ಮಾನವೀಯತೆ ಮರೆತ ಯುವಕರು; ಮೂಕಪ್ರಾಣಿಯನ್ನು ಹೊಡೆದು ಕೊಂದರು

WB Dog Attack
Published on

ಕಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ಭರದಲ್ಲಿ ಮಾನವೀಯತೆ ಮರೆತು ಅಮಾನವೀಯ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ನಾವು ನೋಡಿರುತ್ತೇವೆ. ಇದೀಗ ಇದೇ ರೀತಿಯ ಘಟನೆಯೊಂದು ಪಶ್ಚಿಮ ಬಂಗಳಾದಲ್ಲಿ ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದ್ದು, ದುಷ್ಕೃತ್ಯ ಎಸಗಿದವರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಆದರೆ, ಈವರೆಗೆ ಆರೋಪಿಗಳನ್ನು ಬಂಧಿಸದೆ ಇರುವುದು ಆಕ್ರೋಶಕ್ಕೆ ಗುರಿಯಾಗಿದೆ. ಘಟನೆ ಪಶ್ಚಿಮ ಬಂಗಾಳದ ಯಾವ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದು ಈವರೆಗೆ ತಿಳಿದು ಬಂದಿಲ್ಲ.

ವೈರಲ್​ ಆಗಿರುವ ವಿಡಿಯೋದಲ್ಲಿ ಪುಂಡರ ಗುಂಪೊಂದು ಬೀದಿ ನಾಯಿ ಮತ್ತು ಅದರ ಮರಿಗಳನ್ನು ಬಲೆಯೊಂದರಲ್ಲಿ ಬಂಧಿಸಿ ನಿರ್ದಯವಾಗಿ ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ನಾಯಿಗಳನ್ನು ಅಮಾನುಷವಾಗಿ ಜೋರಾಗಿ ನಗುತ್ತಾ ಥಳಿಸುತ್ತಿರುವುದನ್ನು ನೋಡುತ್ತಿರುವ ಸಾರ್ವಜನಿಕರು ಅದನ್ನು ಬಿಡಿಸಲು ಯಾರು ಮುಂದೆ ಬಾರದಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ವಿಡಿಯೋ ವೈರಲ್​ ಆದ ಬಳಿಕ ಪಶ್ಚಿಮ ಬಂಗಾಳದ ಸಂಕ್ರೈಲ್ ಪೊಲೀಸ್​ ಠಾಣೆಯಲ್ಲಿ ಭಾರತ ದಂಡ ಸಂಹಿತೆ (IPC Section) 428 ಮತ್ತು 429 ಮತ್ತು ಪಿಸಿಎ ಆಕ್ಟ್ 11 ರ ಅಡಿಯಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ FIR ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net