ನವದೆಹಲಿ: ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದು ಒಂದು ವಿಚಾರವಾದರೆ, ಆ ಸ್ಥಾನವನ್ನು ನಾವು ಭದ್ರಪಡಿಸಿಕೊಂಡು ಹೋಗುವುದು ಮತ್ತೊಂದು ವಿಚಾರವಾಗಿದೆ. ಈ ವಿಚಾರಕ್ಕೆ ಬರುವುದಾದರೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತಾರೆ. ಈ ವಿಚಾರದಲ್ಲಿ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೊರತಾಗಿಲ್ಲ. ರಾಷ್ಟ್ರೀಯ ತಂಡದ ಪರ ಪದರ್ಪಾಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಕ್ರಿಕೆಟಿಗ ಆ ಬಳಿಕ ಸ್ಥಾನ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆದರೆ, ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ (MS Dhoni) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಮನೋಜ್ ತಿವಾರಿ, ನಾನು ತಂಡದಲ್ಲಿ ಸ್ಥಾನ ಪಡೆದಾಗ ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕರಾಗಿದ್ದರು. ನಾಯಕನ ಯೋಜನೆಗೆ ಅನುಗುಣವಾಗಿ ಓಡುತ್ತದೆ. ರಾಜ್ಯ ತಂಡಗಳಲ್ಲಿ ವಿಷಯಗಳು ವಿಭಿನ್ನವಾಗಿವೆ ಆದರೆ ಟೀಮ್ ಇಂಡಿಯಾದಲ್ಲಿ ನಾಯಕನ ಬಗ್ಗೆ ಎಲ್ಲವೂ ಇರುತ್ತದೆ. ಹಾಗೆ ನೋಡಿದರೆ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಮೊಹಮ್ಮದ್ ಅಜರುದ್ಧೀನ್, ಸೌರವ್ ಗಂಗೂಲಿ ಕಾಲದಲ್ಲೂ ಇದು ನಡೆದಿತ್ತು. ಕಟ್ಟುನಿಟ್ಟಾದ ಆಡಳಿತಗಾರನು ಬಂದು ನಿಯಮಗಳನ್ನು ಮಾಡದ ಹೊರತು ಇದು ಮುಂದುವರಿಯುತ್ತಲೇ ಇರುತ್ತದೆ.
ಪ್ರಸ್ತುತ ನೀವು ಅಜಿತ್ ಅಗರ್ಕರ್ ಅವರನ್ನು ನೋಡುವುದಾದರೆ ಕೋಚ್ನೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಸಹ ಅವರು ಕಠಿಣವಾದ ನಿಯಮಗಳನ್ನು ತೆಗೆದುಕೊಳ್ಳುತ್ತಾರೆ. ನಾನು ಶತಕ ಗಳಿಸಿದ ಬಳಿಕ 14 ಪಂದ್ಯಗಳಿಂದ ನನ್ನನ್ನು ಕೈ ಬಿಡಲಾಗಿತ್ತು. ದಶಕ ಕಳೆದರೂ ನನಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಈಗಲೂ ನಾನು ಉತ್ತರವನ್ನು ಎದುರು ನೋಡುತ್ತಿದ್ದೇನೆ. ಆಗಿನ ಸಮಯದಲ್ಲಿ ಏನನಾದರೂ ನಾನು ಕೇಳಿದ್ದರೆ ನನ್ನ ವೃತ್ತಿಜೀವನ ಯಾವ ತಿರುವು ಪಡೆದುಕೊಳ್ಳುತ್ತಿತ್ತು ಎಂದು ಹೇಳಲು ಸಾಧ್ಯವಿಲ್ಲ.
ನಾನು ಪದರ್ಪಾಣೆ ಮಾಡಿದ ಸಮಯದಲ್ಲೇ ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮ ಕೂಡ ತಂಡದಲ್ಲಿದ್ದರು. ಅವರು ಹೆಚ್ಚಿನ್ ರನ್ ಗಳಿಸುತ್ತಿರಲಿಲ್ಲ. ನಾನು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೂ ಕೂಡ ನನಗೆ ಅವಕಾಶ ಸಿಗಲಿಲ್ಲ. ನಿವೃತ್ತಿ ಪಡೆಯಲು ಚಿಂತಿಸಿದೆ ಕೌಟುಂಬಿಕ ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದು ಮನೋಜ್ ತಿವಾರಿ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.
ಗುಂಡು ಹಾರಿಸದೆ ಬಿಡಲ್ಲ… ಹಲ್ಲೆಗೆ ಸಂಬಂಧಿಸಿದಂತೆ ದರ್ಶನ್ ಫ್ಯಾನ್ಸ್ಗೆ ಎಚ್ಚರಿಸಿದ Jagadish