ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ: ಈಗಾಗಲೇ 3,773 ಮಂದಿ ಮತ ಚಲಾವಣೆ

House Voting
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಕರ್ನಾಟಕದಲ್ಲಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಮತ ಚಲಾವಣೆ ಮಾಡಿದ್ದಾರೆ. ಈ ಕುರಿತ ಅಧಿಕೃತ ಮಾಹಿತಿ ಇಂದು ಪ್ರಕಟಗೊಂಡಿದೆ.

ಎಂಬತ್ತು ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಆ ಪ್ರಕಾರ ಇಂದು ಬೆಂಗಳೂರಿನಲ್ಲೇ ಒಟ್ಟು 3,773 ಮಂದಿ ಮನೆಯಿಂದಲೇ ಮತ ಚಲಾವಣೆ ಮಾಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 80 ವರ್ಷ ಮೇಲ್ಪಟ್ಟ ಮತದಾರರು 2,35,140 ಮಂದಿ ಇದ್ದು, ಆ ಪೈಕಿ 9,152 ಮಂದಿ ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದರು. ಹಾಗೆಯೇ 26,058 ಅಂಗವಿಕಲ ಮತದಾರರಿದ್ದು, ಅವರಲ್ಲಿ 119 ಮಂದಿ ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಹೀಗೆ ನೋಂದಣಿ ಮಾಡಿಕೊಂಡವರ ಪೈಕಿ 80 ವರ್ಷ ಮೇಲ್ಪಟ್ಟ 3,727 ಮಂದಿ ಹಾಗೂ 46 ಮಂದಿ ಸೇರಿ ಒಟ್ಟು 3,773 ಮತ ಚಲಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net