ಈ ರಾಶಿಯವರಿಗಿಂದು ನಾನಾ ರೀತಿಯ ಸಂಪಾದನೆ ಆಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಾನಸಿಕ ಅಶಾಂತಿ. ದೂರ ಪ್ರಯಾಣ ಮಾಡುವಿರಿ. ಶತ್ರು ಬಾಧೆ. ಕೋರ್ಟ್ ವ್ಯಾಜ್ಯಗಳಿಂದ ತೊಂದರೆಯಾಗುವುದು. ಶುಭಸಂಖ್ಯೆ: 5

ವೃಷಭ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ವಾಹನ ಯೋಗ. ತೀರ್ಥಕ್ಷೇತ್ರಗಳ ದರ್ಶನ. ಕಾರ್ಯ ವಿಘಾತ. ಸ್ಥಳ ಬದಲಾವಣೆ. ಶುಭಸಂಖ್ಯೆ: 9

ಮಿಥುನ: ಕುಟುಂಬ ಸೌಖ್ಯ. ಕೀರ್ತಿ ಲಾಭ. ಬಂಧುಮಿತ್ರರ ಭೇಟಿಯಾಗುವುದು. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅಧಿಕ ಖರ್ಚು. ಶುಭಸಂಖ್ಯೆ: 2

ಕಟಕ: ಅಗತ್ಯವಿದ್ದಲ್ಲಿ ಕಠೋರವಾಗಿ ಮಾತನಾಡುವಿರಿ. ಅನ್ಯರಿಗೆ ಉಪಕಾರ ಮಾಡುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಶುಭಸಂಖ್ಯೆ: 7

ಸಿಂಹ: ಮಾತಾಪಿತರ ಸೇವೆ ಮಾಡುವಿರಿ. ನಾನಾ ರೀತಿಯ ಸಂಪಾದನೆಯಾಗಲಿದೆ. ಮನಃಶಾಂತಿ, ದೇವರಲ್ಲಿ ಭಕ್ತಿ, ಗುರುಗಳ ಭೇಟಿ. ಶುಭಸಂಖ್ಯೆ: 6

ಕನ್ಯಾ: ಸಕಲರೊಡನೆ ಪ್ರೀತಿಯಿಂದ ಇರುವಿರಿ. ಆರ್ಥಿಕ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಶ್ರಮವಹಿಸಿ. ಶುಭಸಂಖ್ಯೆ: 4

ತುಲಾ: ಉದ್ಯೋಗದಲ್ಲಿ ಬಡ್ತಿ. ಮಾತೃ ವಲಯದಿಂದ ಸಹಾಯ. ಅವಿವಾಹಿತರಿಗೆ ವಿವಾಹ ಯೋಗ. ಇಷ್ಟ ವಸ್ತು ಖರೀದಿ. ಬಾಕಿ ವಸೂಲಿ. ಶುಭಸಂಖ್ಯೆ: 4

ವೃಶ್ಚಿಕ: ಪರರ ಧನಪ್ರಾಪ್ತಿ. ಮನಸ್ಸಿನಲ್ಲಿ ಭಯ ಭೀತಿ ಕಾಡಲಿದೆ. ದೈವೀ ಚಿಂತನೆ ಮಾಡುವಿರಿ. ವಾಹನ ಅಪಘಾತ, ಕೈ ಕಾಲಿಗೆ ಏಟು. ಶುಭಸಂಖ್ಯೆ: 1

ಧನುಸ್ಸು: ಸಮಾಜದಲ್ಲಿ ಗೌರವ. ಹಣ ಎಷ್ಟು ಬಂದರೂ ಉಳಿಯುವುದಿಲ್ಲ. ವ್ಯರ್ಥ ಧನಹಾನಿಯಾಗಿ ಬೇಸರ. ಇಲ್ಲಸಲ್ಲದ ತಕರಾರು. ಶುಭಸಂಖ್ಯೆ: 6

ಮಕರ: ಕುಟುಂಬದಲ್ಲಿ ಕಲಹ. ದುಷ್ಟಬುದ್ಧಿ ಒಳ್ಳೆಯದಲ್ಲ. ಸ್ಥಿರಾಸ್ತಿ ಮಾರಾಟದಿಂದ ಲಾಭವಿದೆ. ದಾನ ಧರ್ಮದಲ್ಲಿ ಆಸಕ್ತಿ, ಭೂಲಾಭ. ಶುಭಸಂಖ್ಯೆ: 3

ಕುಂಭ: ಸ್ಥಗಿತ ಕಾರ್ಯಗಳು ಮುಂದುವರಿಯುತ್ತವೆ. ಆಪ್ತರಿಂದ ಸಹಾಯ ಸಿಗುವುದು. ಮಹಿಳೆಯರಿಗೆ ಶುಭ. ಮಾತಿನ ಚಕಮಕಿ. ಶುಭಸಂಖ್ಯೆ: 2

ಮೀನ: ಯತ್ನ ಕಾರ್ಯಾನುಕೂಲ. ಋಣಬಾಧೆ ಕಾಡುವುದು. ಅಧಿಕ ಕೋಪ, ಅನಾರೋಗ್ಯದ ಕಾಟ. ಇತರರ ಮಾತಿಗೆ ಮರುಳಾಗಬೇಡಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net