

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತವಾಗಿ ನೆಮ್ಮದಿ. ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲವಾಗುವುದು. ಉದ್ಯೋಗದಲ್ಲಿ ಆಲಸ್ಯ. ಶುಭಸಂಖ್ಯೆ: 5
ವೃಷಭ: ಬಂಧು ಬಾಂಧವರಿಂದ ತೊಂದರೆ. ಪೆಟ್ಟು ಮಾಡಿಕೊಳ್ಳುವ ಸಂಭವ. ಪ್ರಯಾಣದಲ್ಲಿ ಎಚ್ಚರಿಕೆ. ಉದ್ಯೋಗ ಬದಲಾವಣೆ. ಶುಭಸಂಖ್ಯೆ: 9
ಮಿಥುನ: ಆರ್ಥಿಕ ಅನುಕೂಲ. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಉದ್ಯೋಗ ಬದಲಾವಣೆಯಿಂದ ಸಂಕಷ್ಟ, ಮಾನಸಿಕ ನೋವು. ಶುಭಸಂಖ್ಯೆ: 2
ಕಟಕ: ಅಧಿಕ ಧನಾಗಮನವಾಗಿ ಸಂತಸ. ಮಕ್ಕಳಿಂದ ಕಿರಿಕಿರಿ. ರೋಗ ಬಾಧೆ. ಶತ್ರುಗಳಿಂದ ಮುಕ್ತಿ. ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ: 3
ಸಿಂಹ: ಹೆಚ್ಚಿನ ಖರ್ಚು ಮತ್ತು ನಷ್ಟ. ಅನಾರೋಗ್ಯ ಸಮಸ್ಯೆ ಸಾಧ್ಯತೆ. ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ ಒಳ್ಳೆಯದಲ್ಲ. ಶುಭಸಂಖ್ಯೆ: 3
ಕನ್ಯಾ: ಮಕ್ಕಳಿಂದ ಲಾಭವಿದೆ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಮಿತ್ರರಿಂದ ಹಿನ್ನಡೆ. ರಾಜಕಾರಣಿಗಳಿಂದ ಸಹಾಯ ಒದಗಿ ಬರಲಿದೆ. ಶುಭಸಂಖ್ಯೆ: 3
ತುಲಾ: ಉದ್ಯೋಗಕ್ಕೆ ಆದ್ಯತೆ ನೀಡಿ. ನೀರಿನಿಂದ ಸಮಸ್ಯೆ, ಎಚ್ಚರಿಕೆ. ಅಪವಾದಗಳು. ಅಧಿಕಾರಿಗಳಿಂದ ಪ್ರಶಂಸೆ. ನಿರಾಸೆ ಬೇಡ. ಶುಭಸಂಖ್ಯೆ: 6
ವೃಶ್ಚಿಕ: ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರಯಾಣ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಕೈಕಾಲುಗಳಿಗೆ ಪೆಟ್ಟಾಗಬಹುದು. ಶುಭಸಂಖ್ಯೆ: 3
ಧನುಸ್ಸು: ಧನಾಗಮನ. ಉತ್ತಮ ಅವಕಾಶಗಳ ಸೂಚನೆ. ಸದ್ಯಕ್ಕೆ ಸೋಲು. ಕುಟುಂಬದಲ್ಲಿ ಆತಂಕ ಸೃಷ್ಟಿ, ಆಹಾರ ವ್ಯತ್ಯಾಸದಿಂದ ಸಮಸ್ಯೆ. ಶುಭಸಂಖ್ಯೆ: 6
ಮಕರ: ದಾಂಪತ್ಯದಲ್ಲಿ ಹೊಂದಾಣಿಕೆ. ಮಕ್ಕಳಿಂದ ಬೇಸರ. ಪ್ರೀತಿ ವಿಷಯಗಳು ಬಯಲು. ಸ್ವಂತ ಉದ್ಯಮ, ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 7
ಕುಂಭ: ಆರೋಗ್ಯದಲ್ಲಿ ಚೇತರಿಕೆಯಾಗಿ ಸಮಾಧಾನ. ಗುಪ್ತ ಶತ್ರುಗಳಿಂದ ಮೋಸ, ಅಪವಾದಗಳು ಬರಬಹುದು. ಮಹಿಳೆಯರಿಗೆ ಬಡ್ತಿ. ಶುಭಸಂಖ್ಯೆ: 3
ಮೀನ: ಮಕ್ಕಳ ಜೀವನದಲ್ಲಿ ಅಭಿವೃದ್ದಿ, ಸಂತಾನ ಸಮಸ್ಯೆ, ವ್ಯವಹಾರಕ್ಕಾಗಿ ಸಾಲ ಮಾಡುವ ಸನ್ನಿವೇಶ. ಸ್ತ್ರೀಯರಿಂದ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 4