ಈ ರಾಶಿಯವರಿಗಿಂದು ಶತ್ರುಗಳಿಂದ ತೊಂದರೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಾಹನ ಭೂಮಿಯಿಂದ ಅನುಕೂಲ. ದುಡುಕಿನ ಮಾತಿನಿಂದ ಸಮಸ್ಯೆ. ವಿಪರೀತ ಕೋಪ. ಗುಪ್ತ ವಿಷಯಗಳಿಂದ ಅಪವಾದ. ಶುಭಸಂಖ್ಯೆ: 5

ವೃಷಭ: ಯಂತ್ರೋಪಕರಣಗಳಿಗೆ ಖರ್ಚು. ಆತುರದ ನಿರ್ಧಾರದಿಂದ ಕಷ್ಟ. ಸಂಗಾತಿಯ ಬೇಜವಾಬ್ದಾರಿ. ದೂರದೂರಿನಲ್ಲಿ ಉದ್ಯೋಗ. ಶುಭಸಂಖ್ಯೆ: 9

ಮಿಥುನ: ವಿವಾಹಕ್ಕೆ ಕುಟುಂಬಸ್ಥರಿಂದ ವಿರೋಧ. ಕಟ್ಟಡಗಳ ಸಾಮಗ್ರಿಗಳಲ್ಲಿ ಉತ್ತಮ ಲಾಭ. ವಿದೇಶ ಪ್ರಯಾಣಕ್ಕೆ ಹಲವು ತೊಂದರೆಗಳು. ಶುಭಸಂಖ್ಯೆ: 2

ಕಟಕ: ಉದ್ಯೋಗ ಲಾಭ. ಸ್ನೇಹಿತರ ಸಹಕಾರ. ಸ್ತ್ರೀಯರಿಂದ ನೋವು. ಮಕ್ಕಳಿಂದ ಅದೃಷ್ಟ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಂತಾನ ಚಿಂತೆ. ಶುಭಸಂಖ್ಯೆ: 3

ಸಿಂಹ: ಸ್ಥಿರಾಸ್ತಿ ಯೋಗ. ಕೈಗಾರಿಕೆಯವರಿಗೆ ಅನುಕೂಲ. ಉದ್ಯೋಗ ಬದಲಾವಣೆಯ ಅದೃಷ್ಟ. ಪ್ರೇಮದಲ್ಲಿ ಯಶಸ್ಸು. ನೆಮ್ಮದಿ ಭಂಗ. ಶುಭಸಂಖ್ಯೆ: 4

ಕನ್ಯಾ: ಕೋರ್ಟ್ ಕೇಸ್​ಗಳ ಬಗ್ಗೆ ನಿರ್ಲಕ್ಷ್ಯ. ಕಲಹಗಳು, ಸೋಲು. ಅನಗತ್ಯ ತಿರುಗಾಟ. ಅನಾರೋಗ್ಯ. ಪತ್ರ ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 2

ತುಲಾ: ಅನಿರೀಕ್ಷಿತ ಧನಾಗಮನ. ಸಂಗಾತಿಯಿಂದ ಆರ್ಥಿಕ ನೆರವು. ಪಾಲುದಾರಿಕೆಯಲ್ಲಿ ಬೇಸರ. ಬೆಂಕಿ, ಯಂತ್ರದಿಂದ ಜಾಗ್ರತೆ. ಶುಭಸಂಖ್ಯೆ: 6

ವೃಶ್ಚಿಕ: ಶತ್ರುಗಳಿಂದ ವೇದನೆ. ಉಡಾಫೆಯ ನಡವಳಿಕೆ. ದಾಂಪತ್ಯ ವಿರಸ. ಸಾಲದ ಗಾಬರಿ. ಅನಾರೋಗ್ಯ. ಪ್ರಯಾಣದಲ್ಲಿ ಗೊಂದಲ. ಶುಭಸಂಖ್ಯೆ: 7

ಧನುಸ್ಸು: ಶತ್ರು ನಾಶ. ಅಸಮಾಧಾನದಿಂದ ಕೋಪ. ಮಕ್ಕಳಿಂದ ಅನುಕೂಲ. ಯಂತ್ರೋಪಕರಣಗಳಿಂದ ನಷ್ಟ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 8

ಮಕರ: ದೂರದ ವ್ಯಕ್ತಿಗಳಿಂದ ಅನುಕೂಲ. ರಕ್ತಸಂಬಂಧಿಗಳಿಂದ ನೋವು. ಮಾಟ ಮಂತ್ರದ ಸನ್ನಿವೇಶ. ತಾಯಿಯಿಂದ ಸಹಕಾರ. ಶುಭಸಂಖ್ಯೆ: 1

ಕುಂಭ: ದಾಯಾದಿಗಳಿಂದ ತೊಂದರೆ. ವಾಹನ ಲಾಭ. ಮಹಿಳೆಯರಿಂದ ಅನುಕೂಲ. ನೆರೆಯವರಿಂದ ಒತ್ತಡ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 7

ಮೀನ: ಆರ್ಥಿಕ ಚೇತರಿಕೆ. ಉದ್ಯೋಗ ಬದಲಾವಣೆಯಿಂದ ಅವಕಾಶ ಪ್ರಾಪ್ತಿ. ಮಹಿಳೆಯರಿಗೆ ತೊಂದರೆ. ವಿದ್ಯಾಭ್ಯಾಸದಲ್ಲಿ ಗೊಂದಲ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net