ಇಂದು ಈ ರಾಶಿಯವರ ಆಸೆ-ಭಾವನೆಗಳು ಈಡೇರುವುವು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಸೆ ಮತ್ತು ಭಾವನೆಗಳು ಈಡೇರುವವು. ತಂದೆಯ ಬಂಧುಗಳಿಂದ ನಷ್ಟವಾಗುವ ಸಾಧ್ಯತೆ. ಪುಣ್ಯಕರ್ಮ ಫಲ ಪ್ರಾಪ್ತಿ. ಶುಭಸಂಖ್ಯೆ: 1

ವೃಷಭ: ಹತ್ತಿರದ ಪ್ರಯಾಣ ಮಾಡಬೇಕಾಗುವುದು. ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಆಸ್ತಿಯಿಂದ ಲಾಭ ದೊರೆಯಲಿದೆ. ಶುಭಸಂಖ್ಯೆ: 9

ಮಿಥುನ: ಹಣ ಮತ್ತು ಉದ್ಯೋಗ ನಷ್ಟವಾಗುವ ಅಪಾಯವಿದೆ. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲ. ಶುಭಸಂಖ್ಯೆ: 5

ಕಟಕ: ಸ್ವಂತ ಉದ್ಯೋಗದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 7

ಸಿಂಹ: ನಷ್ಟದ ಪ್ರಮಾಣ ಜಾಸ್ತಿಯಾಗಲಿದೆ. ಬಡ್ತಿ ಮತ್ತು ಪ್ರಶಂಸೆ ಸಿಗಲಿದೆ. ತಂದೆಯಿಂದ ಅನುಕೂಲ ಒದಗಿ ಬಂದು ಮಾನಸಿಕ ನೆಮ್ಮದಿ. ಶುಭಸಂಖ್ಯೆ: 7

ಕನ್ಯಾ: ಆಸ್ತಿ ನಷ್ಟವಾಗುವ ಸಾಧ್ಯತೆ. ಉನ್ನತ ಅಧಿಕಾರಿಗಳಿಗೆ ನಷ್ಟ ಸಂಭವಿಸಿ ಬೇಸರ. ದಾಂಪತ್ಯ ಸಮಸ್ಯೆ ಜಾಸ್ತಿಯಾಗಿ ಇಡೀ ದಿನ ಕಿರಿಕಿರಿ. ಶುಭಸಂಖ್ಯೆ: 3

ತುಲಾ: ಉದ್ಯೋಗ ಲಾಭ. ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಸಮಾಧಾನ. ಶತ್ರು ದಮನ. ಋಣ ರೋಗ ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ:1

ವೃಶ್ಚಿಕ: ಪ್ರಯಾಣ ಮಾಡಬೇಕಾಗಿದೆ. ದೂರ ಪ್ರದೇಶಕ್ಕೆ ತೆರಳುವಿರಿ. ರಾಜಕೀಯದವರ ಸಂಪರ್ಕದಲ್ಲಿ ಇರುವವರಿಗೆ ಅನುಕೂಲ. ಶುಭಸಂಖ್ಯೆ: 7

ಧನುಸ್ಸು: ಹಣ ದೊರಕುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆಯ ವಾತಾವರಣ ಕಲುಷಿತವಾದೀತು. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 4

ಮಕರ: ಶುಭಕಾರ್ಯಕ್ಕೆ ವಿಘ್ನ ಉಂಟಾಗಿ ಬೇಸರ. ಸ್ನೇಹಿತರು ದೂರವಾದಾರು. ಉನ್ನತ ಅಧಿಕಾರಿಗಳಿಂದ ಅಂತರ ಕಾದುಕೊಳ್ಳಿ. ಶುಭಸಂಖ್ಯೆ: 3

ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ ಮಾಡಬೇಕಾದೀತು. ದಾಂಪತ್ಯ ಸಮಸ್ಯೆ ಉಲ್ಬಣ. ಮಾತಿನಿಂದ ತೊಂದರೆಯಾಗಲಿದೆ. ಶುಭಸಂಖ್ಯೆ: 6

ಮೀನ: ಗರ್ಭಿಣಿಯರು ಹೆಚ್ಚಿನ ಎಚ್ಚರಿಕೆ ವಹಿಸಿ. ಮನೋ ರೋಗಗಳು ಜಾಸ್ತಿಯಾಗಬಹುದು. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ಸಾಧ್ಯತೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net