More

    ವಿಜಯವಾಣಿ ಎಜುಕೇಶನ್​ ಎಕ್ಸ್​ಪೋ 2024: ಬೆಂಗಳೂರಿನಲ್ಲಿ ಮೇ 18- 19ರಂದು ಆಯೋಜನೆ

    ಬೆಂಗಳೂರು: ಕರ್ನಾಟಕದ ನಂಬರ್​ 1 ದಿನಪತ್ರಿಕೆ ವಿಜಯವಾಣಿಯು ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಶೈಕ್ಷಣಿಕ ಮೇಳ “ಎಜುಕೇಶನ್​ ಎಕ್ಸ್​ಪೋ 2024” ಆಯೋಜಿಸುತ್ತಿದೆ.

    ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಈಗ ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದೇ ರೀತಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು, ರಿಸಲ್ಟ್​ ನಿರೀಕ್ಷೆಯಲ್ಲಿದ್ದಾರೆ. ಎಸ್​ಎಸ್​ಎಲ್​ಸಿ ನಂತರ ಮುಂದೇನು? ಪಿಯುಸಿ ನಂತರ ಯಾವ ಕೋರ್ಸ್​ ಆಯ್ದುಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು? ಇಂತಹ ಪ್ರಶ್ನೆಗಳು, ಗೊಂದಲಗಳು ಯುವ ವಿದ್ಯಾರ್ಥಿಗಳಲ್ಲಿ ಹಾಗೂ ಅವರ ಪೋಷಕರಲ್ಲಿ ಸಹಜವಾಗಿ ಮನೆ ಮಾಡಿರುತ್ತವೆ. ವಿಜಯವಾಣಿ ಆಯೋಜಿಸಿರುವ ಎಜುಕೇಶನ್​ ಎಕ್ಸ್​ಪೋ 2024ರಲ್ಲಿ ಇದಕ್ಕೆಲ್ಲ ನಿಶ್ಚಿತವಾಗಿಯೂ ಉತ್ತರ ಹಾಗೂ ಪರಿಹಾರಗಳು ದೊರೆಯಲಿವೆ.

    ಬೆಂಗಳೂರಿನ ಬಸವನಗುಡಿಯ ಶಂಕರಪುರದ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಬರುವ ಮೇ 18 ಮತ್ತು 19ರಂದು (ಶನಿವಾರ ಮತ್ತು ಭಾನುವಾರ) ಈ ಮೇಳ ಜರುಗಲಿದೆ. ವಿಜಯವಾಣಿಯು ಈ ಹಿಂದೆ 5 ಶೈಕ್ಷಣಿಕ ಮೇಳಗಳನ್ನು ಆಯೋಜಿಸಿದ್ದು, ಇದಕ್ಕೆ ತೀವ್ರ ಸ್ಪಂದನೆ ದೊರೆತಿದೆ. ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ತುಂಬ ಉಪಯುಕ್ತವಾಗಿದೆ ಎಂಬ ಶ್ಲಾಘನೆ ಎಲ್ಲೆಡೆ ಕೇಳಿಬಂದಿದೆ. ಈಗ ವಿಜಯವಾಣಿ ಆಯೋಜಿಸುತ್ತಿರುವ ಈ ಶೈಕ್ಷಣಿಕ ಮೇಳವು 6ನೇಯದ್ದಾಗಿದೆ.

    ಯುವ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅನುವಾಗುವ ನಿಟ್ಟಿನಲ್ಲಿ ಅವರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ಹಾಗೂ ಮಾರ್ಗದರ್ಶನ ಒದಗಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ. ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಮಾಹಿತಿ, ವಿವಿಧ ಕೋರ್ಸ್​ಗಳ ಬಗೆಗೆ ಮಾರ್ಗದರ್ಶನ ಹಾಗೂ ಗೊಂದಲ-ಶಂಕೆಗಳನ್ನು ನಿವಾರಿಸುವ ಧ್ಯೇಯದೊಂದಿಗೆ ಈ ಎಕ್ಸ್​ಪೋ ಆಯೋಜಿಸಲಾಗುತ್ತಿದೆ.

    ವಿವಿಧ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು, ತಮ್ಮಲ್ಲಿ ಲಭ್ಯವಿರುವ ವಿವಿಧ ಕೋರ್ಸ್​ಗಳ ಬಗೆಗೆ ಮಾಹಿತಿಯನ್ನು ಯುವ ವಿದ್ಯಾರ್ಥಿಗಳಿಗೆ ಒದಗಿಸಲಿದ್ದಾರೆ. ಇಂಜಿನಿಯರಿಂಗ್, ಮೆಡಿಕಲ್​, ಡೆಂಟಲ್​, ಎಂಬಿಎ, ಕಂಪ್ಯೂಟರ್​ ಸೈನ್ಸ್​, ಅನಿಮೇಶನ್​, ಹೋಟೆಲ್​ ಮ್ಯಾನೇಜ್​ಮೆಂಟ್​, ಆರ್ಕಿಟೆಕ್ಟರ್​, ಸ್ಪೇಸ್​ ಟೆಕ್ನಾಲಜಿ, ಚಾರ್ಟರ್ಡ್​ ಅಕೌಂಟಂಟ್​… ಹೀಗೆ ವಿವಿಧ ಶೈಕ್ಷಣಿಕ ವಿಭಾಗಗಳ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ತಜ್ಞರು ಈ ಎಕ್ಸ್​ಪೋದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನವನ್ನು ನೀಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts