blank

ಒಂದು ಕಾಲದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಹಾಟ್​ ಬೆಡಗಿ ಈಗ ಸನ್ಯಾಸಿ! ಮಹಾಕುಂಭಮೇಳದಲ್ಲಿ ಗಮನಸೆಳೆಯುತ್ತಿರುವ ನಟಿಯ ವಿವಾದ ಒಂದೆರಡಲ್ಲ

Mamata Kulkarni

ಪ್ರಯಾಗ್​ರಾಜ್​: ಜನವರಿ 13ರಿಂದ ಪ್ರಯಾಗ್​ರಾಜ್​ನಲ್ಲಿ ಆರಂಭವಾಗಿರುವ ಮಹಾಕುಂಭಮೇಳವು ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದೆ ಎಂದರೆ ತಪ್ಪಾಗಲಾರದು. ಪ್ರತಿನಿತ್ಯ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಿದ್ದು, ಹೊಸ ದಾಖಲೆಯನ್ನೇ ಬರೆದಿದೆ. ಪ್ರಮುಖವಾಗಿ ನಾಗಾಸಾಧುಗಳು ಹಾಗೂ ವಿದೇಶಿಗರು ಹೆಚ್ಚು ಗಮನವನ್ನು ಸೆಳೆಯುತ್ತಿದ್ದು, ಖ್ಯಾತ ನಟ-ನಟಿಯರು, ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಗಳು ಕೂಡ ಸನ್ಯಾಸತ್ವವನ್ನು ಸ್ವೀಕರಿಸಿರುವ ವಿಚಾರ ಬೆಳಕಿಗ ಬರುತಿದೆ. ಇದೀಗ ಒಂದು ಕಾಲದಲ್ಲಿ ಹೀರೋಯಿನ್​ ಆಗಿದ್ದ ನಟಿ ಇದೀಗ ಆಧ್ಯಾತ್ಮದತ್ತ ಒಲವು ತೋರಿದದು, ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ.

90ರ ದಶಕದಲ್ಲಿ ತಮ್ಮ ಮೋಹಕ ಮೈಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮಮತಾ ಕುಲಕರ್ಣಿ ಹಾಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸನ್ಯಾಸಿನಿಯಾಗಿ ಕಾಣಿಸಿಕೊಂಡಿದ್ದು, ಇವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ನೇಮಕ ಮಾಡಲಾಗಿದೆ.

90 ರ ದಶಕದಲ್ಲಿ ವಿಷ್ಣುವರ್ಧನ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿದ್ದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದ ಮಮತಾ, ಹಿಂದಿಯಲ್ಲಿ ವಕ್ತ್ ಹಮಾರಾ ಹೈ, ಕ್ರಾಂತಿವೀರ್, ಕರಣ್ ಅರ್ಜುನ್, ಸಬ್ಸೆ ಬಡಾ ಕಿಲಾಡಿ, ಆಂದೋಲನ್, ಚೈನಾ ಗೇಟ್ ಸೇರಿದಂತೆ ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಇದೀಗ ಆಧ್ಯಾತ್ಮದತ್ತ ಒಲವು ತೋರಿದ್ದು, ಈ ವಿಚಾರ ಸದ್ಯ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. 

Mamata Kulkarni

ಇನ್ನೂ ನಟಿ 90ರ ದಶಕದಲ್ಲಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದ್ದರು. 1993ರಲ್ಲಿ ನಟಿ ಮ್ಯಾಗಜಿನ್​ ಒಂದರ ಕವರ್​ಪೇಜ್​ಗೆ ಟಾಪ್‌ಲೆಸ್ ಆಗಿ ಪೋಸ್ ನೀಡುವ ಮೂಲಕ ಸುದ್ದಿಯಾಗಿದ್ದರು. ಇದಾದ ಬಳಿಕ ನಟಿ ಗ್ಯಾಂಗ್​ಸ್ಟರ್​ ಛೋಟಾ ರಾಜನ್​ ಅವರೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿಯು ಬಿಟೌನ್​ ಗಲಿಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. 

2016ರಲ್ಲಿ ನಟಿ ಮಮತಾ ಹಾಗೂ ಅವರ ಪತಿ ವಿಕ್ಕಿ ಗೋಸ್ವಾಮಿ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಆರೋಪ ಕೇಳು ಬಂದಿತ್ತು. 2024ರಲ್ಲಿ ವಿದೇಶದಿಂದ ಭಾರತಕ್ಕೆ ಮರಳಿದ ಮಮತಾ ಸಿನಿಮಾ ಅಥವಾ ಬಿಗ್​ಬಾಸ್​ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತಾದರು ನಟಿ ಯಾವುದರಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮಹಾಕುಂಭಮೇಳದಲ್ಲಿ ಸನ್ಯಾಸತ್ವ ಪಡೆಯುವ ಮೂಲಕ ನಟಿ ಸುದ್ದಿಯಾಗಿದ್ದಾರೆ.

ಯಾವುದು ಈ ಕಿನ್ನರ ಅಖಾಡ? 

ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. 2015 ರಲ್ಲಿ ಪ್ರಾರಂಭವಾದ ಕಿನ್ನರ ಅಖಾಡ ಇದೀಗ ನಟಿ ಮಮತಾ ಕುಲಕರ್ಣಿಯನ್ನು ತಮ್ಮ ಮಹಾಮಂಡಲೇಶ್ವರಿಯನ್ನಾಗಿ ನೇಮಕ ಮಾಡಿದೆ. ಇದೊಂದು ರೀತಿಯ ಧಾರ್ಮಿಕ ಸ್ಥಾನವಾಗಿದ್ದು ಇಂದು (ಜನವರಿ 24) ಪಿಂಡ ಪ್ರಧಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ಮಮತಾ ಕುಲಕರ್ಣಿ ಅವರಿಂದ ಮಾಡಿಸಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಮಾಡಲಾಯಿತು.

ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ, ಪ್ರತಿ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ: CM Siddaramaiah

Micro Finance ಕಿರುಕುಳಕ್ಕೆ ತಾಳಿ ಮಾರಿದ ಮಹಿಳೆ; ಮಹಿಳಾ ಆಯೋಗದ ಮುಂದೆ ಕಣ್ಣೀರಿಟ್ಟ ಸಂತ್ರಸ್ತೆ

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…