ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಕ್ಕಳಲ್ಲಿ ಚುರುಕುತನ. ಉದ್ಯೋಗದ ಸ್ಥಳದಲ್ಲಿ ಅಧಿಕ ಬೇಜವಾಬ್ದಾರಿಯಿಂದ ಸಮಸ್ಯೆ. ತಪ್ಪು ನಿರ್ಧಾರದಿಂದ ದುಷ್ಪರಿಣಾಮ. ಶುಭಸಂಖ್ಯೆ: 9

ವೃಷಭ: ದೀರ್ಘಕಾಲದ ಅನಾರೋಗ್ಯದಿಂದ ಸಮಸ್ಯೆ. ವಿದ್ಯಾಭ್ಯಾಸದಲ್ಲಿ ಪ್ರಗತಿಯಿದೆ. ಆಕಸ್ಮಿಕ ಅವಘಡ. ಸಂಭವಿಸುವ ಸಾಧ್ಯತೆ. ಶುಭಸಂಖ್ಯೆ: 8

ಮಿಥುನ: ಅನಿರೀಕ್ಷಿತ ಧನಾಗಮನ. ತಂತ್ರಜ್ಞಾನ ಕ್ಷೇತ್ರದವರಿಗೆ ಅನುಕೂಲವಾಗಲಿದೆ. ಪತ್ನಿಯ ಆರೋಗ್ಯದ ವಿಚಾರದಲ್ಲಿ ಆತಂಕ ಕಾಡಲಿದೆ. ಶುಭಸಂಖ್ಯೆ: 2

ಕಟಕ: ಮಕ್ಕಳಿಗಾಗಿ ಸಾಲ ಮಾಡುವಿರಿ. ನೆರೆಹೊರೆಯವ ರಿಂದ ಕಿರಿಕಿರಿ ಉಂಟಾದೀತು. ಕುಟುಂಬ ಸಮೇತ ತೀರ್ಥಯಾತ್ರೆಗೆ ನಿರ್ಧಾರ. ಶುಭಸಂಖ್ಯೆ: 7

ಸಿಂಹ: ಬಂಧುಗಳಿಂದ ಮನೆ ನಿರ್ವಣಕ್ಕೆ ಸಹಾಯ ಸಿಗಲಿದೆ. ಸಹೋದರರಲ್ಲಿ ಭಿನ್ನಾಭಿಪ್ರಾಯ. ಹಣಕಾಸಿನ ಪರಿಸ್ಥಿತಿಯಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ಕನ್ಯಾ: ಕ್ಲಿಷ್ಟ ಕೆಲಸ ಸಂಗಾತಿಯ ಸಹಾಯದಿಂದ ಸುಲಭ ವಾಗಲಿದೆೆ. ಮೇಲಧಿಕಾರಿ ಜತೆ ಭಿನ್ನಾಭಿಪ್ರಾಯ. ಜೇನು ಕೃಷಿಯಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 9

ತುಲಾ: ಪಾಲುದಾರಿಕೆಯಲ್ಲಿ ಯಂತ್ರೋಪಕರಣ ಖರೀದಿಗೆ ನಿರ್ಧಾರ. ನೂತನ ಉದ್ಯೋಗದಲ್ಲಿ ಕಿರಿಕಿರಿ. ಸ್ತ್ರೀಯರಿಗೆ ಕಾರ್ಯದೊತ್ತಡ. ಶುಭಸಂಖ್ಯೆ: 1

ವೃಶ್ಚಿಕ: ವಿವಾಹದ ವಿಷಯದಲ್ಲಿ ಹಿರಿಯರ ಸಲಹೆ ಅಗತ್ಯ. ಅತಿಆಲಸ್ಯದಿಂದ ಅವಕಾಶ ವಂಚಿತರಾಗುವಿರಿ. ಬೆಂಕಿಯಿಂದ ದೂರವಿರಿ. ಶುಭಸಂಖ್ಯೆ: 2

ಧನಸ್ಸು: ಸ್ನೇಹಿತರಿಂದ ದುಶ್ಚಟಗಳ ದಾಸರಾಗುವಿರಿ. ಉದರ ಸಂಬಂಧಿ ತೊಂದರೆ. ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 7

ಮಕರ: ಬಹುದಿನಗಳ ಆಸೆ ಈಡೇರುವುದು. ತಂದೆಯ ಬಂಧುಗಳಿಂದ ನಷ್ಟ. ವಿದೇಶ ಪ್ರಯಾಣ ಸಂಭವ. ಅಡಿಕೆ ಕೃಷಿಯಲ್ಲಿ ಲಾಭವಿಲ್ಲ. ಶುಭಸಂಖ್ಯೆ: 6

ಕುಂಭ: ಕಾರ್ಖಾನೆ ವ್ಯವಹಾರದಲ್ಲಿ ನಷ್ಟದ ಪ್ರಮಾಣ ಅಧಿಕವಾಗಲಿದೆ. ಮೇಲಧಿಕಾರಿಗಳ ಪ್ರಶಂಸೆಯಿಂದ ಸಂತಸ. ದಾಂಪತ್ಯ ಸಮಸ್ಯೆ. ಶುಭಸಂಖ್ಯೆ: 1

ಮೀನ: ಐಟಿ ತಂತ್ರಜ್ಞರಿಗೆ ಉದ್ಯೋಗ ಲಾಭ. ರಾಜಕೀಯ ರಂಗದವರಿಗೆ ಶತ್ರುದಮನವಾಗಿ ನೆಮ್ಮದಿ. ರೋಗ ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net