ಮತ್ತೆ ಸುದ್ದಿಯಲ್ಲಿ ಪವಿತ್ರಾ ಲೋಕೇಶ್; ಹೊಸ ಪ್ರಯತ್ನವಾದರೂ ಏನು?

Naresh Pavithra F
Published on

ವಿಜಯನಗರ: ಕಳೆದ ಕೆಲವು ತಿಂಗಳುಗಳಿಂದ ಆಗಾಗ ಸುದ್ದಿಯಾಗುತ್ತಿರುವ ನಟಿ ಪವಿತ್ರಾ ಲೋಕೇಶ್​ ಇತ್ತೀಚೆಗೆ 'ಮತ್ತೆ ಮದುವೆ' ಎಂಬ ಸಿನಿಮಾದಿಂದಾಗಿ ಸುದ್ದಿಯಾಗಿದ್ದರು. ಇದೀಗ ಮತ್ತೆ ಅವರು ಸುದ್ದಿಯಲ್ಲಿದ್ದು, ಅದಕ್ಕೆ ಅವರ ಹೊಸ ಪ್ರಯತ್ನವೇ ಕಾರಣವಾಗಿದೆ.

ನಟ ನರೇಶ್​ ಜತೆಗಿನ ಪ್ರೀತಿ, ವಿವಾದ, ಮದುವೆ ಕಾರಣಕ್ಕೆ ಸುದ್ದಿಯಲ್ಲಿದ್ದ ಪವಿತ್ರಾ, ಇದೀಗ ಬೇರೆಯದೇ ವಿಚಾರವಾಗಿ ಇಂದು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಅಷ್ಟಕ್ಕೂ ಅವರು ಪಿಎಚ್​ಡಿ ಪರೀಕ್ಷೆ ಬರೆಯಲು ಮುಂದಾಗಿರುವುದೇ ಅವರೀಗ ಇನ್ನೊಮ್ಮೆ ಸುದ್ದಿಯಾಗಲು ಕಾರಣ.

ಬೆಳಗಾವಿ ವಿಸ್ತರಣಾ ಕೇಂದ್ರದ ಮೂಲಕ ಕನ್ನಡ ಸಾಹಿತ್ಯ ವಿಭಾಗದಲ್ಲಿ ಪಿಎಚ್​ಡಿ ಮಾಡಲು ಅರ್ಜಿ ಸಲ್ಲಿಸಿದ್ದ ಪವಿತ್ರಾ ಲೋಕೇಶ್, ಇಂದು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ವಿಶೇಷವೆಂದರೆ ಈ ಸಂದರ್ಭದಲ್ಲಿ ಪವಿತ್ರಾ ಜತೆ ನರೇಶ್ ಕೂಡ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net