

ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ. ಸ್ಥಿರಾಸ್ತಿ ಮತ್ತು ವಾಹನ ನೋಂದಣಿಗೆ ಸಕಾಲ. ಆರ್ಥಿಕ ಸಂಕಷ್ಟ ಬಗೆಹರಿಯುವುದು. ಶುಭಸಂಖ್ಯೆ: 4
ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿ. ಸಾಲದ ಸುಳಿಗೆ ಸಿಲುಕುವ ಸನ್ನಿವೇಶ. ಅನಾರೋಗ್ಯಕ್ಕೆ ಮನೆಮದ್ದು ಸಾಕು. ಮಾನಸಿಕ ನೆಮ್ಮದಿ ಭಂಗ. ಶುಭಸಂಖ್ಯೆ: 2
ಮಿಥುನ: ಅಧಿಕ ಧನವ್ಯಯವಾಗುವುದು. ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ. ನಾನಾ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಶುಭಸಂಖ್ಯೆ: 1
ಕಟಕ: ಅಧಿಕ ಲಾಭ ಹರಿದು ಬರಲಿದೆ. ಅಹಂಭಾವದ ಮಾತಿನಿಂದ ಮಿತ್ರರಿಗೆ ನೋವು. ಕೃಷಿಕರಿಗೆ ವಿಶೇಷ ದಿನ. ಇಷ್ಟದೇವರನ್ನು ಭಜಿಸಿ. ಶುಭಸಂಖ್ಯೆ: 7
ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಅಧಿಕ ಖರ್ಚು. ಕೆಲಸದ ನಿಮಿತ್ತ ದೂರಪ್ರಯಾಣ ಅನಿವಾರ್ಯ. ಉದ್ಯೋಗ ಲಾಭ. ಶುಭಸಂಖ್ಯೆ: 9
ಕನ್ಯಾ: ಮಹಿಳೆಯರಿಗೆ ನಷ್ಟ. ಪರಸ್ಥಳದಲ್ಲಿ ಉದ್ಯೋಗ ಸಿಗುವುದು. ನಷ್ಟದ ಆತಂಕ, ನಿದ್ರಾಭಂಗ. ಮಿತ್ರರಿಂದ ಅನಿರೀಕ್ಷಿತ ಸಹಾಯ. ಶುಭಸಂಖ್ಯೆ: 6
ತುಲಾ: ಉದ್ಯೋಗದಲ್ಲಿ ತೊಂದರೆ. ಕೆಲಸದ ಬದಲಾವಣೆ ಸಾಧ್ಯತೆ. ಆತ್ಮಗೌರವಕ್ಕೆ ಪೂರಕವಾಗಿ ಅದೃಷ್ಟ ಒಲಿದು ಬರುವುದು. ಶುಭಸಂಖ್ಯೆ: 5
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಮಿತ್ರರೊಂದಿಗೆ ಪ್ರಯಾಣ. ಅಡೆತಡೆಗಳ ನಿವಾರಣೆ. ಮನಸ್ಸಿನಲ್ಲಿ ಮಂದಹಾಸ. ಶುಭಸಂಖ್ಯೆ: 5
ಧನುಸ್ಸು: ಸಗಟು ವ್ಯಾಪಾರಿಗಳಿಗೆ ಉತ್ತಮ ಭವಿಷ್ಯವಿದೆ. ಅಧಿಕಾರಿಗಳ ಭೇಟಿ. ಸಾಲಗಾರರಿಂದ ತೊಂದರೆ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ. ಶುಭಸಂಖ್ಯೆ: 7
ಮಕರ: ಮಕ್ಕಳಿಂದ ಅವಘಡಗಳಾದಾವು. ನ್ಯಾಯಾಲಯಕ್ಕೆ ಅಲೆದಾಟ. ಕಲ್ಪನೆ ಭಾವನೆಗಳಲ್ಲಿ ವಿಹರಿಸುವಿರಿ, ದುರಾಲೋಚನೆ ಬೇಡ. ಶುಭಸಂಖ್ಯೆ: 1
ಕುಂಭ: ಆಸ್ತಿ ಮಾರಾಟದ ಆಲೋಚನೆ ಮಾಡುವಿರಿ. ಪ್ರಯಾಣದಲ್ಲಿ ವಸ್ತುಗಳು ಕಳುವಾದಾವು, ಹುಷಾರು. ದಾನ ಮಾಡಿದ ಧನ್ಯತಾ ಭಾವ. ಶುಭಸಂಖ್ಯೆ: 3
ಮೀನ: ಉನ್ನತ ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ. ತಾಯಿಗೆ ಆರೋಗ್ಯ ಸಮಸ್ಯೆ ಕಂಡು ಬರುವುದು. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 5