More

    ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಮುಡಿಗೆ ವಿಶ್ವ ಸುಂದರಿ ಕಿರೀಟ

    ನವದೆಹಲಿ: 2024ನೇ ಸಾಲಿನ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ಅವರಿಗೆ ಕಿರೀಟ ಒಲಿದಿದೆ. 28 ವರ್ಷಗಳ ಬಳಿಕ ಭಾರತದ ಆತಿಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಜಯಶಾಲಿಯಾಗಿದ್ದಾರೆ. ಮಿಸ್ ಲೆಬನಾನ್ ಯಾಸ್ಮಿನಾ ಜೈಟೌನ್ ಅವರನ್ನು ,ಮೊದಲ ರನ್ನರ್​ ಅಪ್​ ಎಂದು ಘೋಷಿಸಲಾಗಿದೆ.

    ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ನಡೆದ 71ನೇ ಸಾಲಿನ ಮಿಸ್​ ವರ್ಲ್ಡ್ ಕಾರ್ಯಕ್ರಮದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ಕಿರೀಟವನ್ನು ಮುಡಿಗೇರಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ವಿವಿಧ ದೇಶಗಳ ಪ್ರತಿಭಾವಂತ ಮತ್ತು ಸುಂದರ ಮಹಿಳೆಯರು ಪ್ರತಿ ವರ್ಷ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಮಿಸ್​ ವರ್ಲ್ಡ್​ನಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಗೆದ್ದವರಿಗೆ ಸಾಕಷ್ಟು ಜನಪ್ರಿಯತೆ ಸಿಗುತ್ತದೆ. ಈ ಬಾರಿ ಭಾರತದಿಂದ ಕರ್ನಾಟಕ ಮೂಲದ ಸಿನಿ ಶೆಟ್ಟಿ ಸ್ಪರ್ಧಿಸಿದ್ದರು. ಆದರೆ, ಪ್ರಶಸ್ತಿ ಜಯಿಸುವಲ್ಲಿ ವಿಫಲರಾದರು. ಮಿಸ್​​ ವರ್ಲ್ಡ್​​ ಸ್ಪರ್ಧೆಯಲ್ಲಿ 115 ರಾಷ್ಟ್ರಗಳಿಂದ ಆಗಮಿಸಿದ ಸುಂದರಿಯರು ಭಾಗಿಯಾಗಿದ್ದರು.

    ಇದನ್ನೂ ಓದಿ: ಆಂಗ್ಲರ ವಿರುದ್ಧ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಟೀಮ್ ಇಂಡಿಯಾ

    ಈ ಮೊದಲು ಭಾರತದ ರೀಟಾ ಫರಿಯಾ (1966), ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ ಜೋನಾಸ್ (2000), ಮತ್ತು ಮಾನುಷಿ ಚಿಲ್ಲರ್ (2017) ಮೊದಲಾದವರು ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದಿದ್ದಾರೆ. ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಒಟ್ಟು 12 ಮಂದಿ ತೀರ್ಪುಗಾರರಿದ್ದು, ಇದರಲ್ಲಿ ಬಾಲಿವುಡ್ ನಟ ಕೃತಿ ಸನೋನ್, ಪೂಜಾ ಹೆಗ್ಡೆ ಸೇರಿದಂತೆ ಮೊದಲಾದವರು ಜಡ್ಜ್​ ಆಗಿದ್ದಾರೆ. ಇದರ ಜೊತೆ ಮೂವರು ಮಿಸ್ ವರ್ಲ್ಡ್​ ಟೈಟಲ್ ಹೋಲ್ಡರ್​ಗಳು ಕೂಡ ಜಡ್ಜ್​ಗಳಾಗಿದ್ದಾರೆ.

    ಜೆಕ್ ಗಣರಾಜ್ಯದ ನಿವಾಸಿಯಾಗಿರುವ ಕ್ರಿಸ್ಟೈನಾ ಪಿಸ್ಕೋವಾ ಲಾ ಹಾಗೂ ಬಿಸ್ನೆಸ್ ಅಡ್ಮಿಸ್ಟ್ರೇಷನ್​ ವ್ಯಾಸಂಗ ಮಾಡುತ್ತಿದ್ದು, ಮಾಡೆಲಿಂಗ್​ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ತಮ್ಮದೇ ಫೌಂಡೇಷನ್ ಆರಂಭಿಸಿ ಸಾಮಾಜಿಕ ಕೆಲಸ ಮಾಡುತ್ತಿರುವ ಕ್ರಿಸ್ಟೈನಾ ಪಿಸ್ಕೋವಾ ತಾಜೇನಿಯಾದಲ್ಲಿ ಬಡ ಮಕ್ಕಳಿಗಾಗಿ ಇಂಗ್ಲೀಷ್​ ಸ್ಕೂಲ್ ಓಪನ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts