ಈ ರಾಶಿಯವರಿಗಿಂದು ಆಕಸ್ಮಿಕ ಧನಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬದಲ್ಲಿ ಮದುವೆಯ ತಯಾರಿಯ ಸಂಭ್ರಮ. ಸ್ಥಿರಾಸ್ತಿಯ ವಿಚಾರದಲ್ಲಿ ದ್ವಂದ್ವ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ: 3

ವೃಷಭ: ಸಹೋದರರೊಂದಿಗೆ ಬಾಂಧವ್ಯ ವೃದ್ಧಿ. ಸಹೋದ್ಯೋಗಿಗಳಿಂದ ತೊಂದರೆ. ತಾಯಿಯಿಂದ ಮನೆಕಟ್ಟಲು ಧನಸಹಾಯ. ಶುಭಸಂಖ್ಯೆ: 1

ಮಿಥುನ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ. ಅಲಂಕಾರಿಕ ವಸ್ತು ಖರೀದಿಯಲ್ಲಿ ಮೋಸ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಶುಭಸಂಖ್ಯೆ: 8

ಕಟಕ: ಸಂತಾನ ಆಕಾಂಕ್ಷಿಗಳಿಗೆ ಶುಭ ಸುದ್ದಿ ಬಂದು ಸಂತಸ. ಆಕಸ್ಮಿಕ ಧನಲಾಭವಿದೆ. ದಿನಸಿ ವ್ಯಾಪಾರಿಗಳಿಗೆ ಲಾಭ ಬರಲಿದೆ. ಶುಭಸಂಖ್ಯೆ: 4

ಸಿಂಹ: ಕೃಷಿ ಇಲಾಖೆ ಅಧಿಕಾರಿಗಳಿಗೆ ತೊಂದರೆ. ಕುಟುಂಬದಲ್ಲಿ ಹಣಕ್ಕೆ ಸಮಸ್ಯೆ ಇರದು. ಚಿಕ್ಕಪುಟ್ಟ ಕೆಲಸಗಳಿಗೂ ಪ್ರಯತ್ನ ಬೇಕು. ಶುಭಸಂಖ್ಯೆ: 1

ಕನ್ಯಾ: ಪಾಲುದಾರಿಕೆಯ ವ್ಯಾಪಾರದಲ್ಲಿ ಮನಸ್ತಾಪ. ಸಾರಿಗೆ ವ್ಯವಹಾರದಲ್ಲಿ ಲಾಭ. ವ್ಯವಸಾಯ ಉತ್ಪನ್ನ ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 9

ತುಲಾ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಸಾಲ ತೀರಿಸಲು ಸಹೋದರರಿಂದ ಸಹಾಯ ಸಿಗುವುದು. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 5

ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಶುಭ. ಕವಿಗಳಿಗೆ ಮತ್ತು ಸಾಹಿತಿಗಳಿಗೆ ಶುಭ ಸಮಯ. ಶುಭಸಂಖ್ಯೆ: 2

ಧನಸ್ಸು: ಹಣಕಾಸಿನ ವಿಚಾರದಲ್ಲಿ ತೊಂದರೆ. ಕಲಾವಿದೆಯರಿಗೆ ಮಾನಸಿಕ ಒತ್ತಡ. ಆರಕ್ಷಕ ವೃತ್ತಿಯವರಿಗೆ ಅನಿರೀಕ್ಷಿತ ಧನಲಾಭ. ಶುಭಸಂಖ್ಯೆ: 6

ಮಕರ: ಶಿಕ್ಷಕ ವೃಂದದವರಿಗೆ ಗೌರವ ಲಭ್ಯ. ಅಧಿಕಾರಿಗಳಿಗೆ ರಾಜಕಾರಣಿಗಳಿಂದ ತೊಂದರೆ. ಹಣದ ವ್ಯವಹಾರದಲ್ಲಿ ತೊಂದರೆ. ಶುಭಸಂಖ್ಯೆ: 3

ಕುಂಭ: ಬೋಧನಾ ಕೇಂದ್ರದವರಿಗೆ ಆದಾಯ. ಗೃಹಬಳಕೆ ಸಾಮಗ್ರಿಗಳಿಗಾಗಿ ಹಣವ್ಯಯವಾಗುವುದು. ಮಗಳಿಗೆ ಅನಾರೋಗ್ಯ. ಶುಭಸಂಖ್ಯೆ: 6

ಮೀನ: ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ. ದಂಪತಿಗಳಿಗೆ ಮಾನಸಿಕ ಉದ್ವೇಗ ಕಾಡೀತು. ಹೊಸ ವಸ್ತು ಖರೀದಿಗಾಗಿ ಹಣವ್ಯಯ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net