More

    ಕ್ರಿಸ್​ಮಸ್​ ಹಬ್ಬದಂದು ಪ್ರಧಾನಿ ಕಚೇರಿಗೆ ಮಕ್ಕಳ ಭೇಟಿ; ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ ಎಂದ ನರೇಂದ್ರ ಮೋದಿ

    ನವದೆಹಲಿ: ಕ್ರಿಸ್​ಮಸ್​ ಹಬ್ಬದಂದು ಶಾಲಾ ವಿದ್ಯಾರ್ಥಿಗಳು ತಮ್ಮ ಅಧಿಕೃತ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿರುವ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಮಕ್ಕಳು ಥಂಬ್ಸ್-ಅಪ್ ನೀಡಿದ ಕಾರಣ ನಮ್ಮ ಕಚೇರಿ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಕುಟುಂಬಸ್ಥರೊಂದಿಗೆ ಕ್ರಿಸ್​ಮಸ್​ ಆಚರಿಸಿ ಪ್ರಾಣ ಬಿಟ್ಟ ನಟಿ

    ಪ್ರಧಾನಮಂತ್ರಿ ಕಚೇರಿ ಮತ್ತು ಕೇಂದ್ರ ಸಂಪುಟ ಸಭೆಗಳನ್ನು ಆಯೋಜಿಸುವ ಕಾನ್ಫರೆನ್ಸ್ ಕೊಠಡಿ ಸೇರಿದಂತೆ ಅವರ ನಿವಾಸದ ವಿವಿಧ ಭಾಗಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕುತೂಹಲದ ಯುವ ಮನಸ್ಸುಗಳು 7, LKMಗೆ ಭೇಟಿ ನೀಡಿದ್ದಾರೆ. ನನ್ನ ಕಚೇರಿಯು ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ. ಅವರು ಥಂಬ್ಸ್​ಅಪ್​ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿ, ಇದೊಂದು ಉತ್ತಮ ಅವಕಾಶವಾಗಿತ್ತು. ಮುಂದೆ ಈ ರೀತಿಯ ಹಲವು ಅವಕಾಶಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ. ಶ್ಚಿಯನ್ ಸಮುದಾಯದ ಸದಸ್ಯರೊಂದಿಗೆ ಪ್ರಧಾನ ಮಂತ್ರಿ ನಡೆಸಿದ ಸಂವಾದದ ಸಮಯದಲ್ಲಿ ವಿದ್ಯಾರ್ಥಿಗಳ ಗುಂಪು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಹಾಡುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts