

ಮೇಷ: ವೃತ್ತಿಯಲ್ಲಿ ವಿಶೇಷ ಸಾಧನೆಗೆ ಅವಕಾಶಗಳ ಸಾಧ್ಯತೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಚಿತ್ತ ಸೌಖ್ಯ ಲಭ್ಯ. ಕಣ್ಣಿನ ಬಾಧೆ ಕಾಡಬಹುದು. ಶುಭಸಂಖ್ಯೆ: 8
ವೃಷಭ: ಮಕ್ಕಳೊಂದಿಗೆ ಭಿನ್ನಾಭಿಪ್ರಾಯ. ವೃತ್ತಿಯಲ್ಲಿ ಬದಲಾವಣೆ. ವ್ಯಾಪಾರಿಗಳಿಗೆ ಅಧಿಕ ಲಾಭ. ಪ್ರಭಾವಿ ವ್ಯಕ್ತಿಗಳೊಂದಿಗೆ ಪ್ರವಾಸ. ಶುಭಸಂಖ್ಯೆ: 3
ಮಿಥುನ: ಹಣ ಕಳೆದುಕೊಳ್ಳುತ್ತೀರಿ. ಹೃದಯಸಂಬಂಧಿ ಅನಾರೋಗ್ಯ. ನಿವೇಶನ ಖರೀದಿ ನಿರ್ಧಾರ. ಐಟಿ ಉದ್ಯೋಗಿಗಳಿಗೆ ಬದಲಾವಣೆ. ಶುಭಸಂಖ್ಯೆ: 5
ಕಟಕ: ಅಧ್ಯಾಪಕರಿಗೆ ವಿಶೇಷ ಸ್ಥಾನಮಾನ. ಹಿರಿಯರಿಂದ ಪ್ರಶಂಸೆ. ವ್ಯಾಪಾರಸ್ಥರಿಗೆ ತಗಾದೆ. ಪತ್ನಿ ಸಮೇತ ಶುಭ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 7
ಸಿಂಹ: ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ನಿರಾಸೆ. ಹಿರಿಯರ ಮಾರ್ಗದರ್ಶನ. ಅನಾರೋಗ್ಯದಿಂದ ಧನ ಹಾನಿ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 9
ಕನ್ಯಾ: ಸ್ಥಿರಾಸ್ತಿ ಪ್ರಾಪ್ತಿ. ಬಂಧು ಮಿತ್ರರಲ್ಲಿ ಆತ್ಮೀಯತೆ. ವಿದ್ಯಾರ್ಥಿಗಳಿಗೆ ಹಣಕಾಸಿನ ಸಮಸ್ಯೆ. ಮಗಳ ವೈವಾಹಿಕ ಜೀವನದಲ್ಲಿ ಮನಸ್ತ್ತಾಪ. ಶುಭಸಂಖ್ಯೆ: 4
ತುಲಾ: ಹಣಕಾಸಿನ ಸಮೃದ್ಧಿ. ಧೈರ್ಯ ಸಾಹಸಗಳಿಂದ ಸಾಧನೆ. ಸಹೋದರರಲ್ಲಿ ಬಾಂಧವ್ಯ ಭೂಲಾಭ. ಬುದ್ಧಿಶೂನ್ಯತೆಯಿಂದ ಹಾನಿ. ಶುಭಸಂಖ್ಯೆ: 1
ವೃಶ್ಚಿಕ: ಹಣ, ವಿದ್ಯೆ, ಕುಟುಂಬದ ವಿಚಾರದಲ್ಲಿ ಅಸಮಾಧಾನ. ಹುಂಬತನ ಬೇಡ. ಸಹೋದರರಲ್ಲಿ ವಿವಾದ. ಸೇವಕರಿಂದ ಸಹಾಯ. ಶುಭಸಂಖ್ಯೆ: 6
ಧನುಸ್ಸು: ದೇಹಕ್ಕೆ ಪೆಟ್ಟು ಬೀಳುವ ಸಾಧ್ಯತೆ. ದೃಷ್ಟಿ ಸಂಬಂಧಿ ತೊಂದರೆ ಭಾದಿಸೀತು. ಆರ್ಥಿಕ ಅಡಚಣೆ. ಭೂಮಿ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 3
ಮಕರ: ತೊಡಕುಗಳು ಎದುರಾದಾವು. ಸಕ್ಕರೆ ಕಾಯಿಲೆ ಇರುವವರು ಎಚ್ಚರಿಕೆಯಿಂದ ಇರಿ. ಅಧಿಕಾರ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಹಿನ್ನಡೆ. ಶುಭಸಂಖ್ಯೆ: 9
ಕುಂಭ: ವೃತ್ತಿಪರರಿಗೆ ಧನಲಾಭ. ಮಹಿಳೆಯರಿಗೆ ಹೊಸ ಅಧಿಕಾರ. ಹೆಚ್ಚಿನ ಒತ್ತಡಗಳಿಂದ ಉದ್ಯೋಗದಲ್ಲಿ ಶ್ರಮ. ಮಾತಿನಿಂದ ಕಲಹ. ಶುಭಸಂಖ್ಯೆ: 8
ಮೀನ: ಉದ್ಯೋಗದಲ್ಲಿ ವಿಶೇಷ ಮಾನ್ಯತೆ. ಆಡಳಿತಾತ್ಮಕವಾಗಿ ಲಾಭ. ಜನಾನುರಾಗಕ್ಕೆ ಪಾತ್ರರಾಗುವಿರಿ. ಕೃಷಿಯಲ್ಲಿ ಅಧಿಕ ಲಾಭ. ಶುಭಸಂಖ್ಯೆ: 5