VIDEO| ಪುಟ್ಟ ಬಾಲಕನ ಸಾಹಸ ಕಂಡು ಬೆಚ್ಚಿದ ನೆಟ್ಟಿಗರು! ಈತನಿಗೆ ಹಾವಿನ ಜತೆ ಆಟ..

playing with snake
Published on

ಬೆಂಗಳೂರು: ಭೂಮಿ ಮೇಲೆ ವಾಸಿಸುತ್ತಿರುವ ಜೀವಿಗಳಲ್ಲಿ ಒಂದಾದ ಹಾವು ನೋಡಲು ಎಷ್ಟು ಆಕರ್ಷಕವೋ ಅಷ್ಟೇ ಭಯಾನಕ ಕೂಡ. ಕೆಲವೊಮ್ಮೆ ಹಾವಿನೊಂದಿಗೆ ಮುಖಾಮುಖಿಯಾದಾಗ ವ್ಯಕ್ತಿಯ ಜೀವನವೇ ಅಂತ್ಯಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಇದನ್ನು ತಿಳಿದಿದ್ದರು ಸಹ ಅನೇಕ ಜನರು ಅದರ ಜೊತೆ ಅಪಾಯಕಾರಿ ಸಾಹಸಗಳನ್ನು ಮಾಡಲು ಹೋಗಿ ಪೇಚಿಗೆ ಸಿಲುಕುತ್ತಾರೆ.

ಇದೀಗ ಘಟನೆಯೊಂದರಲ್ಲಿ ಪುಟ್ಟ ಮಗುವೊಂದು ಹಾವನ್ನು ಹಿಡಿದು ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ಈ ಕುರಿತು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದು, ಪೋಷಕರ ವಿರುದ್ಧ ಕಿಡಿಕಾರಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಪುಟ್ಟ ಮಗು ಹಾವನ್ನು ಹಿಡಿದು ಮನೆಯೊಳಗೆ ಪ್ರವೇಶಿಸಲು ಮುಂದಾಗುತ್ತದೆ. ಇದನ್ನು ನೋಡಿದ ಇತರರು ಭಯಭೀತರಾಗಿ ಎದ್ದು ಓಡಲು ಶುರು ಮಾಡುತ್ತಾರೆ. ಕೆಲವರು ಮಗುವನ್ನು ಅಲ್ಲೇ ನಿಲ್ಲುವಂತೆ ಸಣ್ಣೆ ಮಾಡುತ್ತಾರೆ. ಇದನ್ನು ಗಮನಿಸಿದ ಹಿರಿಯರೊಬ್ಬರು ಮಗುವನ್ನು ಹಿಂದಕ್ಕೆ ಕರೆತರುತ್ತಾರೆ.

First_love_addiction ಎಂಬ ಹೆಸರಿನ ಖಾತೆಯಿಂದ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದ್ದು, 17.7 ಮಿಲಿಯನ್​ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಮಗುವಿನ ವರ್ತನೆಗೆ ಕಿಡಿಕಾರಿರುವ ನೆಟ್ಟಿಗರು ಈ ವರ್ಷದ ಉತ್ತಮ ಪೋಷಕರ ಪ್ರಶಸ್ತಿ ಇವರಿಗೆ ನೀಡಬೇಕು ಎಂದು ಹೇಳುವ ಮೂಲಕ ಆಕ್ಷೇಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net