ನಿಜವಾದ ಸಂತ್ರಸ್ತೆ ನಾನು; ಟೆಕ್ಕಿ Atul ಸೂಸೈಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಟ್ವಿಸ್ಟ್​ ಕೊಟ್ಟ ಪತ್ನಿ

Athul Subhash
Published on

ಬೆಂಗಳೂರು: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಟೆಕ್ಕಿ ಅತುಲ್​ ಸುಭಾಷ್ (Atul Subhash) ಆತ್ಮಹತ್ಯೆ ಪ್ರಕರಣಕ್ಕೆ (Suicide Case)  ಸಂಬಂಧಿಸಿದಂತೆ ಮಾರತ್ತಹಳ್ಳಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಪತ್ನಿ, ಆಕೆಯ ಸಹೋದರ ಹಾಗೂ ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಸ್ಫೋಟಕ ಅಂಶ ಒಂದು ಬೆಳಕಿಗೆ ಬಂದಿದ್ದು, ಅತುಲ್​ ಪತ್ನಿ ನಿಕಿತಾ ಸಿಂಘಾನಿಯಾ ನಾನು ನಿಜವಾದ ಸಂತ್ರಸ್ತೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ನನ್ನ ಪತಿ ಸಂತ್ರಸ್ತನಲ್ಲ. ನಾನು ನಿಜವಾದೆ ಸಂತ್ರಸ್ತೆ. ಅಡುಗೆ ಚೆನ್ನಾಗಿ ಮಾಡಿಲ್ಲ ಎಂದು ನನಗೆ ಕಿರುಕುಳು ಕೊಡುತ್ತಿದ್ದ. ನಮ್ಮ ಮನೆಯಲ್ಲಿ ನಾನ್​ವೆಜ್​ ಮಾಡದಿದ್ದರೂ ಚಿಕನ್​ ತಂದು ಅಡುಗೆ ಮಾಡುವಂತೆ ಪೀಡಿಸುತ್ತಿದ್ದ. ಆತ ನನಗೆ ಇಷ್ಟೆಲ್ಲಾ ಹಿಂಸೆ ಕೊಟ್ಟರೂ ನಾನು ಮನೆ ಬಿಟ್ಟು ಹೋಗಿರಲಿಲ್ಲ. ಒಂದು ವೇಳೆ ನಾನು ಹಣಕ್ಕಾಗಿ ಪೀಡಿಸಿದ್ದರೆ ಪ್ರತ್ಯೇಕವಾಗಿ ಏಕೆ ಜೋಈವನ ನಡೆಸುತ್ತಿದ್ದೆ. ನಾನು ಮನೆ ಬಿಟ್ಟು ಹೋಗಲು ಆತ ನೀಡಿದ ಹಿಂಸೆಯೇ ಕಾರಣ.

Techie

2020ರಿಂದಲೂ ನಾವಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಆತ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆತ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಾನು ಕಾನೂನಿನ ಮೂಲಕ ಉತ್ತರ ಕೊಡುತ್ತೇನೆ ಎಂದು ನಿಕಿತಾ ಸಿಂಘಾನಿಯಾ ವಿಚಾರಣೆ ಬಳಿ ಪೊಲೀಸರ ಬಳಿ ಹೇಳಿದ್ದಾರೆ.

ಅತುಲ್ (Atul) ಬರೆದಿರುವ ಡೆತ್ ನೋಟ್ ಹಾಗೂ ಮಾಡಿಟ್ಟಿರುವ ವಿಡಿಯೋದಲ್ಲಿ ತನ್ನ ಮೇಲೆ ಹಾಕಿರುವ 9 ಕೇಸ್ ಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ತನ್ನ ಪತ್ನಿಯಿಂದ ಅನುಭವಿಸಿರುವ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ. ಇದೆಲ್ಲದರ ನಡುವೆ ಪತ್ನಿ ನಿಕಿತಾ ತಮ್ಮ ದಿವಂಗತ ಪತಿಯ ವಿರುದ್ಧವೇ ಆರೋಪವನ್ನು ಮಾಡಿದ್ದು, ಪ್ರಕರಣ ಮುಂದಿನ ದಿನಗಳಲ್ಲಿ ಅದ್ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net