

ಮೇಷ: ಅನ್ಯರ ಅವಲಂಬನೆಯಿಂದ ತೊಂದರೆ ಯಾಗುವುದು. ಕಾರ್ವಿುಕರಿಗೆ ಸುದಿನ. ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ. ಶುಭಸಂಖ್ಯೆ:5
ವೃಷಭ: ಆರೋಗ್ಯದಲ್ಲಿ ಏರುಪೇರು ಆಗಬಹುದು. ಪರರಿಗೆ ಸಹಾನುಭೂತಿ ತೋರುವಿರಿ. ಆದಾಯಕ್ಕಿಂತ ಖರ್ಚು ಜಾಸ್ತಿ ಇರಲಿದೆ. ಶುಭಸಂಖ್ಯೆ: 8
ಮಿಥುನ: ಹಳೇ ಮಿತ್ರರ ಭೇಟಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಅಪವಾದ ಕೇಳುವ ಸನ್ನಿವೇಶ. ಪರಸ್ತ್ರೀ -ಪುರುಷರಿಂದ ತೊಂದರೆ. ಶುಭಸಂಖ್ಯೆ: 8
ಕಟಕ: ಕಾರ್ಯಕ್ಷೇತ್ರದಲ್ಲಿ ಒತ್ತಡ ಹೆಚ್ಚಲಿದೆ. ಶ್ರಮಕ್ಕೆ ತಕ್ಕ ಫಲ ಸಿಗುವುದು. ದೂರ ಪ್ರಯಾಣ. ದಾಂಪತ್ಯದಲ್ಲಿ ವಿರಸ. ಅಧಿಕ ಖರ್ಚು. ಶುಭಸಂಖ್ಯೆ: 3
ಸಿಂಹ: ಕೋರ್ಟ್ ಕಾರ್ಯಗಳಲ್ಲಿ ಜಯ ನಿಮಗಾಗುವುದು. ಧಾರ್ವಿುಕ ವಿಚಾರದಲ್ಲಿ ಆಸಕ್ತಿ. ಕೃಷಿಕರಿಗೆ ಲಾಭ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ಶುಭಸಂಖ್ಯೆ: 7
ಕನ್ಯಾ: ಅತಿಯಾದ ಆತ್ಮವಿಶ್ವಾಸದಿಂದ ನಷ್ಟವಾಗಲಿದೆ. ದುಡುಕು ಸ್ವಭಾವ ಬಿಡಿ. ಆಕಸ್ಮಿಕ ಧನಲಾಭವಿದೆ. ಮದುವೆ ವಿಚಾರದಲ್ಲಿ ಆತಂಕ. ಶುಭಸಂಖ್ಯೆ:8
ತುಲಾ: ಉದ್ಯೋಗದಲ್ಲಿ ತೊಂದರೆ. ಕುಟುಂಬದಲ್ಲಿ ತಾಳ್ಮೆ ಬೇಕು. ವಂಚಕರ ಮಾತಿಗೆ ಮರುಳಾಗದಿರಿ. ಸಾಲದ ಸಮಸ್ಯೆ ಎದುರಾದೀತು. ಶುಭಸಂಖ್ಯೆ: 2
ವೃಶ್ಚಿಕ: ಸಹೋದ್ಯೋಗಿಗಳೊಡನೆ ವೈಮನಸ್ಸು. ಕೂಡಿಟ್ಟ ಹಣ ಖರ್ಚು. ಗೃಹ ನಿರ್ವಣಕ್ಕೆ ಚಾಲನೆ. ಸ್ನೇಹಿತರಿಂದ ನಂಬಿಕೆ ದ್ರೋಹ. ಶುಭಸಂಖ್ಯೆ: 9
ಧನುಸ್ಸು: ಯತ್ನ ಕಾರ್ಯದಲ್ಲಿ ಅನುಕೂಲ. ಅನವಶ್ಯಕ ತಿರುಗಾಟ ಮಾಡಬೇಕಾಗುವುದು. ಆರೋಗ್ಯದಲ್ಲಿ ಏರುಪೇರು. ಚಂಚಲ ಮನಸ್ಸು. ಶುಭಸಂಖ್ಯೆ:3
ಮಕರ: ಅನಿರೀಕ್ಷಿತ ದ್ರವ್ಯಲಾಭ. ಋಣವಿಮೋಚನೆ. ಹೊಸ ವಾಹನ ಯೋಗ. ಅಕಾಲ ಭೋಜನ. ವೃಥಾ ತಿರುಗಾಟ. ಮಿತ್ರರ ಭೇಟಿ. ಶುಭಸಂಖ್ಯೆ: 6
ಕುಂಭ: ಕಚೇರಿ. ಸ್ಥಳ ಬದಲಾವಣೆ. ಕಲಾವಿದರಿಗೆ, ಸಾಹಿತಿಗಳಿಗೆ ವಿಶೇಷ ದಿನ. ಪರರ ಮಾತಿಗೆ ಕಿವಿ ಕೊಡಬೇಡಿ. ಕೆಲಸದಲ್ಲಿ ಏಕಾಗ್ರತೆ. ಶುಭಸಂಖ್ಯೆ:4
ಮೀನ: ವೈದ್ಯ ವೃತ್ತಿಯಲ್ಲಿ ಇರುವವರಿಗೆ ಕೀರ್ತಿ ಪ್ರಾಪ್ತಿ. ವಿದ್ಯಾರ್ಥಿಗಳಲ್ಲಿ ಗೊಂದಲ. ನಟನೆಯ ವಿಚಾರಗಳಲ್ಲಿ ಆಸಕ್ತಿ ತೋರುವಿರಿ. ಶುಭಸಂಖ್ಯೆ:5