ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಬಿಗ್ಬಾಸ್ 11ರ ಮಾಜಿ ಸ್ಫರ್ಧಿ ಜಗದೀಶ್ (Jagadish) ಆಗಿಂದಾಗೆ ತಮ್ಮ ರಿಯಾಕ್ಷನ್ ವಿಡಿಯೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಗುರುವಾರ (ಜನವರಿ 23) ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಗದೀಶ್ ನಟ ದರ್ಶನ್ ಫ್ಯಾನ್ಸ್ಗೆ ಎಚ್ಚರಿಕೆ ನೀಡಿದ್ದಾರೆ.
ಜನವರಿ 23ರಂದು ಜಗದೀಶ್ (Jagadish) ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಲೈವ್ ಬಂದು ಸ್ಪಷ್ಟನೆ ನೀಡಿರುವ ಜಗದೀಶ್ ನಮ್ಮ ಮನೆಯ ಬಳಿ ರೋಡ್ ಬ್ಲಾಕ್ ಮಾಡಲಾಗಿತ್ತು. ಈ ಸಂಬಂಧ ನಾನು ಪೊಲೀಸರಿಗೆ ದೂರು ನೀಡಿದ್ದೆ. ಅಣ್ಣಮ ದೇವಿಯನ್ನು ಕೂರಿಸಿರುವುದರಿಂದ ರೋಡ್ ಬ್ಲಾಕ್ ಆಗಿತ್ತು. ಈ ಸಂಬಂಧ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ಜಗದೀಶ್ ರಿಪ್ಲೈ
ಇತ್ತ ಮತ್ತೊಂದು ವಿಡಿಯೋ ಮಾಡಿರುವ ಜಗದೀಶ್ (Jagadish), ಒಬ್ಬನ ಮೇಲೆ 40 ಜನರ ಕಳಿಸಿದ್ದೀಯಂತಲ್ಲೋ ದರ್ಶನ. ನಿನ್ನ ಗಲೀಜ್ ಫ್ಯಾನ್ಸ್ ಹಾಗೆ ಹೇಳುತ್ತಿದ್ದಾರೆ. ಅದಕ್ಕೆ ಕೇಳುತ್ತಾ ಇದ್ದೇನೆ. ಗನ್ ಮ್ಯಾನ್ ಇರಲಿಲ್ಲ. ಇದ್ದಿದ್ರೆ ಗುಂಡಿನ ಸದ್ದು ಕೇಳಬೇಕಿತ್ತು. ನಮ್ಮ ಪ್ರಾಣ, ಆಸ್ತಿಗೆ ಕುತ್ತು ಬಂದರೆ ಗುಂಡು ಹಾರಿಸಲೇಬೇಕು. ನನಗೂ ಗನ್ ಲೈಸೆನ್ಸ್ ಬರುತ್ತದೆ. ಪ್ರಾಣಕ್ಕೆ ತೊಂದರೆ ಕೊಡೋಕೆ ಬಂದರೆ ಸುಮ್ಮನೆ ಇರಲ್ಲ ಎಂದು ಎಚ್ಚರಿಸಿದ್ಧಾರೆ.
ದರ್ಶನ್ನ ಕೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಿ. ಈಗಲೇ ಫೀಲಿಂಗ್ನಲ್ಲಿದ್ದಾನೆ. 40 ಜನರಲ್ಲಿ ಯಾರು ನಿಮ್ಮ ಹುಡುಗರು ಅಂತು ಹೇಳಿ. ಸ್ವಲ್ಪ ಎಚ್ಚರವಾಗಿರಿ. ನಿನ್ನೆ ಗುಂಡಿನ ಶಬ್ದ ಕೇಳಬೇಕಿತ್ತು. ಹೇಗೋ ಬಚಾವ್ ಆದರು. ನೀವು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡರೂ ತೊಂದರೆ ಇಲ್ಲ. ಹಾಗೆಲ್ಲ ಮಾಡಬೇಡಿ ಫ್ಯಾನ್ಸ್. ದರ್ಶನ್ನ ಸಿಕ್ಕಾಕಿಸಬೇಡಿ. ಹೊಡೆದವರ ಹೆಸರು ಹೇಳೋಕೆ ಹೇಳು. ಮತ್ತೆ ಜೈಲಿಗೆ ಹೋಗೋಕೆ ದರ್ಶನ್ಗೆ ಇಷ್ಟ ಇಲ್ಲ. ಟ್ರೋಲ್ ಮಾಡೋಕೆ ನನಗೂ ಬರುತ್ತದೆ.
ನನಗೂ ಗನ್ ಲೈಸೆನ್ಸ್ ಬರುತ್ತೆ. ಗುಂಡು ಹಾರಿಸದೆ ಬಿಡಲ್ಲ. ಪ್ರಾಣಕ್ಕೆ ತೊಂದ್ರೆ ಆದ್ರೆ ಸುಮ್ಮನೆ ಇರಲ್ಲ. ದರ್ಶನ್ ಈಗಲೇ ಫೀಲಿಂಗ್ನಲ್ಲಿ ಇದ್ದಾನೆ. ಯಾಕೆ ಅವನನ್ನು ಮಧ್ಯಕ್ಕೆ ತರ್ತೀರಾ, ಆಮೇಲೆ ಮತ್ತೆ ಅವನು ಬೇಲ್ ತೆಗೆದುಕೊಳ್ಳಲು ಓಡಾಡಬೇಕಾಗುತ್ತೆ. ದರ್ಶನ್ ಫ್ಯಾನ್ಸ್ ಎಂದುಕೊಂಡು ಅವನಿಗೇ ಗುನ್ನ ಇಡ್ತಿದ್ದಾರೆ. ದರ್ಶನ್ ಅಭಿಮಾನಿಗಳು ಅನ್ನೋರು ಮೊದಲು ಮನೆಯಲ್ಲಿ ಹೇಳಿ ಬನ್ನಿ, ಇನ್ಸುರೆನ್ಸ್ ಮಾಡಿಸಿಕೊಂಡು ಬನ್ನಿ ಎಂದು ಎಂದು ಜಗದೀಶ್ (Jagadish) ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಸರಿಯಾದ ಸಮಯಕ್ಕೆ ಸಾಲ ಕಟ್ಟದಿದ್ದಕ್ಕೆ ಮಹಿಳೆಯ ತಲೆ ಬೋಳಿಸಿ ಹಲ್ಲೆ ; Womens SHG ವಿರುದ್ಧ ಕೇಳಿಬಂತು ಗಂಭೀರ ಆರೋಪ
ಮಹಾಕುಂಭಮೇಳದಲ್ಲಿ Dubai Sheikh ವೇಷ ಧರಿಸಿ ರೀಲ್ಸ್ ಮಾಡಿದ ವ್ಯಕ್ತಿ; ಮುಂದೇನಾಯ್ತು ನೀವೇ ನೋಡಿ