ಈ ರಾಶಿಯವರಿಗಿಂದು ಆರ್ಥಿಕ ಪರಿಸ್ಥಿತಿ ಸುಧಾರಣೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆತ್ಮೀಯ ಸ್ನೇಹಿತರಿಂದ ಸಹಾಯ. ಜೀವನದಲ್ಲಿ ಅನಿರೀಕ್ಷಿತ ತಿರುವು. ಅಗತ್ಯವಿದ್ದವರಿಗೆ ಉಪಕಾರ ಮಾಡುವಿರಿ. ಶತ್ರುಕಾಟ. ಶುಭಸಂಖ್ಯೆ: 9

ವೃಷಭ: ಸಣ್ಣ ವ್ಯಾಪಾರಸ್ಥರಿಗೆ ಸಾಧಾರಣ ಲಾಭ. ಶೀತ ಸಂಬಂಧೀ ಅನಾರೋಗ್ಯ. ಪತಿ ಪತ್ನಿಯರಲ್ಲಿ ವಿರಸ. ಕ್ರಯವಿಕ್ರಯಗಳಲ್ಲಿ ಮೋಸ. ಶುಭಸಂಖ್ಯೆ: 1

ಮಿಥುನ: ವ್ಯಾಸಂಗದಲ್ಲಿ ಮುನ್ನಡೆ. ಹಣದ ಅಡಚಣೆ. ಮಕ್ಕಳಿಗೆ ಅನಾರೋಗ್ಯ. ಕೃಷಿಯಲ್ಲಿ ಲಾಭ. ಗುರು ಹಿರಿಯರಲ್ಲಿ ಭಕ್ತಿ, ಹಿತನುಡಿ. ಶುಭಸಂಖ್ಯೆ: 2

ಕಟಕ: ಸ್ಥಿರಾಸ್ತಿ ಸಂಪಾದನೆ. ಬಂಧುಮಿತ್ರರ ಭೇಟಿ. ಧನಾಗಮನ. ಆರೋಗ್ಯದಲ್ಲಿ ಏರುಪೇರು. ಭೂಲಾಭ. ಋಣಭಾದೆ ಪರಿಹಾರ. ಶುಭಸಂಖ್ಯೆ: 3

ಸಿಂಹ: ಅನವಶ್ಯಕ ತಿರುಗಾಟ. ಮನೆಯಲ್ಲಿ ಶಾಂತಿಯ ವಾತಾವರಣ. ವ್ಯರ್ಥ ಧನಹಾನಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲ. ಶುಭಸಂಖ್ಯೆ: 1

ಕನ್ಯಾ: ವಿದ್ಯಾರ್ಥಿಗಳಿಗೆ ಶುಭದಾಯಕ ದಿನ. ಕುಟುಂಬ ಕಲಹ. ಕೃಷಿಯಲ್ಲಿ ಲಾಭ. ಹಿರಿಯರಲ್ಲಿ ಭಕ್ತಿ ತೋರುವಿರಿ. ಆಪ್ತರ ಆಗಮನ. ಶುಭಸಂಖ್ಯೆ: 7

ತುಲಾ: ಪಿತ್ರಾರ್ಜಿತ ಆಸ್ತಿ ವಿವಾದ ತಾರಕಕ್ಕೆ. ಬಂಧುಮಿತ್ರರ ಭೇಟಿ. ಆರೋಗ್ಯದಲ್ಲಿ ಏರುಪೇರು. ಯತ್ನ ಕಾರ್ಯದಲ್ಲಿ ಅನುಕೂಲ. ಶುಭಸಂಖ್ಯೆ:9

ವೃಶ್ಚಿಕ: ಸರ್ಕಾರಿ ಕಚೇರಿಯಲ್ಲಿ ಹೆಚ್ಚಿದ ಜವಾಬ್ದಾರಿ. ಮನೆಯಲ್ಲಿ ಶುಭ ಕಾರ್ಯಕ್ಕೆ ನಿರ್ಧಾರ ಕೈಗೊಳ್ಳುವಿರಿ. ಆತ್ಮೀಯರಿಂದ ತೊಂದರೆ. ಶುಭಸಂಖ್ಯೆ:4

ಧನುಸ್ಸು: ಕೆಲಸಗಾರರಿಂದ ಅಸಹಕಾರ. ಶ್ರಮಕ್ಕೆ ತಕ್ಕ ಫಲ. ವ್ಯಸನದಿಂಧ ಅನಾರೋಗ್ಯ ಮಿತ್ರರಿಂದ ದ್ರೋಹ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 6

ಮಕರ: ಬುದ್ಧಿವಂತಿಕೆಯಿಂದ ಕಾರ್ಯಸಾಧನೆ ಮಾಡಿಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ತೀರ್ಥಕ್ಷೇತ್ರ ದರ್ಶನ. ಶುಭಸಂಖ್ಯೆ:3

ಕುಂಭ: ವಾಹನ ದುರಸ್ತಿ. ಚಂಚಲ ಮನಸ್ಸಿಗೆ ಕಡಿವಾಣ ಹಾಕಿ. ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6

ಮೀನ: ಆರ್ಥಿಕ ಪರಿಸ್ಥಿತಿ ಸುಧಾರಣೆ. ಮಹಿಳೆಯರಿಗೆ ಶುಭ. ಧಾರ್ವಿುಕ ಕಾರ್ಯಕ್ಕೆ ಒಲವು. ಅಧಿಕ ತಿರುಗಾಟ. ವಾಹನಕ್ಕೆ ಅಧಿಕ ಖರ್ಚು. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net