More

    ಆಸ್ಟಿನ್​​ನಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ

    ನಾವಿಕ ಸಮ್ಮೇಳನಬೆಂಕಿ ಬಸಣ್ಣ ನ್ಯೂಯಾರ್ಕ್​: ಇದೇ ಸಪ್ಟೆಂಬರ್ 1, 2 ಮತ್ತು 3 ನೇ ತಾರೀಕು ‘ಆನಂದ- ಅನುಭವ-ಅನುಬಂಧ’ ಎಂಬ ಟ್ಯಾಗ್ ಲೈನ್ ನೊಂದಿಗೆ ಅಮೆರಿಕಾ ದೇಶದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಲ್ಲಿ ನಡೆಯಲಿರುವ “7ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2023” ಕ್ಕೆ ಸಿದ್ಧತೆಗಳು ಸಕಲ ರೀತಿಯಿಂದಲೂ ನಡೆಯುತ್ತಿವೆ ಎಂದು ನಾವು ವಿಶ್ವ ಕನ್ನಡಿಗರು ( ನಾವಿಕ ) ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ರಾವ್ ತಿಳಿಸಿದ್ದಾರೆ.

    ಈ ನಾವಿಕ ವಿಶ್ವ ಕನ್ನಡ ಸಮಾವೇಶದ ಸಂಚಾಲಕರಾಗಿ ಆಸ್ಟಿನ್ ಕನ್ನಡ ಸಂಘದ ಸದಾಶಿವ ಕಲ್ಲೂರ್ ಬೃಹತ್ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರ ಜೊತೆಗೆ ಸಹ-ಸಂಚಾಲಕರಾಗಿ ಹೂಸ್ಟನ್ ಕನ್ನಡ ಸಂಘದ ಅನು ಅಯ್ಯಂಗಾರ್, ಸ್ಯಾನ್ ಅಂಟೋನಿಯೋ ಕುವೆಂಪು ಕನ್ನಡ ಸಂಘದ ಕಾರ್ತಿಕ್ ಹುಲಿಕುಂಟೆ, ಡಲ್ಲಾಸ್ ಕನ್ನಡ ಬಳಗದ ಗೌರಿಶಂಕರ್ ಮತ್ತು ಆಸ್ಟಿನ್ ಕನ್ನಡ ಸಂಘದ ಪ್ರಕಾಶ್ ಉಡುಪ ಸೇವೆ ಸಲ್ಲಿಸುತ್ತಿದ್ದಾರೆ.

    ನಾವಿಕ ಸಮ್ಮೇಳನ

    “ಈ ನಾವಿಕ ವಿಶ್ವ ಕನ್ನಡ ಮಹಾ ಸಮ್ಮೇಳನವನ್ನು ತುಂಬಾ ಯಶಸ್ವಿಯಾಗಿ ಆಯೋಜಿಸಲು ಟೆಕ್ಸಾಸ್ ರಾಜ್ಯದ ಕನ್ನಡಾಭಿಮಾನಿಗಳು ಮತ್ತು ಸ್ವಯಂಸೇವಕರು ಅತಿ ಉತ್ಸಾಹದಿಂದ ಹಗಲಿರಳು ಕೆಲಸ ಮಾಡುತ್ತಿದ್ದಾರೆ” ಎಂದು ಈ ಸಮ್ಮೇಳನದ ಸಂಚಾಲಕರಾದ ಸದಾಶಿವ ಕಲ್ಲೂರ್ ತಿಳಿಸಿದ್ದಾರೆ.

    ಈ ಸಮಾವೇಶದಲ್ಲಿ ಇನ್ವೆಸ್ಟ್ಮೆಂಟ್ ( Investment / ಹೂಡಿಕೆದಾರರ ) ಫೋರಮ್, ವುಮೆನ್ಸ್ ಫೋರಮ್, ಕವಿ ಗೋಷ್ಠಿ , ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ, ಮೆರವಣಿಗೆ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

    ಈ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಸಾರಿಗೆ ಮಂತ್ರಿ ಡಾ. ರಾಮಲಿಂಗಾರೆಡ್ಡಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್ ಕೆ ಪಾಟೀಲ್, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್, ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಮಂತ್ರಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ರಾಣೆಬೆನ್ನೂರು ಶಾಸಕ ಶ್ರೀ ಪ್ರಕಾಶ್ ಕೋಳಿವಾಡ, ಮಾಜಿ ಮಂತ್ರಿ ಎಸ್ ಆರ್ ಪಾಟೀಲ್ ಮುಂತಾದವರನ್ನು ಆಮಂತ್ರಿಸಲಾಗಿದೆ.

    ಆಸ್ಟಿನ್​​ನಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ

    ಕನ್ನಡ ಸಿನಿಮಾ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ತಂಡ ಪ್ರೈಮ್ ಟೈಮ್ ನಲ್ಲಿ ಪ್ರದರ್ಶನ ಕೊಡಲಿದೆ. ಖ್ಯಾತ ಹಿನ್ನೆಲೆ ಗಾಯಕರಾದ ವ್ಯಾಸರಾಜ ಸಾಸೋಲೆ, ಕೀರ್ತನ್ ಹೊಳ್ಳ, ಇಂದು ನಾಗರಾಜ್, ಐಶ್ವರ್ಯ ರಂಗ ರಾಜನ್, ಮುಂತಾದ ಗಾಯಕರು ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಸಹೋದರರಾದ ಖಾನ್ ಬ್ರದರ್ಸ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. “ಬೀಟ್ ಗುರುಸ್ ” ಮ್ಯೂಸಿಕ್ ಬ್ಯಾಂಡ್ ವಿನೂತನ ರೀತಿಯಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ. ರಘು ದೀಕ್ಷಿತ್ ಈ ನಾವಿಕ ವಿಶ್ವಕನ್ನಡ ಸಮ್ಮೇಳನಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಕೊಡಲಿದ್ದಾರೆ.

    ಇದನ್ನೂ ಓದಿ: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

    ಯೋಗೇಶ್ ಕುಮಾರ್ ಮತ್ತು ಸ್ನೇಹ ನಾರಾಯಣ ಭರತನಾಟ್ಯ ಕಾರ್ಯಕ್ರಮವನ್ನು ಕೊಡಲಿದ್ದಾರೆ. ಗಣೇಶ್ ದೇಸಾಯಿ ಬಾವ ಮತ್ತು ಭಕ್ತಿಗೀತೆಗಳ ಧಾರೆಯನ್ನು ಹರಿಸಲಿದ್ದಾರೆ. ಪ್ರಸಿದ್ಧ ಸ್ಟ್ಯಾಂಡಪ್ ಕಾಮಿಡಿಯನ್ಸ್ ಸೋನು ವೇಣುಗೋಪಾಲ್, ರಾಘವೇಂದ್ರ ಆಚಾರ್ಯ, ವಿನಾಯಕ್ ಜೋಶಿ ಮುಂತಾದವರು ಪ್ರೇಕ್ಷಕರನ್ನು ನಗೆಗಡಲಿಗೆ ಬೀಳಿಸಲಿದ್ದಾರೆ. ಎಂಡಿ ಕೌಶಿಕ್ ತಮ್ಮ ಮ್ಯಾಜಿಕ್ ಶೋ ನಿಂದ ಎಲ್ಲರನ್ನೂ ಮಂತ್ರ ಮುಗ್ಧ ಮಾಡಲಿದ್ದಾರೆ. ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಡಾ. ದೇವಕಿ ಮಾಧವ “ವೈಜ್ಞಾನಿಕ ಯೋಗ” ಶಿಬಿರವನ್ನು ನಡೆಸಲಿದ್ದಾರೆ.

    ಆಸ್ಟಿನ್​​ನಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ

    ಈ ಸಮಾವೇಶದ ಸ್ಮರಣ ಸಂಚಿಕೆ ” ಮಂದಾರ” ಕ್ಕಾಗಿ ಕನ್ನಡ ಅಭಿಮಾನಿಗಳಿಂದ ಲೇಖನ, ಕಥೆ, ಕವನ, ಪ್ರಬಂಧ, ನಗೆಹನಿ ಮತ್ತು ಹಾಸ್ಯ ಲೇಖನಗಳನ್ನು ಆಹ್ವಾನಿಸಲಾಗಿದೆ. ಗಾಲ್ಫ್ ಆಟಗಾರರಿಗಾಗಿ “ನಾವಿಕ ಗಾಲ್ಫ್ ಸ್ಪರ್ಧೆ” ಯನ್ನು ಏರ್ಪಡಿಸಲಾಗಿದೆ.

    ಈ ವಿಶ್ವ ಕನ್ನಡ ಸಮಾವೇಶದಲ್ಲಿ ರಂಗಸ್ಥಳ ನಾಟಕ ಸ್ಪರ್ಧೆ, ನಾವಿಕ ಕೋಗಿಲೆ ಗಾಯನ ಸ್ಪರ್ಧೆ, ನೃತ್ಯೋತ್ಸವ ನೃತ್ಯ ಸ್ಪರ್ಧೆ, ಶೃಂಗಾರ ಸಿರಿ ಫ್ಯಾಶನ್ ಶೋ ಈಗ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ https://austin.navika.org/

    ಆಸ್ಟಿನ್​​ನಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts