ಈ ರಾಶಿಯವರಿಗಿಂದು ಆರ್ಥಿಕ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಲೇವಾದೇವಿ ವ್ಯವಹಾರದಿಂದ ಅನುಕೂಲ. ಸಹೋದ್ಯೋಗಿಗಳಿಂದ ನಿಂದನೆ. ಕಾನೂನುಬಾಹಿರ ಧನ ಸಂಪಾದನೆಯ ಆಸೆ. ಶುಭಸಂಖ್ಯೆ: 8

ವೃಷಭ: ದೂರ ಪ್ರಯಾಣ ಮಾಡುವ ಸಂದರ್ಭ ಎದುರಾಗಬಹುದು. ಉದರ ಸಂಬಂಧಿ ಅನಾರೋಗ್ಯ ಸಮಸ್ಯೆ. ಸ್ಥಿರಾಸ್ತಿ ಮೇಲೆ ಸಾಲ. ಶುಭಸಂಖ್ಯೆ: 6

ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಹಿರಿಯರ ವಿರೋಧ. ಮಕ್ಕಳು ಶತ್ರುಗಳಾಗುವರು. ಶುಭಸಂಖ್ಯೆ: 7

ಕಟಕ: ಸ್ವಯಂಕೃತ ಅಪರಾಧದಿಂದ ಅವಮಾನ. ಹಿತ ಶತ್ರುಗಳ ಕಾಟ. ವೃತ್ತಿಯಲ್ಲಿ ಗೌರವ. ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ. ಶುಭಸಂಖ್ಯೆ: 8

ಸಿಂಹ: ವಿಕೃತ ಆಸೆ ಅಭಿಲಾಷೆಗಳು. ನ್ಯಾಯಾಲಯದ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗ ಬಡ್ತಿ. ಪ್ರತಿಷ್ಠೆ ಮತ್ತು ಉದ್ಯೋಗಾವಕಾಶ. ಶುಭಸಂಖ್ಯೆ: 5

ಕನ್ಯಾ: ಮೋಸ, ನಷ್ಟದಿಂದ ಮನಸ್ಸು ಘಾಸಿಗೊಳ್ಳುವುದು. ದೂರಪ್ರದೇಶದಲ್ಲಿ ಉದ್ಯೋಗ ಸಿಗಲಿದೆ, ವಸ್ತ್ರಾಭರಣ ಖರೀದಿಗೆ ಹಣವ್ಯಯ. ಶುಭಸಂಖ್ಯೆ:4

ತುಲಾ: ಸುಲಲಿತವಾಗಿ ಧನ ಸಂಪಾದನೆ. ಅದೃಷ್ಟ ಖುಲಾಯಿಸಲಿದೆ. ಪೂರ್ವಿಕರ ಆಸ್ತಿ ಲಭಿಸುವುದು. ಮರೆತು ಬಿಟ್ಟ ವಸ್ತು ದೊರಕುವುದು. ಶುಭಸಂಖ್ಯೆ: 8

ವೃಶ್ಚಿಕ: ದಾಂಪತ್ಯದಲ್ಲಿ ಬೇಸರ. ಅವಕಾಶಗಳು ಕೈತಪ್ಪುವ ಸಾಧ್ಯತೆ. ವೈಯಕ್ತಿಕ ನಿಂದನೆ. ಸಾಲಬಾಧೆ. ಗಾಯಕರಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ: 4

ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಮಕ್ಕಳ ಪ್ರೀತಿಯ ವಿಷಯದ ಚಿಂತೆ. ಅಧಿಕ ನಷ್ಟ.. ಆಟೋಮೊಬೈಲ್ಸ್ ವ್ಯವಹಾರದಲ್ಲಿ ಕಷ್ಟ. ಶುಭಸಂಖ್ಯೆ: 2

ಮಕರ: ದಾಂಪತ್ಯ ಸಮಸ್ಯೆ. ಮೋಸ ಮಾಡುವವರನ್ನು ಪ್ರೀತಿಸುವಿರಿ. ಸೇವಾ ವೃತ್ತಿಯ ಉದ್ಯೋಗ ಲಾಭ. ನೂತನ ಗೃಹ ನಿರ್ವಣ. ಶುಭಸಂಖ್ಯೆ: 2

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಹಳೇ ವಸ್ತುಗಳ ಖರೀದಿಗೆ ಖರ್ಚು. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 1

ಮೀನ: ಸಾಲ ಮಾಡುವ ಪರಿಸ್ಥಿತಿ. ಹಳೆಯ ಮಿತ್ರನ ಭೇಟಿ. ಕೋರ್ಟ್ ಕೇಸುಗಳಲ್ಲಿ ಜಯ. ಆರ್ಥಿಕ ಅನುಕೂಲ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net