ಈ ರಾಶಿಯವರಿಗಿಂದು ಬಂಗಾರ ಪ್ರಾಪ್ತಿಯಾಗುವ ಯೋಗ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಧನ ನಷ್ಟವಾಗುವುದು. ಮನಕ್ಲೇಷ, ಅಮೂಲ್ಯ ವಸ್ತುಗಳ ಕಳವು, ಮಾತಿನ ಚಕಮಕಿ. ಕುಲದೇವರ ಸ್ಮರಣೆಯಿಂದ ಸಮಾಧಾನ. ಶುಭಸಂಖ್ಯೆ: 5

ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸವಾದೀತು, ಎಚ್ಚರ. ದೇವಾಲಯಕ್ಕೆ ಭೇಟಿ ನೀಡುವಿರಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

ಮಿಥುನ: ಅನಿರೀಕ್ಷಿತ ಧನಲಾಭವಾಗಿ ಖುಷಿ. ವಾಹನ ಖರೀದಿ ಯೋಗವಿದೆ. ಹಿರಿಯರಿಂದ ಅಗತ್ಯ ಉಪದೇಶ. ಗೌರವದಿಂದ ಆಲಿಸಿ. ಶುಭಸಂಖ್ಯೆ: 1

ಕಟಕ: ಗಣಕ ಯಂತ್ರದಿಂದ ಲಾಭವಿದೆ. ಅಲಂಕಾರಿಕ ವಸ್ತುಗಳ ಖರೀದಿಯಿಂದ ಖರ್ಚು, ಧನ ನಷ್ಟ. ಬಡವರಿಗೆ ಆಹಾರ ನೀಡಿ. ಶುಭಸಂಖ್ಯೆ: 9

ಸಿಂಹ: ಮೇಲಧಿಕಾರಿಗಳಿಂದ ತೊಂದರೆ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ವೈದ್ಯರ ಸಲಹೆ ಪಡೆಯಿರಿ. ಸಾಲ ಮರುಪಾವತಿ. ಶುಭಸಂಖ್ಯೆ: 3

ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜತೆಯಲ್ಲಿ ಕಲಹ ಉಂಟಾಗಬಹುದು. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 7

ತುಲಾ: ಮಾನಸಿಕ ವೇದನೆ ಕಾಡಲಿದೆ. ಅಗ್ನಿಭಯವಿದೆ, ಎಚ್ಚರದಿಂದಿರಿ. ಅಶಾಂತಿಯ ವಾತಾವರಣ. ಕುಲದೇವರನ್ನು ಸ್ಮರಣೆ ಮಾಡಿ. ಶುಭಸಂಖ್ಯೆ: 2

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಮಾತಿನ ಚಕಮಕಿ. ಅನಿರೀಕ್ಷಿತವಾಗಿ ಧನ ನಷ್ಟ. ಆರಕ್ಷಕ ವೃತ್ತಿಯವರಿಗೆ ಅಡಚಣೆ. ಶುಭಸಂಖ್ಯೆ: 7

ಧನುಸ್ಸು: ಹೊಸ ಯೋಜನೆ ಅರಂಭವಾಗುವುದು. ವ್ಯವಸಾಯದಲ್ಲಿ ನಿರೀಕ್ಷಿತ ಲಾಭ, ವ್ಯಾಪಾರದಲ್ಲಿ ಉತ್ತಮ ಅಭಿವೃದ್ಧಿಯಾಗಿ ನೆಮ್ಮದಿ. ಶುಭಸಂಖ್ಯೆ: 4

ಮಕರ: ಬಂಗಾರ ಪ್ರಾಪ್ತಿಯಾಗುವ ಯೋಗವಿದೆ. ಗುರುಹಿರಿಯರ ದರ್ಶನ. ಬಂಧುಗಳಿಂದ ಮಾನ್ಯತೆ. ಟ್ರಾವೆಲ್ಸ್​ನವರಿಗೆ ಅಧಿಕ ಲಾಭ. ಶುಭಸಂಖ್ಯೆ: 1

ಕುಂಭ: ಅನಗತ್ಯ ಅಲೆದಾಟ ಮಾಡಬೇಕಾದ ಸ್ಥಿತಿ. ಅಕಾಲ ಭೋಜನ ಅನಿವಾರ್ಯ. ಧನ ನಷ್ಟ. ಆರೋಗ್ಯದತ್ತ ಕಾಳಜಿ ವಹಿಸಿ. ಶುಭಸಂಖ್ಯೆ: 9

ಮೀನ: ಶರೀರದಲ್ಲಿ ತಳಮಳ ಉಂಟಾಗುವುದು. ವೈದ್ಯರ ಭೇಟಿ ಮಾಡುವಿರಿ. ಅತಿಯಾದ ನೋವು, ಶತ್ರುವಿನಿಂದ ತೊಂದರೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net