ನನ್ನ ಹೆಂಡ್ತಿಗೆ ಡೆಲಿವರಿ; ಒಂದೇ ಕಾರಣ ನೀಡಿ ರಜೆ ಕೇಳಿದ 700ಕ್ಕೂ ಅಧಿಕ Police Officers

Police
Published on

ಲಖನೌ: 2025ರ ಜನವರಿಯಲ್ಲಿ ಪ್ರಯಾಗ್​ರಾಜ್​ನಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಈಗಾಗಲೇ ಉತ್ತರಪ್ರದೇಶ ಸರ್ಕಾರವು ಸಕಲ ತಯಾರಿ ನಡೆಸಿದ್ದು, ಕೋಟ್ಯಂತರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಭದ್ರತೆಗೆ ಸಂಬಂಧಿಸಿದಂತೆ ಸರ್ಕಾರವು 6 ಸಾವಿರಕ್ಕೂ ಅಧಿಕ ಪೊಲೀಸರನ್ನು (Police) ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆಯನ್ನು ವಹಿಸಲಾಗಿದೆ.

ಭದ್ರೆತೆಗೆ ಸಂಬಂಧಿಸಿದಂತೆ ಅಕ್ಟೋಬರ್​ 25ರಿಂದ ಪೊಲೀಸರನ್ನು (Police) ನಿಯೋಜಿಸಲಾಗುತ್ತಿದ್ದು, ಈ ಪೈಕಿ 1200ಕ್ಕೂ ಅಧಿಕ ಅಧಿಕಾರಿಗಳು ಡಿಸೆಂಬರ್​ನಲ್ಲಿ ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 700ಕ್ಕೂ ಅಧಿಕ ಪೊಲೀಸರು ಒಂದೇ ಕಾರಣವನ್ನು ನೀಡಿದ್ದು, ಈ ವಿಚಾರ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೇಳಿ ಬಂದಿರುವ ಮಾಹಿತಿ ಪ್ರಕಾರ 700ಕ್ಕೂ ಅಧಿಕ ಪೊಲೀಸರು (Police) ತಮ್ಮ ಪತ್ನಿಗೆ ಹೆರಿಗೆ ಅಥವಾ ಅನಾರೋಗ್ಯದ ಕಾರಣ ನೀಡಿ ರಜೆ ಕೋರಿದ್ದು, ಡಿಸೆಂಬರ್​ ಅಥವಾ ಜನವರಿಯಲ್ಲಿ ಹೆರಿಯಾಗುವ ಸಾಧ್ಯತೆ ಇದೆ ಎಂದು ಕಾರಣವನ್ನು ನೀಡಿದ್ದು, ಈ ಕಾರಣಕ್ಕೆ ರಜೆಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Mahakumbh Mela

ಅರ್ಜಿ ಸಲ್ಲಿಸಿದವರ ಪೈಕಿ 2018 ಮತ್ತು 2023ರಲ್ಲಿ ನೇಮಕಗೊಂಡಿರುವವರು ಹೆಚ್ಚಾಗಿದ್ದು, ಇದಲ್ಲದೇ ಪೋಷಕರ ಅನಾರೋಗ್ಯದ ಹಿನ್ನೆಲೆಯಲ್ಲಿ 250 ಪೊಲೀಸರು ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇತರರು ಸಂಬಂಧಿಕರ ತಿಥಿ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

2025ರ ಜನವರಿ 13ರಂದು ಮಹಾಕುಂಭಮೇಳ ನಡೆಯಲಿದ್ದು, ಫೆಬ್ರವರಿ 26ರಂದು ಮುಕ್ತಾಯವಾಗಲಿದೆ. ಈ ಬಾರಿ 40 ಕೋಟಿ ಭಕ್ತರು ಸೇರುವ ನಿರೀಕ್ಷೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ತಯಾರಿ ನಡೆಸಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರಾತ ಕ್ರಮ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net