಯರ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ನಾಲ್ಕು ಸೋಲು ಮತ್ತು ಮೂರು ಗೆಲುವು ಕಂಡು 6 ಅಂಕ ಪಡೆದುಕೊಂಡಿದೆ. ಯುಪಿ ರನ್​ರೇಟ್ -0.365 ಆಗಿದೆ.

    ಆಡಿರುವ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಿದ್ದು, ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸಿ 2 ಅಂಕ ಪಡೆದುಕೊಂಡಿರುವ ಗುಜರಾತ್​ ಜೈಯಂಟ್ಸ್​ ತಂಡವು -1.111 ರನ್​ರೇಟ್​ನೊಂದಿಗೆ ಕೊನೆ ಸ್ಥಾನದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts