

ಬೆಂಗಳೂರು: ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತಳ ಸ್ಥಾನದಲ್ಲಿರುವ ನಿಶಾ ನರಸಪ್ಪಗೆ ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತೆ ನಿಶಾ ನರಸಪ್ಪ ಎಸಗಿರುವ ವಂಚನೆಗಳ ದೊಡ್ಡ ಪುರಾಣವೇ ಇದ್ದು, ವಂಶಿಕಾ ಹೆಸರಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೆಸರು ಬಳಸಿಯೂ ಸಹ ಹಲವರಿಗೆ ಮೋಸ ಮಾಡಿದ್ದಾರೆ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪೋಷಕರೊಬ್ಬರ ಜೊತೆ ಮಾತನಾಡುವ ವೇಳೆ ನಿಶಾ ತಾನು ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಹಾಕಿಕೊಂಡು ಚಿತ್ರ ಒಂದನ್ನು ಮಾಡಲು ಸಜ್ಜಾಗುತ್ತಿದ್ದು, ಪ್ರದೀಪ್ ಕರಣ್ ಎಂಬುವವರು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆಂದು ಹೇಳುತ್ತಿರುವ ಆಡಿಯೋ ವೈರಲ್ ಆಗಿದೆ.
ಇತ್ತ ನ್ಯಾಯಾಂಗ ಬಂಧನದಲ್ಲಿದ್ದರು ಸಹ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿರುವ ನಿಶಾ ನರಸಪ್ಪ ಸಾಮಾಜಿಕ ಜಾಲತಾಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು, ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ. ಹೊಸದಾಗಿ ಫೋಟೋ ಶೂಟ್ಗೆ ರಿಜಿಸ್ಟ್ರೇಷನ್ ಮಾಡಿಸುವವರು ದಯವಿಟ್ಟು ಎಲ್ಲರು ತಾಳ್ಮೆಯಿಂದ ಕಾಯಿರಿ ಎಂದು ಬರೆದುಕೊಂಡಿದ್ದಾರೆ.
ನಿಶಾ ನರಸಪ್ಪ ಸದಾಶಿವನಗರ ಹಾಗೂ ಯಲಹಂಕ ನ್ಯೂಟೌನ್ನಲ್ಲಿ ಮೋಸ ಹೋದ ಪೋಷಕರು ಮತ್ತಷ್ಟು ವಂಚನೆ ಪ್ರಕರಣದ ದೂರು ದಾಖಲಿಸಿದ್ದಾರೆ.