More

    ಬಿಗ್​ಬಾಸ್​ ಸೀಸನ್​ 10; ಇವರೇ ನೋಡಿ ಫಿನಾಲೆ ಪ್ರವೇಶಿಸುತ್ತಿರುವ ಮೊದಲ ಸ್ಫರ್ಧಿ

    ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ.

    ಆದರೆ, ಈವರೆಗೂ ಯಾವ ಸ್ಫರ್ಧಿಗೂ ಫಿನಾಲೆಗೆ ಹೋಗುವಂತಹ ನೇರ ಅವಕಾಶವನ್ನು ಬಿಗ್​ಬಾಸ್​ ನೀಡಿರಲಿಲ್ಲ. ಅದಕ್ಕಾಗಿಯೇ ಸ್ಫರ್ಧಿಗಳಿಗೆ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಿದ್ದ ಬಿಗ್​ಬಾಸ್​ ಯಾರು ಅತಿ ಹೆಚ್ಚು ಅಂಕ ಪಡೆಯುತ್ತಾರೋ ಅವರು ನೇರವಾಗಿ ಫಿನಾಲೆಗೆ ಪ್ರವೇಶ ಪಡೆಯಲಿದ್ದಾರೆ ಎಂದು ಘೋಷಿಸಿದ್ದರು.

    ಅದರಂತೆ ವಾರ ಪೂರ್ತಿ ನಡೆದ ಟಾಸ್ಕ್​ನಲ್ಲಿ ನಾಲ್ವರು ಸದಸ್ಯರು ಆಡಬೇಕಿತ್ತು. ಸರದಿ ಬಂದಾಗ ಪ್ರತಿ ಆಟಗಾರ ಕೂಡ ತನ್ನೊಂದಿಗೆ ಆಡಲು ಮೂವರು ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗೆ ಎಂಟು ರೌಂಡ್​ಗಳಲ್ಲಿ ಆಟಗಳನ್ನು ಆಡಿಸಲಾಗಿತ್ತು. ಟಾಸ್ಕ್​ನ ಅಂತ್ಯದಲ್ಲಿ ಯಾರು ಹೆಚ್ಚು ಅಂಕ ಪಡೆಯುತ್ತಾರೋ ಅವರು ಫಿನಾಲೆಗೆ ನೇರ ಪ್ರವೇಶ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

    Sangeetha pratap

    ಇದನ್ನೂ ಓದಿ: ನಾನು ರಾಮಮಂದಿರಕ್ಕೆ ಈಗ ಹೋಗಲ್ಲ, ಪುರಸೊತ್ತು ಸಿಕ್ಕಾಗ ಹೋಗ್ತೇನೆ: ಸಿಎಂ ಸಿದ್ದರಾಮಯ್ಯ

    ಇಂದು ಬೆಳಗ್ಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಡ್ರೋನ್​ ಪ್ರತಾಪ್​ ಅತಿ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ತೊರಿಸಲಾಗಿತ್ತು. ಇದರ ಜೊತೆಗೆ ಸಂಗೀತಾ ಅವರನ್ನು ಪ್ರತಾಪ್​ ಟಾಸ್ಕ್​ನಿಂದ ಹೊರಗಿಟ್ಟ ಕಾರಣ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಂಗೀತಾ ಫಿನಾಲೆಗೆ ಬರುವುದಿಲ್ಲ ಎನ್ನುವಂತೆ ಬಿಂಬಿಸಲಾಗಿದೆ. ಆದರೆ, ಸಿಕ್ಕಿರುವ ಮಾಹಿತಿ ಪ್ರಕಾರ ಫಿನಾಲೆಗೆ ಹೋಗುವ ಟಿಕೆಟ್ ಅನ್ನು ಸಂಗೀತಾ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

    280 ಅಂಕ ಗಳಿಸಿರುವ ಪ್ರತಾಪ್​ ಮೊದಲ ಸ್ಥಾನದಲ್ಲಿದ್ದು, 260 ಅಂಕ ಗಳಿಸುವ ಮೂಲಕ ಸಂಗೀತಾ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಟ್ವಿಸ್ಟ್​ ಒಂದನ್ನು ನೀಡಿರುವ ಬಿಗ್​ಬಾಸ್​ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​ ಜೊತೆಗೆ ಟಿಕೆಟ್​ ಟು ಫಿನಾಲೆ ಟಾಸ್ಕ್​ ಅನ್ನು ಜೋಡಿಸಿದ್ದಾರೆ. ಈ ಟಾಸ್ಕ್​ನಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಸಂಗೀತಾ ಅವರು ನೇರವಾಗಿ ಫಿನಾಲೆಗೆ ಪ್ರವೇಶ ಪಡೆದಿದ್ಧಾರೆ ಎಂದು ತಿಳಿದು ಬಂದಿದೆ. ಆದರೆ, ಸಂಗೀತಾ ಫಿನಾಲೆಗೆ ಟಿಕೆಟ್​ ಪಡೆದಿದ್ದಾರಾ ಎಂದು ಸಂಜೆ ಪ್ರಸಾರವಾಗುವ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts