More

    ಮನೆ ಕಳ್ಳನ ಸೆರೆ; 16 ಕೇಸ್ ಬೆಳಕಿಗೆ

    ಬೆಂಗಳೂರು: ಅತ್ಯಾಧುನಿಕ ಉಪಕರಣ ಬಳಸಿ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೋಟೆ ಗ್ರಾಮದ ಗಣೇಶ ಅಲಿಯಾಸ್ ಟಚ್ಚು ಬಂಧಿತ. 210 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ ಬೆಳ್ಳಿ ವಸ್ತುಗಳು ಸೇರಿ ಒಟ್ಟು 13.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ಪ್ರಭಾಕರ ರೆಡ್ಡಿ ಅವರ ಪತ್ನಿ ಪವಿತ್ರಾ ಮನೆಯಲ್ಲಿ ಕಳ್ಳತನವಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಾಲಹಳ್ಳಿ ಕ್ರಾಸ್ ಕಮ್ಮಗೊಂಡನಹಳ್ಳಿ ಬಳಿ ನೆಲೆಸಿದ್ದ ವೃತ್ತಿಪರ ಗಣೇಶ್ ವಿರುದ್ಧ ವಿವಿಧ ಠಾಣೆಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುತ್ತಿದ್ದ. ಅದರಲ್ಲಿಯೂ ಮಾರ್ಕೆಟ್ ಬರುತ್ತಿದ್ದ ಅತ್ಯಾಧುನಿಕ ಗ್ಯಾಸ್ ಕಟರ್, ಕಟರ್ ಸೇರಿದಂತೆ ಮಷನ್‌ಗಳನ್ನು ಖರೀದಿಸಿ ಅದರ ಮೂಲಕ ಮನೆಗಳಿಗೆ ಕನ್ನ ಹಾಕಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಮೋಜು ಮಸ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಪುಟ್ಟೇನಹಳ್ಳಿ ಪೊಲೀಸರು, ಇತ್ತೀಚೆಗೆ ಬಂಧಿಸಿ ಜೈಲಿಗೆ ಕಳುಹಿಸಿದ್ದರು.

    ಜಾಮೀನು ಪಡೆದು ಹೊರಬಂದು ಮತ್ತೆ ಕೃತ್ಯ ಎಸಗುತ್ತಿದ್ದ. ಈತನ ಬಂಧನದಿಂದ ರಾಜರಾಜೇಶ್ವರಿನಗರ, ಸುಬ್ರಹ್ಮಣ್ಯಪುರ, ಚಂದ್ರಾಲೇಔಟ್ ಮತ್ತು ಅನ್ನಪೂರ್ಣೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 16 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts