

ಮೇಷ: ಭೂ ವ್ಯವಹಾರಗಳಲ್ಲಿ ಲಾಭ. ಆರ್ಥಿಕ ಚೇತರಿಕೆ. ವಂಚಿಸುವವವರ ಜಾಲಕ್ಕೆ ಸಿಲುಕುವಿರಿ. ಎಚ್ಚರಿಕೆಯಲ್ಲಿರುವುದು ಉತ್ತಮ. ಶುಭಸಂಖ್ಯೆ: 5
ವೃಷಭ: ಮಾತಿನಿಂದ ಅನರ್ಥ. ತಂಪು ಪಾನೀಯ ವ್ಯಾಪಾರಸ್ಥರಿಗೆ ಲಾಭ. ಸಂಗಾತಿಯಿಂದ ಸಕಾಲಿಕ ಸಲಹೆ. ಉದ್ಯೋಗದಲ್ಲಿ ಕಿರಿಕಿರಿ. ಶುಭಸಂಖ್ಯೆ: 5
ಮಿಥುನ: ಮನಸ್ಸಿನಲ್ಲಿ ದುಷ್ಟ ಆಲೋಚನೆ ಬರಬಹುದು, ನಿಯಂತ್ರಿಸಿ. ಕೆಲಸದಲ್ಲಿ ವಿಘ್ನ, ಅಕಾಲ ಭೋಜನ. ವೈದ್ಯರ ಸಲಹೆ ತಿರಸ್ಕರಿಸಬೇಡಿ. ಶುಭಸಂಖ್ಯೆ: 6
ಕಟಕ: ವಿದ್ಯಾರ್ಥಿಗಳಲ್ಲಿ ಪ್ರಗತಿ. ನಾನಾ ಮೂಲಗಳಿಂದ ಹಣಪ್ರಾಪ್ತಿ. ಬಂಧುಗಳಲ್ಲಿ ಕಲಹ. ಸಲ್ಲದ ಅಪವಾದ. ಆಹಾರದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2
ಸಿಂಹ: ಧಾನ್ಯಗಳ ಬೇಸಾಯಗಾರರಿಗೆ ಧನ ಲಾಭ. ಹಣಕಾಸು ಸಮಸ್ಯೆ. ಸಾಲ ಬಾಧೆ. ವಾಹನದಿಂದ ತೊಂದರೆ. ಶರೀರದಲ್ಲಿ ಆತಂಕ. ಶುಭಸಂಖ್ಯೆ: 4
ಕನ್ಯಾ: ಅಲ್ಪ ಆದಾಯ, ಅಧಿಕವಾದ ಖರ್ಚು. ಸಹೋದ್ಯೋಗಿಗಳೊಂದಿಗೆ ಮಾತಿನ ಚಕಮಕಿ. ಮನಃಕ್ಲೇಷ. ದಿನಸಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 6
ತುಲಾ: ದಾನದಲ್ಲಿ ಆಸಕ್ತಿ. ಆಕಸ್ಮಿಕ ಧನವ್ಯಯ. ನಂಬಿದ ಜನರಿಂದ ಅಶಾಂತಿ. ಮಾನಸಿಕ ವ್ಯಥೆ. ಸಗಟು ವ್ಯಾಪಾರಿಗಳಿಗೆ ಧನ ಲಾಭ. ಶುಭಸಂಖ್ಯೆ: 8
ವೃಶ್ಚಿಕ: ಉದ್ಯೋಗದಲ್ಲಿ ಕಿರಿಕಿರಿ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಮಾನಸಿಕ ಚಿಂತೆ. ಕೆಲಸದ ತೀವ್ರ ಒತ್ತಡ. ತಾಳ್ಮೆಯಿಂದ ಇರುವುದು ಉತ್ತಮ. ಶುಭಸಂಖ್ಯೆ: 6
ಧನುಸ್ಸು: ಕುಟುಂಬದಲ್ಲಿ ನೆಮ್ಮದಿ. ವಿದೇಶ ಪ್ರಯಾಣಕ್ಕೆ ವೀಸಾ ಸಮಸ್ಯೆ. ಕೃಷಿಕರಿಗೆ ಲಾಭ. ದಾಂಪತ್ಯದಲ್ಲಿ ಪ್ರೀತಿ. ಹಿತೈಷಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ಮಕರ: ಕಲಾವಿದರಿಗೆ ಆರ್ಥಿಕ ಸಮಸ್ಯೆ. ಬಾಕಿ ವಸೂಲಿ. ಚಂಚಲ ಮನಸ್ಸು. ಯಶಸ್ಸಿನ ಮೆಟ್ಟಿಲೇರುವಿರಿ. ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 8
ಕುಂಭ: ದಿನಸಿ ವ್ಯಾಪಾರಿಗಳಿಗೆ ಸಾಧಾರಣ ಲಾಭ. ತಾಳ್ಮೆ ಅಗತ್ಯ. ಧನ ಲಾಭ. ಗೊಂದಲ. ವೈಯುಕ್ತಿಕ ವಿಚಾರದಲ್ಲಿ ಕಾಳಜಿವಹಿಸಿ. ಶುಭಸಂಖ್ಯೆ: 4
ಮೀನ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಉದ್ಯೋಗಿಗಳಿಗೆ ತೊಂದರೆ. ಪತಿಯೊಂದಿಗೆ ಮನಃಸ್ತಾಪ ಹೆಚ್ಚಾಗುವುದು. ಶುಭಸಂಖ್ಯೆ: 4