ಈ ರಾಶಿಯವರಿಗಿಂದು ಆಕಸ್ಮಿಕ ಧನಲಾಭವಾಗಿ ಮನಸ್ಸಿಗೆ ನಿರಾಳ ಭಾವ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಯತ್ನ ಕಾರ್ಯಗಳಲ್ಲಿ ಜಯ ದೊರೆಯುವುದು. ಸ್ನೇಹಿತರಿಂದ ಸಹಾಯ. ಉನ್ನತ ಸ್ಥಾನಮಾನ ಗೌರವ ಲಭ್ಯ. ಮನಃಶಾಂತಿ. ಶುಭಸಂಖ್ಯೆ: 9

ವೃಷಭ: ಅನಾರೋಗ್ಯ, ಶೀತ ಸಂಬಂಧಿ ರೋಗಗಳು. ಮಾನಸಿಕ ಒತ್ತಡ, ಅಧಿಕ ಖರ್ಚು. ಸಾಲಗಾರರಿಂದ ತೊಂದರೆಯಾದೀತು. ಶುಭಸಂಖ್ಯೆ: 8

ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ಗಣ್ಯ ವ್ಯಕ್ತಿಯೊಬ್ಬರ ಭೇಟಿಯಾಗುವ ಸಾಧ್ಯತೆ ಜಾಸ್ತಿಯಿದೆ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ:6

ಕಟಕ: ಪಾಪ ಬುದ್ಧಿ ಕಾಡಬಹುದು, ಎಚ್ಚರದಿಂದ ಇರಿ. ದುಃಖ ತರುವ ಪ್ರಸಂಗಗಳು. ದ್ರವ್ಯನಾಶ, ಧನ ನಷ್ಟ ಸಂಭವ. ಕೋಪ ಜಾಸ್ತಿ. ಶುಭಸಂಖ್ಯೆ: 2

ಸಿಂಹ: ನಿರೀಕ್ಷಿತ ಕಾರ್ಯ ಕೈಗೂಡದೇ ಬೇಸರ. ಮಾನಸಿಕ ಅಶಾಂತಿ. ಅನ್ಯ ಜನರಲ್ಲಿ ದ್ವೇಷ ಸಾಧಿಸಬೇಡಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 7

ಕನ್ಯಾ: ಈ ದಿನ ಭಯಭೀತಿ ನಿವಾರಣೆಯಾಗುವುದು. ಮಾನಸಿಕ ನೆಮ್ಮದಿ. ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ. ಶುಭಸಂಖ್ಯೆ: 4

ತುಲಾ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆಯಾಗುವ ಸನ್ನಿವೇಶ. ಅಕಾಲ ಭೋಜನ. ಬಂಧುಗಳಲ್ಲಿ ಕಲಹವಾಗ ಬಹುದು. ಆಲಸ್ಯ ಮನೋಭಾವ. ಶುಭಸಂಖ್ಯೆ:8

ವೃಶ್ಚಿಕ: ಸಲ್ಲದ ಅಪವಾದ ಬರಬಹುದು. ದುಷ್ಟಬುದ್ಧಿ ಒಳ್ಳೆಯದಲ್ಲ. ದಾಯಾದಿಗಳಲ್ಲಿ ಕಲಹ. ಅಧಿಕ ಖರ್ಚು. ವ್ಯಾಸಂಗಕ್ಕೆ ತೊಂದರೆ. ಶುಭಸಂಖ್ಯೆ: 3

ಧನುಸ್ಸು: ವೃಥಾ ತಿರುಗಾಟ ಮಾಡಬೇಕಾಗುವುದು. ವ್ಯಾಪಾರ ದಲ್ಲಿ ಅಲ್ಪ ಲಾಭ. ವಿದ್ಯಾಭಿವೃದ್ಧಿಯಾಗಲಿದ್ದು, ಹೊರದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 1

ಮಕರ: ಆಕಸ್ಮಿಕ ಧನಲಾಭವಾಗಿ ಮನಸ್ಸಿಗೆ ನಿರಾಳ ಭಾವ. ವಿವಾಹ ಯೋಗವಿದೆ. ಭೂಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 9

ಕುಂಭ: ಉದ್ಯೋಗದಲ್ಲಿ ತೊಂದರೆ ಎದುರಿಸಬೇಕಾಗುವುದು. ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ ಕಾಡುವುದು. ಶತ್ರು ಬಾಧೆ. ಶುಭಸಂಖ್ಯೆ: 6

ಮೀನ: ನೀಚ ಜನರ ಸಹವಾಸ ತಪ್ಪಿಸಿಕೊಳ್ಳಿ. ಅಧಿಕಾರಿಗಳಲ್ಲಿ ಕಲಹವಾದೀತು. ಆರ್ಥಿಕ ಪರಿಸ್ಥಿತಿ ಏರುಪೇರು. ಅಪವಾದ, ನಿಂದನೆ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net