ದಿನ ಭವಿಷ್ಯ | ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದು, ಕಾರ್ಯ ಸಾಧನೆಗೆ ತಿರುಗಾಟ

Nithya Bhavishya
Published on

ಮೇಷ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದು. ಕಾರ್ಯ ಸಾಧನೆಗೆ ತಿರುಗಾಟ. ದೇವತಾ ಕಾರ್ಯಗಳಲ್ಲಿ ಭಾಗಿ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ: 9

ವೃಷಭ: ಅಧಿಕಾರಿಗಳಿಂದ ಪ್ರಶಂಸೆ. ಕೋರ್ಟು ವ್ಯವಹಾರ ಗಳಲ್ಲಿ ಜಯ. ಮಿತ್ರರಿಂದ ವಂಚನೆಯಾಗುವ ಸಾಧ್ಯತೆಯಿದೆ, ಎಚ್ಚರದಿಂದಿರಿ. ಶುಭಸಂಖ್ಯೆ:1

ಮಿಥುನ: ಸ್ತ್ರೀಯರು ತಾಳ್ಮೆಯಿಂದ ಇರಿ. ಮಗನಿಂದ ಶುಭ ವಾರ್ತೆ ಕೇಳುವಿರಿ. ಪರಾಕ್ರಮದ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಶುಭಸಂಖ್ಯೆ: 8

ಕಟಕ: ಅಪರಿಚಿತರ ವಿಷಯದಲ್ಲಿ ಜಾಗ್ರತೆಯಿಂದಿರಿ. ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಲಿದೆ. ಕ್ರಯ ವಿಕ್ರಯಗಳಲ್ಲಿ ಲಾಭ. ಶುಭಸಂಖ್ಯೆ: 1

ಸಿಂಹ: ವಿವಿಧ ಮೂಲಗಳಿಂದ ಧನ ಲಾಭ. ವೈರಿಗಳಿಂದ ದೂರವಿರಿ. ಮನಃಶಾಂತಿ. ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 3

ಕನ್ಯಾ: ಕುಟುಂಬ ಸೌಖ್ಯ. ಕೃಷಿಯಲ್ಲಿ ಲಾಭ. ವಿಪರೀತ ಕೋಪ. ನಾನಾ ರೀತಿಯ ಸಂಕಷ್ಟ ಬರಬಹುದು. ಇಷ್ಟ ದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 6

ತುಲಾ: ಅಧಿಕ ಕೆಲಸದಿಂದ ವಿಶ್ರಾಂತಿ ದೊರೆಯಲಿದೆ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ದೀನರಿಗೆ, ಬಡರೋಗಿಗಳಿಗೆ ಸಹಾಯ ಮಾಡಿ. ಶುಭಸಂಖ್ಯೆ: 5

ವೃಶ್ಚಿಕ: ಹಿತೈಷಿಗಳ ಸಲಹೆ ಪಡೆಯಿರಿ. ಹಣಕಾಸಿನ ಸಮಸ್ಯೆ ಕಾಡಬಹುದು. ಸಲ್ಲದ ಅಪವಾದ ಬಂದೀತು. ಗೆಳೆಯರೊಂದಿಗೆ ಮೈಮನಸ್ಸು. ಶುಭಸಂಖ್ಯೆ: 5

ಧನುಸ್ಸು: ಯಂತ್ರೋಪಕರಣಗಳಿಂದ ಲಾಭ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಕಾರ್ಯಸಿದ್ಧಿ. ನಾನಾ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 6

ಮಕರ: ಅತಿಯಾದ ದೇಹಾಲಸ್ಯ. ಬಾಕಿ ಹಣ ಕೈಸೇರುವುದು. ಸುಖ ಭೋಜನ. ಷೇರು ವ್ಯವಹಾರಗಳಲ್ಲಿ ಎಚ್ಚರ. ಪರರಿಂದ ತೊಂದರೆ. ಶುಭಸಂಖ್ಯೆ: 2

ಕುಂಭ: ಹಣ ಬಂದರೂ ಉಳಿಯುವುದಿಲ್ಲ. ಸ್ತ್ರೀಯರಿಂದ ಸಹಾಯ. ಚೋರಭಯವಿದೆ, ಎಚ್ಚರ ವಹಿಸಿ. ಚಂಚಲ ಸ್ವಭಾವ. ಶುಭಸಂಖ್ಯೆ: 1

ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ನಿಧಾನವಾದರೂ ಪ್ರಗತಿ. ಕೃಷಿಯಲ್ಲಿ ಲಾಭ. ವಿದೇಶ ಪ್ರಯಾಣ. ಶತ್ರು ಧ್ವಂಸ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net