ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿಸಿರೋ Chi Chi Chire Nani ಹಾಡಿನ ಅರ್ಥವೇನು? ಮೊದಲು ಹಾಡಿದ್ದೆಲ್ಲಿ? ಇಲ್ಲಿದೆ ಇಂಟ್ರೆಸ್ಟಿಂಗ್​ ಮಾಹಿತಿ…

Viral Reels
Published on

ನವದೆಹಲಿ: ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಯಾವ ವಿಚಾರ ಯಾವಾಗ ಟ್ರೆಂಡ್​ ಆಗುತ್ತದೆ ಎಂಬುದನ್ನು ಯಾರು ಊಹಿಸಲು ಸಾಧ್ಯವಿಲ್ಲ. ಕನ್ನಡ ಸೇರಿದಂತೆ ಬೇರೆ ಭಾಷೆಯ ಹಾಡುಗಳು ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗುತ್ತಿರುತ್ತವೆ. ಈ ಹಿಂದೆ ಕಚ್ಚಾ ಬಾದಾಮ್ ಸೇರಿದಂತೆ ಅನೇಕ ಹಾಡುಗಳು ವೈರಲ್​ ಆಗಿದ್ದವು. ಅದನ್ನು ಆಲ್ಬಮ್​ ಸಾಂಗ್​, ಸಿನಿಮಾದಲ್ಲೂ ಕೂಡ ಬಳಕೆ ಮಾಡಲಾಗಿತ್ತು. ಇದೀಗ ಛೀ ಛೀ ಛೀರೆ ನೂನಿ (Chi Chi Chire Nani) ಎಂಬ ಹಾಡು ವೈರಲ್​ ಆಗುತ್ತಿದ್ದು, ಹೊಸ ಟ್ರೆಂಡ್​ ಸೃಷ್ಟಿಸಿದೆ.

2025ರ ಆರಂಭದಿಂದಲೂ ಈ ಛೀ ಛೀ ಛೀರೆ ನೂನಿ (Chi Chi Chire Nani) ಎಂಬ ಹಾಡು ಸಖತ್​ ವೈರಲ್​ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್​ ಸೃಷ್ಟಿಸಿದೆ. ಯೂಟ್ಯೂಬ್​ನಲ್ಲಿ ಮಿಲಿಯನ್​ಗೂ ಅಧಿಕ ಬಾರಿ ಈ ವಿಡಿಯೋವನ್ನು ಜನರು ವೀಕ್ಷಿಸಿದ್ದು, ಸದ್ಯ ಈ ಹಾಡು ವೈರಲ್​ ಆಗುತ್ತಿದೆ. ಈ ಹಾಡು ಒಡಿಯಾ ಭಾಷೆಯದ್ದಾಗಿದ್ದು, ಇದರ ಅರ್ಥ ಏನೆಂಬುದನ್ನು ಹಲವರು ಹುಡುಕಾಡುತ್ತಿದ್ದಾರೆ.

ಒಡಿಶಾ ಸಿನಿಮಾ ಹಾಗೂ ಧಾರಾವಾಹಿ ನಿರ್ದೇಶಕ ಮಹಾರಂಜನ್ ನಾಯಕ್ ಅವರು ನಿರ್ದೇಶಿಸಿ ಎಡಿಟ್ ಮಾಡಿರೋ ಈ ಆಲ್ಬಂ ಹಾಡನ್ನು ಸತ್ಯಾ ಅಧಿಕಾರಿ ಎನ್ನುವರು ಬರೆದು, ಹಾಡಿದ್ದಾರೆ. ಬಿಭೂತಿ ಬಿಸ್ವಾಲ್​ ಎಂಬುವವರು ನಟಿಸಿದ್ದಾರೆ. ಈ ಹಾಡಿನ ಅರ್ಥ ತಿಳಿದುಕೊಳ್ಳುವುದಾದರೆ ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಆಗದಿದ್ದಾಗ ಬೇಸರದಲ್ಲಿ ಈ ಹಾಡನ್ನು ಹಾಡುತ್ತಾನೆ. ಸದ್ಯ ಈ ಹಾಡು ಸಖತ್​ ವೈರಲ್​ ಆಗಿದೆ.

ಇನ್ನೂ ಈ ಬಗ್ಗೆ ಮಾತನಾಡಿರುವ ನಟ ಬಿಭೂತಿ ಬಿಸ್ವಾಲ್​ ಸಂತಸ ವ್ಯಕ್ತಪಡಿಸಿದ್ದು, ಛೀ ಛೀ ಛೀರೆ ನೂನಿ (Chi Chi Chire Nani) ಹಾಡಿನ ಸಂಪೂರ್ಣ ಯಶಸ್ಸು ದಿವಂಗತ ಗಾಯಕ ಮತ್ತು ಗೀತರಚನೆಕಾರ ಸತ್ಯನಾರಾಯಣ ಅಧಿಕಾರಿ ಅವರಿಗೆ ಸಲ್ಲುತ್ತದೆ. ಸುಮಾರು 20 ವರ್ಷಕ್ಕೂ ಅಧಿಕ ಸಮಯದ ಬಳಿಕ ಈ ಹಾಡು ವೈರಲ್​ ಆಗುತ್ತಿದ್ದು, ಸಂತೋಷವಾಗುತ್ತಿದೆ ಎಂದು ನಟ ಬಿಭೂತಿ ಬಿಸ್ವಾಲ್ ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net