

ಮೇಷ: ಹೆಚ್ಚು ಆದಾಯ ದೊರೆತು ಮಾನಸಿಕ ಸಮಾಧಾನ. ಮಾತುಕತೆಗಳಲ್ಲಿ ಬದಲಾವಣೆ. ಆಸ್ತಿ ವಿಚಾರದಲ್ಲಿ ಪ್ರಗತಿ ಕಡಿಮೆ. ಶುಭಸಂಖ್ಯೆ: 9
ವೃಷಭ: ವಿದ್ಯಾರ್ಥಿಗಳಿಗೆ ಅಶುಭದಾಯಕ ದಿನ. ಕೃಷಿಕರಿಗೆ ಹಿನ್ನಡೆಯಾಗುವ ಸಾಧ್ಯತೆ. ಉದ್ವೇಗಕ್ಕೆ ಒಳಗಾಗದೆ ಸಮಾಧಾನದಿಂದ ಇರಿ. ಶುಭಸಂಖ್ಯೆ:1
ಮಿಥುನ: ಉದ್ಯೋಗದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಿ. ಜೀವನೋಪಾಯಕ್ಕೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದು ಜಾಣತನ. ಶುಭಸಂಖ್ಯೆ: 5
ಕಟಕ: ಹಣ ಹೂಡಿಕೆಯಲ್ಲಿ ಎಚ್ಚರಿಕೆ. ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಹಿಸಿ. ಕಾರ್ವಿುಕ ವರ್ಗದ ಏಜೆನ್ಸಿಗಳಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 8
ಸಿಂಹ: ಆಮದು ರಫ್ತಿನಲ್ಲಿ ಲಾಭ ಬರುವುದು. ಕಟ್ಟಡದ ದುರಸ್ತಿಗಾಗಿ ಹಣವ್ಯಯವಾಗುವುದು. ಸರ್ಕಾರಿ ಕೆಲಸಗಳು ಸರಾಗವಾಗಲಿವೆ. ಶುಭಸಂಖ್ಯೆ: 3
ಕನ್ಯಾ: ಕೆಲಸಗಳನ್ನು ನಿರ್ಭಯವಾಗಿ ಮುಗಿಸಿ. ಹೊಗಳಿಕೆಗೆ ಮರುಳಾಗಬೇಡಿ. ಸಮಚಿತ್ತವಿರಲಿ. ಇಂಟೀರಿಯರ್ ಡಿಸೈನರ್ಗಳಿಗೆ ಶುಭ. ಶುಭಸಂಖ್ಯೆ: 3
ತುಲಾ: ಮಗಳಿಂದ ಶುಭವಾರ್ತೆ ಕೇಳುವಿರಿ. ಸರ್ಕಾರಿ ಸವಲತ್ತುಗಳು ದೊರೆಯುತ್ತವೆ. ಸಹೋದರಿಯರಿಂದ ಸಹಕಾರ ಸಿಕ್ಕು ನೆಮ್ಮದಿ. ಶುಭಸಂಖ್ಯೆ: 4
ವೃಶ್ಚಿಕ: ಮಕ್ಕಳ ಆರೋಗ್ಯದಲ್ಲಿ ಗಮನಹರಿಸಿ. ಕ್ರೀಡಾಪಟುಗಳಿಗೆ ಶುಭ ವಾರ್ತೆ ಬರಲಿದೆ. ವರದಿಗಾರರು ಎಚ್ಚರಿಕೆಯಿಂದಿರಿ. ಶುಭಸಂಖ್ಯೆ: 5
ಧನುಸ್ಸು: ಸಿನಿಮಾರಂಗದವರಿಗೆ ಉತ್ತಮ ದಿನ. ಸಂಬಂಧಿಗಳಿಂದ ಧನಸಹಾಯ ದೊರೆಯುವುದು. ವಿವಾಹ ಯೋಗ ಕೂಡಿಬರಲಿದೆ. ಶುಭಸಂಖ್ಯೆ: 7
ಮಕರ: ಸಂಗೀತ ಮತ್ತಿತರ ಕಲಾವಿದರಿಗೆ ಶುಭ. ಸಣ್ಣಪುಟ್ಟ ಅಡಚಣೆಗಳಿಂದ ತೊಂದರೆಯಾಗದು. ವಿದ್ಯಾರ್ಥಿಗಳು ಸಾಧನೆ ಮಾಡುವಿರಿ. ಶುಭಸಂಖ್ಯೆ: 2
ಕುಂಭ: ಪ್ರಭಾವಿ ವ್ಯಕ್ತಿಗಳಿಂದ ಸಹಾಯ ದೊರೆಯುವುದು. ಋಣಾತ್ಮಕ ಚಿಂತೆಗಳು ಅಧಿಕ. ತರಕಾರಿ ವ್ಯಾಪಾರಿಗಳಿಗೆ ಒಳ್ಳೆಯ ದಿನ. ಶುಭಸಂಖ್ಯೆ: 7
ಮೀನ: ಸಂಗೀತ, ನೃತ್ಯ ಕಲಾವಿದರಿಗೆ ಉತ್ತಮ ಆದಾಯ. ಸ್ನೇಹಿತರೊಂದಿಗೆ ಕಾಲಹರಣ ಮಾಡುವಿರಿ. ಆಕಸ್ಮಿಕ ಧನ ಲಾಭ ಸಾಧ್ಯತೆ. ಶುಭಸಂಖ್ಯೆ: 8
ದ