More

    ಆರ್​ಸಿಬಿಗೂ 18ಕ್ಕೂ ಇದೆ ಎಲ್ಲಿಲ್ಲದ ನಂಟು; ಕಾರಣ ಕೇಳಿ ಈ ಸಲ ಕಪ್​ ನಮ್ದೆ ಎಂದ್ರು ಫ್ಯಾನ್ಸ್​

    ಬೆಂಗಳೂರು: ಮೇ 18ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಹಾಗೂ ಚೆನ್ನೈ ಸೂಪರ್​ಕಿಂಗ್ಸ್​ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಈಗಾಗಲೇ ಎರಡು ತಂಡಗಳು ಈಗಾಗಲೇ ಸಿದ್ಧತೆ ಪ್ರಾರಂಭಿಸಿದ್ದು, ಈ ಮ್ಯಾಚನ್ನು ಐಪಿಎಲ್​ನ​ ಕ್ವಾರ್ಟರ್​ ಫಿನಾಲೆ ಪಂದ್ಯ ಎಂದೇ ಬಿಂಬಿತವಾಗಿದೆ.

    ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 32 ಬಾರಿ ಮುಖಾಮುಖಿಯಾಗಿದ್ದು, ಆರ್​ಸಿಬಿ 10 ಪಂದ್ಯಗಳಲ್ಲಿ ಗೆದ್ದರೆ, ಸಿಎಸ್​ಕೆ 21 ಪಂದ್ಯಗಳಲ್ಲಿ ಗೆದ್ದಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ವಿಶೇಷ ಎಂದರೆ ಈ 32 ಪಂದ್ಯಗಳಲ್ಲಿ ಸಿಎಸ್​ಕೆ ವಿರುದ್ಧ ಮೇ 18 ರಂದು 2 ಮ್ಯಾಚ್​ಗಳು ನಡೆದಿದೆ. ಈ ಎರಡೂ ಪಂದ್ಯಗಳಲ್ಲೂ ಆರ್​ಸಿಬಿ ಜಯಭೇರಿ ಬಾರಿಸಿದೆ.

    ಈ ಲೆಕ್ಕಾಚಾರಗಳ ನಡುವೆ ಈ ಸಲ ಗೆಲುವು ಆರ್​ಸಿಬಿ ತಂಡದ್ದೇ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಇದಕ್ಕೆ ಕಾರಣ ಪಂದ್ಯ ನಡೆಯುತ್ತಿರುವುದು ಮೇ 18 ರಂದು. ಅಂದರೆ ಮೇ 18 ರಂದು ಆರ್​ಸಿಬಿ ಈವರೆಗೆ 04 ಪಂದ್ಯಗಳನ್ನಾಡಿದೆ. 2013 ರ ಮೇ 18 ರಂದು ಸಿಎಸ್​ಕೆ ವಿರುದ್ಧ ಆರ್​ಸಿಬಿ ಜಯ ಸಾಧಿಸಿತ್ತು. ಇದಾದ ಬಳಿಕ 2014 ರಲ್ಲೂ ಮೇ 18 ರಂದು ಸಿಎಸ್​ಕೆ ತಂಡಕ್ಕೆ ಸೋಲುಣಿಸುವಲ್ಲಿ ಆರ್​ಸಿಬಿ ಯಶಸ್ವಿಯಾಗಿತ್ತು. ಇನ್ನು 2016 ರ ಮೇ 18 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಜಯ ಸಾಧಿಸಿತ್ತು. 2023 ರ ಮೇ 18 ರಂದು ಎಸ್​ಆರ್​ಹೆಚ್​ ವಿರುದ್ಧ ಆರ್​ಸಿಬಿ ಗೆದ್ದು ಬೀಗಿತ್ತು.

    RCB vs CSK

    ಇದನ್ನೂ ಓದಿ: ಕತ್ತು ಸೀಳಿ ಯುವಕನ ಹತ್ಯೆ ಪ್ರಕರಣ; ಪೊಲೀಸರು ಗುಂಡೇಟಿಗೆ ಪ್ರಮುಖ ಆರೋಪಿ ಬಲಿ

    ಇದೀಗ ಮೇ 18ರಂದೇ ಆರ್​ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಹಿಂದೆ ಇದೇ ದಿನಾಂಕದಂದು ಸಿಎಸ್​ಕೆಗೆ ಆರ್​ಸಿಬಿ ಎರಡು ಬಾರಿ ಸೋಲುಣಿಸಿತ್ತು. ಹೀಗಾಗಿ ಈ ಬಾರಿಯೂ ಗೆಲುವು ನಮ್ಮದೇ ಮತ್ತು ನಾವು ಗಳು ಪ್ಲೇಆಫ್​​ ಪ್ರವೇಶಿಸುವುದು ಖಚಿತ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಮೇ 18ರಂದು ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ.

    ವಿರಾಟ್​ ಕೊಹ್ಲಿ ಮೇ 18 ರಂದು 4 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಸಿಎಸ್​ಕೆ ವಿರುದ್ಧ 56* (29), 27 (29) ರನ್ ಕಲೆಹಾಕಿದರೆ, ಪಂಜಾಬ್ ಕಿಂಗ್ಸ್ ವಿರುದ್ಧ 113 (50) ರನ್ ಬಾರಿಸಿದ್ದರು. ಹಾಗೆಯೇ ಕಳೆದ ಸೀಸನ್​ನಲ್ಲಿ ಎಸ್​ಆರ್​ಹೆಚ್​ 100 (63) ರನ್ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಮೇ 18 ರಂದು ಮತ್ತೊಮ್ಮೆ ಕಿಂಗ್ ಕೊಹ್ಲಿ ಬ್ಯಾಟ್​ನಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.

    ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 18 ರನ್​ಗಳ ಅಂತರ ಅಥವಾ ಚೇಸ್ ಮಾಡಿದರೆ 18.1 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಪ್ಲೇಆಫ್​ ಪ್ರವೇಶಿಸಬಹುದಾಗಿದೆ. ಕಾಕತಾಳೀಯ ಎಂಬಂತೆ ಇಲ್ಲೂ ಕೂಡ 18ರ ಲೆಕ್ಕಾಚಾರ ಕಾಣಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವ ನಿರೀಕ್ಷೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ನಿರೀಕ್ಷೆಯೊಂದಿಗೆ ಆರ್​ಸಿಬಿ ಈ ಬಾರಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆಯಾ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts