

ನವದೆಹಲಿ: ಈಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಿಶ್ವದಾದ್ಯಂತ ರೋಹಿತ್ ಪಡೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕೋಟ್ಯಂತರ ಅಭಿಮಾನಿಗಳ ನಿರಂತರ ಪ್ರಾರ್ಥನೆಯ ಫಲವಾಗಿ ಭಾರತ ಕಪ್ ಗೆದ್ದಿದ್ದು, ಇದೀಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ಗೆಸ್ಚರ್ ಎಲ್ಲರ ಹೃದಯ ಗೆಲ್ಲುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾದ ಡೈ ಹಾರ್ಡ್ ಫ್ಯಾನ್ ಎಂದೇ ಖ್ಯಾತಿ ಪಡೆದಿರುವ ಸುಧೀರ್ ಕುಮಾರ್ ಚೌಧರಿ ವಿಶ್ವದ ಯಾವುದೇ ಮೂಲೆಯಲ್ಲೂ ಭಾರತದ ಪಂದ್ಯ ನಡೆದರೂ ಅಲ್ಲಿ ಹಾಜರಾಗಿ ತಂಡವನ್ನು ಸಪೋರ್ಟ್ ಮಾಡುತ್ತಾರೆ. ಅದೇ ರೀತಿ ಈ ಬಾರಿ ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲೂ ಅವರು ಮೈದಾನದಲ್ಲಿ ಹಾಜರಾಗುವ ಮೂಲಕ ಟೀಮ್ ಇಂಡಿಯಾವನ್ನು ಸಪೋರ್ಟ್ ಮಾಡಿದ್ದರು. ಇದೀಗ ಅವರಿಗೆ ಟಿ20 ಕಪ್ ಎತ್ತಿ ಹಿಡಿಯುವ ಅವಕಾಶ ದೊರೆತ್ತಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರ;್ ಆಗುತ್ತಿದೆ. ಟೀಮ್ ಇಂಡಿಯಾ ರೋಹಿತ್ ಶರ್ಮ ಅವರ ಗೆಸ್ಚರ್ ಎಲ್ಲರ ಮನಗೆಲ್ಲುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಟೀಮ್ ಇಂಡಿಯಾದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಅವರಿಗೆ ಕೋಟ್ಯಂತರ ಜನ ಅಭಿಮಾನಿಗಳಿದ್ದು, ಈ ವ್ಯಕ್ತಿಗೆ ಸಚಿನ್ ತೆಂಡೂಲ್ಕರ್ ಅವರೇ ಸ್ವತಃ ಅಭಿಮಾನಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ನಿವೃತ್ತಿಗೂ ಮೊದಲು ಮೈದಾನದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದು ಸುಧೀರ್ ಕುಮಾರ್ ಅವರೇ. ಭಾರತ ದೇಶ - ವಿದೇಶ ಎಲ್ಲಿಯೇ ಆಡಲಿ, ಸುಧೀರ್ ಹಾಜರಿ ಖಂಡಿತ ಇರುತ್ತದೆ.
ಬಿಹಾರದ ಮುಜಾಫರ್ಪುರದವರಾದ ಇವರು ಕಡು ಬಡತನದ ಹಿನ್ನಲೆಯಿಂದ ಬಂದಿದ್ದು, ಸಚಿನ್ ತಂಡೂಲ್ಕರ್ ಕಂಡರೆ ಎಲ್ಲಿಲ್ಲದ ಪ್ರೀತಿ. ಸಚಿನ್ ಆಡುತ್ತಿದ್ದ ಪ್ರತಿ ಪಂದ್ಯವನ್ನು ವೀಕ್ಷಿಸಲು ಸುಧೀರ್ ಅಂದಿನ ಕಾಲದಲ್ಲೇ ತಮ್ಮ ಆಸ್ತಿಯನ್ನೇ ಮಾರಾಟ ಮಾಡಿದ್ದರಂತೆ. ಆ ಬಳಿಕ ಸಚಿನ್ ಅವರನ್ನು ಭೇಟಿ ಮಾಡಿದ್ದ ಸುಧೀರ್ ಅವರೋಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದರು. ಆ ಬಳಿಕ BCCI ಪ್ರತಿ ಪಂದ್ಯಕ್ಕೂ ಸುಧೀರ್ ಕುಮಾರ್ ಅವರಿಗೆ ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿತ್ತು.