ವಿಶ್ವಕಪ್​ ಗೆದ್ದಾಗ ಭಾರತದ ಆಟಗಾರರು ಭಾವುಕರಾಗಿದ್ದು ದೊಡ್ಡ ಡ್ರಾಮಾ ಎಂದ ಪಾಕ್​ ಪತ್ರಕರ್ತ; ವಿಡಿಯೋ ವೈರಲ್​

Pak Journalist
Published on

ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ 09ಣೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು, ಅನೇಕರು ತಂಡದ ಸಾಧನೆಯನ್ನು ಹಾಡಿಹೊಗಳುತ್ತಿದ್ದಾರೆ. ಆದರೆ, ಭಾರತ ಕಪ್​ ಗೆದ್ದಿರುವ ವಿಚಾರ ಯಾಕೋ ಪಾಕಿಸ್ತಾನದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಫೈನಲ್​ ಪಂದ್ಯ ಮುಗಿದು ಮೂರು ದಿನಗಳಾಗುತ್ತ ಬಂದರೂ ಇಲ್ಲಸಲ್ಲದ ಆರೋಪ, ಕ್ಷುಲಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿದೆ.

ಇದೀಗ ಪಾಕಿಸ್ತಾನದ ಪತ್ರಕರ್ತನೋರ್ವ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಭಾರತದ ಅಟಗಾರರು ನಕ್ಕಿದ್ದಕ್ಕಿಂತ ಅತ್ತಿದೆ ಜಾಸ್ತಿ. ಈ ರೀತಿ ಯಾಕೆ ಮಾಡಿದ್ದು ಎಂದು ಪ್ರಶ್ನಿಸುವ ಮೂಲಕ ಇದೀಗ ಪಾಕ್​ ಪತ್ರಕರ್ತ ತೀವ್ರ ಟೀಕೆಗೆ ಗುರಿಯಾಗಿದ್ದು, ಭಾರತೀಯರು ಕಿಡಿಕಾರಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಕೊನೆಗೂ ಭಾರತ ಪ್ರಶಸ್ತಿ ಗೆದ್ದು, ಟ್ರೋಫಿಯನ್ನೂ ತನ್ನದಾಗಿಸಿಕೊಂಡಿದೆ. ಸಂತಸವನ್ನೂ ಆಚರಿಸುವ ಬದಲು ಅಳುವುದನ್ನು ನೋಡಿದೆ. ನನಗೆ ಅವರ ಮುಖದಲ್ಲಿ ಕಪ್​ ಗೆದ್ದ ಖುಷಿ ಕಾಣುತ್ತಿರಲಿಲ್ಲ. ಅವರುಅಳುವ ರೀತಿ ನಾಟಕವಾಡುತ್ತಿದ್ದರು. ಇದು ನನಗೆ ಅಷ್ಟಾಗಿ ಸರಿ ಎನ್ನಿಸಲಿಲ್ಲ ಎಂದು ಪಾಕಿಸ್ತಾನ ಪತ್ರಕರ್ತ ವೈರಲ್ ಆಗಿರುವ ವಿಡಿಯೋದಲ್ಲಿ ಹೇಳುತ್ತಿರುವುದನ್ನು ನೋಡಬಹುದಾಗಿದೆ.

ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಭಾರತದ ಅಭಿಮಾನಿಗಳು ಪತ್ರಕರ್ತನ ಹೇಳಿಕೆಯನ್ನು ಖಂಡಿಸಿದ್ದು, ಈ ರೀತಿಯ ಹೇಳಿಕೆಗಳನ್ನು ನಾಚಿಕೆಯಿಲ್ಲದ ಪಾಕಿಸ್ತಾನದವರೇ ನೀಡುತ್ತಾರೆ. ವಿಶ್ವಕಪ್​ನಲ್ಲಿ ಭಾರತದ ಅಜೇಯ ಓಟವನ್ನು ಸಹಿಸಿಕೊಳ್ಳಲಾರದ ನೀವು ಈ ರೀತಿಯ ಹೇಳಿಕೆಗಳನ್ನು ಕೊಡುವುದು ಸಹಜ. ಕ್ರಿಕೆಟ್​ ಶಿಶುಗಳ ಎದುರು ಸೋತಿರುವ ನೀವು ಭಾರತದ ಬಗ್ಗೆ ಮಾತನಾಡುವ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net