ಈ ರಾಶಿಯವರಿಗಿಂದು ಷೇರು ವ್ಯವಹಾರದಲ್ಲಿ ಅಧಿಕ ನಷ್ಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮನೆಯಲ್ಲಿ ಆಸ್ತಿ ಕಿರಿಕಿರಿ ವಿಪರೀತಕ್ಕೆ ಹೋದೀತು. ಸರ್ಕಾರಿ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಬಂಧುಗಳ ಸಹಾಯ ಸಿಗಲಿದೆ. ಶುಭಸಂಖ್ಯೆ: 3

ವೃಷಭ: ಕೃಷಿಕರಿಗೆ ಬೆಳೆ ಮಾರಾಟದಲ್ಲಿ ಲಾಭ. ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ಗೌರವ. ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಶುಭಸಂಖ್ಯೆ: 8

ಮಿಥುನ: ಶುಭ ಕಾರ್ಯದ ಸಂತೋಷ. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಉದ್ಯೋಗ ನಷ್ಟವಾದೀತು. ಮಂಗಳ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 1

ಕಟಕ: ಉತ್ಸವದಲ್ಲಿ ಬಂಧುಮಿತ್ರರ ಜತೆ ಉಭಯ ಕುಶಲೋಪರಿ. ಕೋಪದಿಂದಾಗಿ ಸಂಬಂಧಗಳಲ್ಲಿ ಬಿರುಕು. ಕುಟುಂಬದಲ್ಲಿ ಕಲಹ. ಶುಭಸಂಖ್ಯೆ: 9

ಸಿಂಹ: ವಿದ್ಯಾರ್ಜನೆಯಲ್ಲಿ ಯಶಸ್ಸು ಸಿಗಲಿದೆ. ನಾಟ್ಯ ಮತ್ತು ಸಂಗೀತ ಕಲಾವಿದರಿಗೆ ಅಭಿಮಾನಿಗಳಿಂದ ಸನ್ಮಾನ, ಅನವಶ್ಯಕ ಖರ್ಚು. ಶುಭಸಂಖ್ಯೆ: 3

ಕನ್ಯಾ: ಹಳೆಯ ವಸ್ತುಗಳಿಂದ ಅಧಿಕ ಸಂಪಾದನೆ. ರಾಜಕಾರಣಿಗಳಿಗೆ ಜನಮನ್ನಣೆ. ಸ್ವಸಾಮರ್ಥ್ಯದಿಂದ ಕೆಲಸ ಸಾಧಿಸಿದ ಹೆಮ್ಮೆ. ಶುಭಸಂಖ್ಯೆ: 6

ತುಲಾ: ಕೆಲಸದ ಒತ್ತಡ ನಿವಾರಣೆಗೆ ಸಹೋದ್ಯೋಗಿಗಳ ಸಹಕಾರ. ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ಅನಾರೋಗ್ಯದಿಂದ ಚೇತರಿಕೆ. ಶುಭಸಂಖ್ಯೆ: 2

ವೃಶ್ಚಿಕ: ದಾಂಪತ್ಯದಲ್ಲಿ ಅಸಮಾಧಾನ. ನಂಬಿದವರಿಂದಲೇ ವಂಚನೆ. ಹಣಕಾಸಿನ ಕೊರತೆಯಿಂದ ಅಮೂಲ್ಯವಾದ ವಸ್ತು ಕೈಬಿಡಲಿದೆ. ಶುಭಸಂಖ್ಯೆ: 7

ಧನಸ್ಸು: ಆಸ್ತಿಯ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಗುರುಹಿರಿಯರಿಂದ ಧಾರ್ವಿುಕ ಮಾರ್ಗದರ್ಶನ. ಉನ್ನತ ವ್ಯಾಸಂಗದಲ್ಲಿ ಯಶಸ್ಸು. ಶುಭಸಂಖ್ಯೆ: 5

ಮಕರ: ವಿವಾಹ ಕಾರ್ಯಕ್ಕೆ ಹಲವು ತೊಂದರೆಗಳು. ಸಹೋದರರಿಂದ ಆರ್ಥಿಕ ಸಹಾಯ. ಮಾಟ ಮಂತ್ರದ ಪ್ರಯೋಗದ ಬಗ್ಗೆ ಆತಂಕ. ಶುಭಸಂಖ್ಯೆ: 4

ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ ಉಂಟಾಗ ಬಹುದು. ಸಾವಯವ ಕೃಷಿಕರಿಗೆ ಧನ ಲಾಭ. ಷೇರು ವ್ಯವಹಾರದಲ್ಲಿ ಅಧಿಕ ನಷ್ಟ. ಶುಭಸಂಖ್ಯೆ: 1

ಮೀನ: ಕೊಟ್ಟ ಸಾಲ ತಿರುಗಿ ಬರಲಿದೆ. ಸ್ನೇಹಿತೆಯೊಂದಿಗೆ ವ್ಯವಹರಿಸುವಾಗ ಮಾತಿನ ಬಗ್ಗೆ ಎಚ್ಚರವಿರಲಿ. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net