

ಮೇಷ: ಗಣಿಗಾರಿಕೆಯವರಿಗೆ ಉತ್ತಮ ಸಮಯ. ಕುಟುಂಬದಲ್ಲಿ ಶಾಂತಿ. ಆದಾಯಕ್ಕಿಂತ ಖರ್ಚು ಹೆಚ್ಚು ಹೊಲಿಗೆ ವೃತ್ತಿಯವರಿಗೆ ಲಾಭ. ಶುಭಸಂಖ್ಯೆ: 6
ವೃಷಭ: ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ವಿಶೇಷ ಪ್ರಗತಿ. ಇಂದು ಹೆಚ್ಚು ಧೈರ್ಯದಿಂದ ಇರುವಿರಿ. ಅನವಶ್ಯಕ ಖರ್ಚು ಬೇಡ. ಶುಭಸಂಖ್ಯೆ: 9
ಮಿಥುನ: ಉನ್ನತ ಅಧಿಕಾರ ಪ್ರಾಪ್ತಿಯಾಗುವ ಸಮಯ. ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ. ಮಕ್ಕಳಿಗೆ ಕೀರ್ತಿ ಲಭ್ಯ. ಮನೆಯಲ್ಲಿ ಸಂತಸ. ಶುಭಸಂಖ್ಯೆ: 1
ಕಟಕ: ಕಮಿಷನ್ ವ್ಯವಹಾರ ಅಬಾಧಿತವಾಗಿ ಮುಂದುವರಿಯುವುದು. ತಾಂತ್ರಿಕ ಪರಿಣಿತರಿಗೆ ಪುರಸ್ಕಾರ. ರಾಜಕಾರಣಿಗಳಿಗೆ ಅಶುಭ. ಶುಭಸಂಖ್ಯೆ: 4
ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ಎಚ್ಚರ. ಆಹಾರ ಪದಾರ್ಥದ ವ್ಯವಹಾರದಲ್ಲಿ ಜಾಗ್ರತೆ ವಹಿಸಿ. ಶುಭಸಂಖ್ಯೆ: 7
ಕನ್ಯಾ: ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ. ಲೇವಾದೇವಿ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಬರಲಿದೆ. ಮನೋವೈದ್ಯರಿಗೆ ಹೆಚ್ಚು ಕೆಲಸ. ಶುಭಸಂಖ್ಯೆ: 6
ತುಲಾ: ಜ್ವರದ ಸಮಸ್ಯೆ. ಕಚೇರಿಯಲ್ಲಿ ಮಾನಸಿಕ ಒತ್ತಡ. ಆಹಾರದ ಬಗ್ಗೆ ಎಚ್ಚರವಿರಲಿ. ವಾಹನ ಮಾಲೀಕರಿಗೆ ಅನವಶ್ಯಕ ಖರ್ಚು. ಶುಭಸಂಖ್ಯೆ: 3
ವೃಶ್ಚಿಕ: ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಟೆಕ್ನಾಲಜಿ ಪರಿಣಿತರಿಗೆ ಲಾಭವಾಗುವುದು. ರಾಜಕಾರಣಿಗಳಿಗೆ ಸ್ಥಾನಪಲ್ಲಟ. ಶುಭಸಂಖ್ಯೆ: 3
ಧನುಸ್ಸು: ಪ್ರಯತ್ನವಿದ್ದಲ್ಲಿ ಆದಾಯ. ಸಮಾಜದಲ್ಲಿ ಗೌರವ. ಮಕ್ಕಳಿಗೆ ಉನ್ನತಾಧಿಕಾರ ದೊರೆಯುತ್ತದೆ. ಸಂತಾನ ಅಪೇಕ್ಷಿತರಿಗೆ ಶುಭ. ಶುಭಸಂಖ್ಯೆ: 7
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಧಾನ್ಯ ಮಾರಾಟಗಾರರಿಗೆ ಆದಾಯ. ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ: 2
ಕುಂಭ: ಚಿತ್ರೀಕರಣಕ್ಕೆ ದೂರ ಪ್ರಯಾಣ. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗುವುದು. ದೈನಂದಿನ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 1
ಮೀನ: ಉಪನ್ಯಾಸಕರಿಗೆ ಶುಭ. ಕಲಾವಿದರಿಗೆ ಅವಕಾಶ ಕೈ ತಪ್ಪುವ ಸಾಧ್ಯತೆ. ಐಟಿ ಉದ್ಯೋಗಿಗಳಿಗೆ ಅವಕಾಶಗಳ ಬಾಗಿಲು ತೆರೆದಿದೆ. ಶುಭಸಂಖ್ಯೆ: 5