More

    ನಡೆದಾಡುವ ಶಕ್ತಿ ಪಡೆದ ಯುವತಿ; ರಾಯರ ಮಠದಲ್ಲಿ ನಡೆಯಿತು ಪವಾಡ!

    ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
    ಕಣ್ಣಿಲ್ಲದವರಿಗೆ ಪ್ರಪಂಚ ನೋಡುವ, ಕೈ-ಕಾಲು ಸ್ವಾಧೀನ ಇಲ್ಲದವರಿಗೆ ನಡೆದಾಡುವ, ಮೂಕನಿಗೆ ಮಾತು ಬರುವ, ಕಿವಿ ಕೇಳಿಸದವರು ಆಲಿಸುವ, ಪ್ರಾಣಾಪಾಯದಿಂದ ಪಾರಾಗುವ ಹೀಗೆ.. ಒಂದಿಲ್ಲೊಂದು ಸಮಸ್ಯೆ ಎದುರಿಸುವವರಿಗೆ ಸಿನಿಮಾಗಳಲ್ಲಿ ದೇವರ ಕೃಪಾಶೀರ್ವಾದ ದೊರೆತಂತೆ ಕೋಟೆನಗರಿಯ ರಾಯರ ಮಠವೂ ಬುಧವಾರ ಪವಾಡಕ್ಕೆ ಸಾಕ್ಷಿಯಾಯಿತು.

    ಕಾಲು ಸ್ವಾಧೀನ ಕಳೆದುಕೊಂಡ ಬೆಂಗಳೂರು ಯಲಹಂಕ ನಿವಾಸಿ ತೇಜಸ್ವಿನಿ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಲು ಪಾಲಕರೊಂದಿಗೆ ಭೇಟಿ ನೀಡಿದ್ದು, ಎರಡೆಜ್ಜೆಯೂ ಮುಂದಕ್ಕೆ ಇಡಲಾಗದ ಯುವತಿ ವ್ಹೀಲ್‌ಚೇರ್‌ನಿಂದ ಮೇಲೆದ್ದು, ಯಾರ ಸಹಾಯವೂ ಇಲ್ಲದೆ, ಒಂದು ಪ್ರದಕ್ಷಿಣೆ ಹಾಕಲು ಹೊರಟು, ಮೂರು ಬಾರಿ ಪ್ರದಕ್ಷಿಣೆ ಹಾಕಿದ ದೃಶ್ಯ ನೆರೆದಿದ್ದ ಭಕ್ತರಲ್ಲಿ ಅಚ್ಚರಿ ಉಂಟು ಮಾಡಿತು.

    ಸ್ವಾಧೀನ ಕಳೆದುಕೊಳ್ಳಲು ಕಾರಣ: 19 ವರ್ಷದ ಈ ಯುವತಿ ಉತ್ತಮ ನೃತ್ಯಪಟು. ಆದರೆ, ಜನನದಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದಾಳೆ. ಈಕೆಯ ಹೃದಯ ಎಲ್ಲರಂತಿಲ್ಲ. ಬದಲಿಗೆ ಸ್ವಲ್ಪ ತಿರುಗಿದೆ. ಹೀಗಾಗಿ ವರ್ಷ ಕಳೆದಂತೆ ರಕ್ತನಾಳ ಸಮಸ್ಯೆಯೂ ಕಾಡತೊಡಗಿತು. ಕಳೆದ 3 ವರ್ಷದಿಂದ ಮಾಸಿಕ ಋತುಚಕ್ರದಲ್ಲೂ ಏರು-ಪೇರು ಉಂಟಾದ ಪರಿಣಾಮ ರಕ್ತಸಂಚಾರ ತೊಂದರೆಗೆ ಸಿಲುಕಿ 6 ತಿಂಗಳಿನಿಂದ ಈಚೆಗೆ ಸಂಪೂರ್ಣ ಕಾಲು ಸ್ವಾಧೀನ ಇಲ್ಲದಂತಾಯಿತು.

    CTR 1

    ಇದನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹ; ಕರವೇ ಸದಸ್ಯರು ಅರೆಸ್ಟ್

    ದೀಪಾವಳಿ ವೇಳೆ ಪಾಲಕರೊಂದಿಗೆ ಯುವತಿ ಮಂತ್ರಾಲಯಕ್ಕೆ ಹೋಗಿದ್ದರು. ರಾಯರ ದರ್ಶನ ಪಡೆದು ಮರಳುವಾಗ ಅಲ್ಲಿಯ ಗುರುಗಳು 45 ದಿನದೊಳಗೆ ಶುಭ ಸುದ್ದಿ ದೊರೆಯಲಿದೆ ಎಂದು ಆಶೀರ್ವದಿಸಿದ್ದರು. ಇದಾದ ನಂತರ ಶಿವಮೊಗ್ಗದ ಆಯುರ್ವೇದ ವೈದ್ಯರ ಬಳಿಗೂ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಬೆಂಗಳೂರಿಗೆ ಮರಳುವ ಮಾರ್ಗಮಧ್ಯೆ ಚಿತ್ರದುರ್ಗದ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಬಂದ ವೇಳೆ ಪ್ರದಕ್ಷಿಣೆ ಹಾಕಿರುವುದು ಪಾಲಕರಲ್ಲೂ ಆಶ್ಚರ್ಯ ಉಂಟು ಮಾಡಿದೆ.

    ರಾಯರು ವೆಂಕಣ್ಣಗೆ ಮೋಕ್ಷ ನೀಡಿದ ಸ್ಥಳ ಹಾಗೂ ರಾಯರ ಚಲ ಬೃಂದಾವನವಿರುವ ಶ್ರೀಮಠ ಇದಾಗಿದ್ದು, ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬರುವ ಅನೇಕ ಭಕ್ತರು ಒಳಿತನ್ನು ಕಂಡಿದ್ದಾರೆ. ಹೀಗಾಗಿ ನಿಜ ಜೀವನದಲ್ಲೂ ಇಂತಹ ಘಟನೆ ನಡೆಯುತ್ತವೆ ಎಂಬುದಕ್ಕೆ ಅನುಭವಕ್ಕೆ ಬಂದ ಭಕ್ತರೇ ಉತ್ತಮ ನಿದರ್ಶನ.

    ನನ್ನ ಪುತ್ರ ಎಸ್.ಸಾಗರ್, ಪುತ್ರಿ ಎಸ್.ತೇಜಸ್ವಿನಿ ಇಬ್ಬರೂ ಅಂಗವಿಕಲರು. ಇದರಿಂದ ಮನನೊಂದು ಇಡೀ ಕುಟುಂಬ ಆತ್ಮಹತ್ಯೆಗೂ ನಿರ್ಧರಿಸಿದ್ದೆವು. ಆದರೆ, ನನ್ನ ಮಕ್ಕಳಂತೆ ಅಂಗವಿಕಲತೆ ಇರುವವರಿಗೂ ನೆರವಾಗಿ, ಜೀವನ ಮುನ್ನಡೆಸಲು ತೀರ್ಮಾನಿಸಿ ಶ್ರೀಗುರು ರಾಘವೇಂದ್ರ ಟ್ರಸ್ಟ್ ಮೂಲಕ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಅಂಧತ್ವ ಹೊರತುಪಡಿಸಿ ಉಳಿದವರಿಗೆ ಕಲ್ಪವೃಕ್ಷ ಹೆಸರಿನ ಶಾಲೆ ತೆರೆದಿದ್ದೇವೆ. 35 ಮಕ್ಕಳಿಗೆ ವಿವಿಧ ರೀತಿಯ ತರಬೇತಿ ನೀಡುತ್ತಿದ್ದೇವೆ ಎನ್ನುತ್ತಾರೆ ತೇಜಸ್ವಿನಿ ತಂದೆ ಆರ್.ಶ್ರೀಕಾಂತ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts