

ಮೇಷ: ಪಾಲುದಾರಿಕೆಯ ಹಣಕಾಸು ವ್ಯವಹಾರದ ಕುರಿತು ಚರ್ಚೆ. ಕುಟುಂಬದಲ್ಲಿ ಶುಭ ಕೆಲಸ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆ. ಶುಭಸಂಖ್ಯೆ: 9
ವೃಷಭ: ಬಂಧುಗಳು ದೂರವಾಗುವರು. ಸಹೋದರನಿಂದ ಸಹಾಯ. ಮಾನಸಿಕ ನೆಮ್ಮದಿ ಭಂಗ. ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭ. ಶುಭಸಂಖ್ಯೆ: 8
ಮಿಥುನ: ಹಿರಿಯ ಸಹೋದರಿಯಿಂದ ಧನಾಗಮ. ಶತ್ರುಗಳಿಂದ ತೊಂದರೆ ಆಗಲಿದೆ. ಭೂಮಿ ವಿಚಾರವಾಗಿ ಕೋರ್ಟ್ಗೆ ಅಲೆದಾಟ. ಶುಭಸಂಖ್ಯೆ: 2
ಕಟಕ: ಕೆಲಸಗಳಲ್ಲಿ ಮುನ್ನಡೆ. ಉದ್ಯೋಗದಲ್ಲಿ ಹಿನ್ನಡೆ ಆದರೂ ಪ್ರಗತಿ. ತಂದೆಯಿಂದ ಮಾರ್ಗದರ್ಶನ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ:4
ಸಿಂಹ: ಆಕಸ್ಮಿಕ ಘಟನೆ. ದೂರ ಪ್ರಯಾಣದ ಸಾಧ್ಯತೆ. ಆಸ್ತಿ ವಿಚಾರದಲ್ಲಿ ತಂದೆ-ಮಕ್ಕಳಲ್ಲಿ ಒಮ್ಮತ. ಆರೋಗ್ಯಕ್ಕೆ ಕಂಟಕ, ಎಚ್ಚರ. ಶುಭಸಂಖ್ಯೆ: 7
ಕನ್ಯಾ: ಕೃಷಿಕರಿಗೆ ಅಧಿಕ ಲಾಭ. ಅನಿರೀಕ್ಷಿತ ಆದಾಯ ಬರಲಿದೆ. ದಾಂಪತ್ಯದಲ್ಲಿ ವಿರಸ. ಅನಗತ್ಯ ಕಿರಿಕಿರಿ. ಮಗಳಿಗೆ ಮದುವೆ ನಿಶ್ಚಯ. ಶುಭಸಂಖ್ಯೆ: 6
ತುಲಾ: ಮಿತ್ರರೇ ಶತ್ರುವಾಗುವರು. ಸಾಲ ಬಾಧೆಗಳಿಂದ ಹೊರಬರುವಿರಿ. ಅನಿರೀಕ್ಷಿತ ಧನ ಲಾಭ. ನೀವಾಡುವ ಮಾತಿನಲ್ಲಿ ಎಚ್ಚರವಿರಲಿ. ಶುಭಸಂಖ್ಯೆ:2
ವೃಶ್ಚಿಕ: ಪ್ರಯಾಣದಲ್ಲಿ ಕಳವು ಸಾಧ್ಯತೆ. ಆರೋಗ್ಯದಲ್ಲಿ ಸುಧಾರಣೆ. ಮೇಲಧಿಕಾರಿಗಳಿಂದ ಪ್ರಶಂಸೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6
ಧನುಸ್ಸು: ತಾಯಿಯಿಂದ ಧನ ಲಾಭ. ಮಕ್ಕಳಿಂದ ತೊಂದರೆ ಸಾಧ್ಯತೆ. ನೆಮ್ಮದಿ ಇಲ್ಲದ ಜೀವನ. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಶುಭಸಂಖ್ಯೆ: 5
ಮಕರ: ಸ್ಥಿರಾಸ್ತಿ-ವಾಹನ ಪ್ರಾಪ್ತಿ. ಕುಟುಂಬದಲ್ಲಿ ವೈಮನಸ್ಸು ಉಂಟಾದೀತು. ಪ್ರೇಮದ ವಿಚಾರದಲ್ಲಿ ತೊಂದರೆ. ಮೋಸ ಹೋದೀರಿ, ಹುಷಾರು. ಶುಭಸಂಖ್ಯೆ:1
ಕುಂಭ: ಸ್ವಯಂಕೃತ ಅಪರಾಧದಿಂದ ಸಂಕಷ್ಟ. ಬಂಧುಗಳಿಂದ ಸಹಾಯ. ನೆಮ್ಮದಿ. ಕುಟುಂಬದಿಂದ ದೂರ ಉಳಿಯುವ ಆಲೋಚನೆ. ಶುಭಸಂಖ್ಯೆ: 6
ಮೀನ: ಹೆಣ್ಣು ಮಕ್ಕಳಿಂದ ಧನಾಗಮನ. ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರಯಾಣ. ಹಣಕಾಸು ವಿಚಾರವಾಗಿ -ಮಿತ್ರರಲ್ಲಿ ವೈಮನಸ್ಸು. ಶುಭಸಂಖ್ಯೆ: 3