ಈತನ ವಿಚಾರವಾಗಿ ಯಾವುದೇ ರಿಸ್ಕ್​ ತೆಗೆದುಕೊಳ್ಳೋದಿಲ್ಲ... ಹಿರಿಯ ಆಟಗಾರನ ಬಗ್ಗೆ Rohit Sharma ಹೀಗೆನ್ನಲು ಕಾರಣವೇಣು?

Rohit Sharma
Published on

ಬ್ರಿಸ್​ಬೇನ್​: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಯ (Border-Gavaskar Trophy) ಟೆಸ್ಟ್​ ಸರಣಿ ಯ ಮೂರನೇ ಪಂದ್ಯವು ಮಳೆಯಿಂದಾಗಿ ಡ್ರಾಗೊಂಡಿದ್ದು, ಉಭಯ ತಂಡಗಳು ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ (World Test Championship) ಫಿನಾಲೆ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದುಕೊಂಡಿತ್ತಾದರು ಮಳೆಯಿಂದ ಡ್ರಾಗೊಂಡ ಪರಿಣಾಮ ಉಭಯ ತಂಡಗಳು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿವೆ.

ಹಾಲಿ ನಡೆಯುತ್ತಿರುವ ಬಾರ್ಡರ್​​-ಗವಾಸ್ಕರ್​ ಟ್ರೋಫಿಯಲ್ಲಿ (Border-Gavaskar Trophy) ಮೊದಲ ಪಂದ್ಯ ಹೊರತುಪಡಿಸಿದರೆ ಉಳಿದ ಮ್ಯಾಚ್​ಗಳಲ್ಲಿ ಭಾರತದ ಬ್ಯಾಟರ್​ಗಳು ಹೇಳಿಕೊಳ್ಳುವಂತಹ ಪ್ರದರ್ಶವನ್ನು ನೀಡಿಲ್ಲ. ಬೌಲಿಂಗ್​ ವಿಚಾರಕ್ಕೆ ಬರುವುದಾದರೆ ಬುಮ್ರಾಗೆ ಸಮರ್ಥವಾಗಿ ಉಳಿದ ಬೌಲರ್​ಗಳು ಸಾಥ್​ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳು ಆಡಳಿತ ಮಂಡಳಿಯ ನಿದ್ದೆ ಕೆಡಿಸಿರುವ ನಡುವೆಯೇ ತಂಡಕ್ಕೆ ಅನುಭವಿ ವೇಗಿಯ ಅವಶ್ಯಕತೆ ಬಗ್ಗೆ ಕ್ರೀಡಾ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಮೊಹಮ್ಮದ್​ ಶಮಿ (Mohammed Shami) ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹ ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಆಡಿರುವ ಮಾತುಗಳು ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.

Mohammed Shami

ದಿ ಗಾಬಾ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೋಹಿತ್​ ಶರ್ಮ (Rohit Sharma), ಶಮಿ ಅವರ ಫಿಟ್ನೆಸ್​ಗೆ ಸಂಬಂಧಿಸಿದಂತೆ ಎನ್​ಸಿಎಯಿಂದ ಸ್ಪಷ್ಟ ಮಾಹಿತಿ ಲಭ್ಯವಾಗುವವರೆಗೂ ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುವ ಕೆಲಸವನ್ನು ನಾವು ಮಾಡುವುದಿಲ್ಲ. ಎನ್​ಸಿಎಯಲ್ಲಿ ಶಮಿ (Mohammed Shami) ಪುನರ್ವಸತಿಗೆ ಒಳಗಾಗಿದ್ದು, ಅಲ್ಲಿಯವರು ಈ ಬಗ್ಗೆ ಮಾಹಿತಿ ನೀಡಬೇಕಿದೆ.

ಪ್ರಸ್ತುತ ಶಮಿ ದೇಶೀಯ ಟೂರ್ನಿಗಳಲ್ಲಿ ಆಡುತ್ತಿದ್ದು, ಅವರ ಮೊಣಕಾಲಿನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ವರದಿಗಳು ಪ್ರಕಟವಾಗಿದೆ. ಹೀಗಿರುವಾಗ ನಾವವು ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುವ ಅಪಾಯಕ್ಕೆ ಕೈ ಹಾಕುವುದಿಲ್ಲ. ಶಮಿ ಶೇ. 100ರಷ್ಟು ಫಿಟ್​ ಆಗಿದ್ದಾರೆ ಎಂದು ಖಚಿತವಾದ ಬಳಿಕ ಮಾತ್ರವೇ ನಾವು ತಂಡದಲ್ಲಿ ಆಡಿಸುತ್ತೇವೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net