ಈ ರಾಶಿಯವರಿಂದು ಎಲ್ಲರ ಪ್ರೀತಿ-ವಿಶ್ವಾಸ ಗಳಿಸುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಾರ್ಖಾನೆ ಉದ್ಯೋಗಿಗಳಿಗೆ ನೆಮ್ಮದಿ ಇರುವುದಿಲ್ಲ. ವೈದ್ಯ ವೃತ್ತಿಯವರಿಗೆ ಲಾಭ. ವೃತ್ತಿ ಶಿಕ್ಷಣ ವ್ಯಾಸಂಗದಲ್ಲಿ ಹಿನ್ನಡೆ. ಶುಭಸಂಖ್ಯೆ:5

ವೃಷಭ: ಅಪರಿಚಿತರಿಂದ ಮೋಸವಾಗಬಹುದು. ಪರರ ಮಾತಿಗೆ ಕಿವಿ ಕೊಡಬೇಡಿ. ಗೆಳೆಯರಿಂದ ಸಕಾಲಕ್ಕೆ ಸಹಾಯ. ಸಾಲಭಾದೆ. ಶುಭಸಂಖ್ಯೆ:9

ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ. ಮಗಳಿಗೆ ವಿವಾಹ ಯೋಗ ಕೂಡಿ ಬರಲಿದೆ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ:3

ಕಟಕ: ಯತ್ನ ಕಾರ್ಯಗಳಲ್ಲಿ ಜಯ ದೊರೆಯುವುದು. ಆಕಸ್ಮಿಕ ಖರ್ಚು ತಲೆದೋರಬಹುದು. ಸ್ನೇಹಿತರೊಂದಿಗೆ ಕಲಹ ಬೇಡ. ಶುಭಸಂಖ್ಯೆ:1

ಸಿಂಹ: ಸ್ಥಗಿತ ಕಾರ್ಯದಲ್ಲಿ ಮುನ್ನಡೆ. ರಾಜಕೀಯ ವ್ಯಕ್ತಿಗಳಿಗೆ ವಿಶೇಷ ದಿನ. ಹಣ ಬಂದರೂ ಉಳಿಯುವುದಿಲ್ಲ. ದಿನಾಂತ್ಯದಲ್ಲಿ ಅಶುಭ. ಶುಭಸಂಖ್ಯೆ: 8

ಕನ್ಯಾ: ಸಕಾಲದಲ್ಲಿ ಹಣ ಬರುವುದು. ವ್ಯಾಪಾರದಲ್ಲಿ ಉತ್ತಮ ಲಾಭ. ವೈವಾಹಿಕ ಸಮಸ್ಯೆಯನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಶುಭಸಂಖ್ಯೆ:6

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಸಂಗಾತಿಯ ಭಾವನೆಗೆ ಸ್ಪಂದಿಸಿ. ಸ್ತ್ರೀಯರು ತಾಳ್ಮೆಯಿಂದ ಇರಿ. ಶುಭಸಂಖ್ಯೆ: 7

ವೃಶ್ಚಿಕ: ಸರ್ಕಾರಿ ಉದ್ಯೋಗದಲ್ಲಿ ಕಿರಿ-ಕಿರಿ ಉಂಟಾಗಲಿದೆ. ಚಂಚಲ ಸ್ವಭಾವದಿಂದ ಅವಕಾಶ ಕೈ ತಪ್ಪುವುದು. ಹಿತಶತ್ರು ಕಾಟ. ಶುಭಸಂಖ್ಯೆ: 6

ಧನುಸ್ಸು: ಮಿತ್ರರಿಂದ ಹಣದ ಸಹಾಯ ಬರಲಿದೆ. ನ್ಯಾಯಾಲ ಯದ ವಿಚಾರದಲ್ಲಿ ಕಾರ್ಯಸಾಧನೆ ಆಗಲಿದೆ. ಸ್ತ್ರೀಯರಿಗೆ ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ:3

ಮಕರ: ಆದಾಯದಲ್ಲಿ ಏರುಪೇರು. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಕಲಾಕ್ಷೇತ್ರದವರಿಗೆ, ಕಾರ್ವಿುಕರಿಗೆ, ನೃತ್ಯಪಟುಗಳಿಗೆ ವಿಶೇಷ ದಿನ. ಶುಭಸಂಖ್ಯೆ: 4

ಕುಂಭ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಆತ್ಮೀಯರಿಂದ ಸಹಾಯ. ಸ್ಥಿರಾಸ್ತಿ ಖರೀದಿ ಮಾಡುವಿರಿ. ಪ್ರಿಯ ಜನರ ಭೇಟಿಯಾಗಲಿದೆ. ಶುಭಸಂಖ್ಯೆ:1

ಮೀನ: ಮಾನಸಿಕ ಒತ್ತಡ. ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಚಾಲಕ ವೃತ್ತಿಯವರಿಗೆ ಲಾಭ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net