ಈ ರಾಶಿಯವರಿಗಿಂದು ವಿಪರೀತ ಖರ್ಚು, ಅಪಘಾತದಿಂದ ಆಘಾತ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹೆಂಡತಿ-ಮಕ್ಕಳಿಗೆ ಅನಾರೋಗ್ಯ. ಭೋಜನ ಕೂಟಕ್ಕೆ ವಿಪರೀತ ಖರ್ಚು, ಅಪಘಾತದಿಂದ ಆಘಾತ. ಶುಭಸುದ್ದಿ ಕೇಳುವಿರಿ. ಶುಭಸಂಖ್ಯೆ: 9

ವೃಷಭ: ಮಾನಸಿಕ ಭಯ ಕಾಡಲಿದೆ. ಕೈಗೊಂಡ ಕೆಲಸಗಳು ಯಶಸ್ವಿಯಾಗುತ್ತವೆ. ಆಸ್ತಿ ವಿಚಾರದ ತೀರ್ವನಗಳಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ: 4

ಮಿಥುನ: ಮಗಳ ವಿವಾಹ ವಿಷಯದಲ್ಲಿ ಮನೋವ್ಯಥೆ. ಹಣ್ಣು-ತರಕಾರಿಗಳ ವ್ಯಾಪಾರದಲ್ಲಿ ಲಾಭ. ರೆಸ್ಟೋರೆಂಟ್ ಮಾಲೀಕರಿಗೆ ನಷ್ಟ. ಶುಭಸಂಖ್ಯೆ: 1

ಕಟಕ: ಪಾಲುದಾರಿಕೆ ಒಪ್ಪಂದದಲ್ಲಿ ಎಚ್ಚರ ವಹಿಸಬೇಕು. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಬಂಧುಗಳಿಂದ ಕಿರಿಕಿರಿ ಉಂಟಾಗಬಹುದು. ಶುಭಸಂಖ್ಯೆ: 9

ಸಿಂಹ: ಮೀನುಗಾರರಿಗೆ ಲಾಭ. ಕಾರ್ಖಾನೆ ಮಾಲೀಕರು ಮತ್ತು ಕೆಲಸಗಾರರ ನಡುವೆ ಬಾಂಧವ್ಯ ವೃದ್ಧಿ. ಸಹೋದರರಿಂದ ಕಿರಿಕಿರಿ. ಶುಭಸಂಖ್ಯೆ: 6

ಕನ್ಯಾ: ಸಾಲದ ಸಮಸ್ಯೆ ನಿವಾರಣೆಯಾಗಲಿದೆ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 1

ತುಲಾ: ಆಸ್ತಿ ವಿಚಾರದ ಮಾತುಕತೆ ಮುಂದುವರಿಯಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ನೀರಿನಿಂದ ಅಪಾಯ. ಶುಭಸಂಖ್ಯೆ: 8

ವೃಶ್ಚಿಕ: ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿ. ಬಟ್ಟೆ ವ್ಯವಹಾರದಿಂದ ನಷ್ಟ. ರಾಜಕೀಯದಲ್ಲಿ ಇರುವವರು ಶತ್ರುಗಳ ಬಗ್ಗೆ ಎಚ್ಚರ ವಹಿಸಿ. ಶುಭಸಂಖ್ಯೆ: 3

ಧನಸ್ಸು: ವ್ಯರ್ಥ ಕಾಲಹರಣ. ಆಸ್ತಿ ಸಂಬಂಧ ವಿವಾದದಲ್ಲಿ ಜಯ. ಮಕ್ಕಳ ಕುರಿತಾದ ನಿರ್ಧಾರ ಕೈಗೊಳ್ಳುವಲ್ಲಿ ದಂಪತಿ ನಡುವೆ ವಿರಸ. ಶುಭಸಂಖ್ಯೆ: 4

ಮಕರ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ಆಹಾರ ಧಾನ್ಯಗಳ ವ್ಯಾಪಾರ ಲಾಭದಾಯಕ. ಶುಭಸಂಖ್ಯೆ: 3

ಕುಂಭ: ಅಮೂಲ್ಯ ವಸ್ತು ಪ್ರಾಪ್ತಿಯಾಗಿ ಸಂತಸ. ಪರರಿಗೆ ಉಪಕಾರ ಮಾಡುವಿರಿ. ದುಷ್ಟ ಜನರಿಂದ ದೂರವಿರಿ. ಸ್ವಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 5

ಮೀನ: ಸ್ನೇಹಿತರಿಂದ ಆಪತ್ತಿನಲ್ಲಿ ಸಹಕಾರ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಬಿರುಕು. ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚು ಒತ್ತಡ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net