ಈ ರಾಶಿಯ ಮಹಿಳೆಯರಿಗೆ ಇಂದು ವಿಶೇಷ ಲಾಭ, ಅನಿರೀಕ್ಷಿತ ಪ್ರಯಾಣ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉಪಕಾರ ಮಾಡುವಲ್ಲಿ ಆಸಕ್ತಿ ತಾಳುವಿರಿ. ಹಿರಿಯರಿಂದ ಆಶೀರ್ವಾದ. ಮಹಿಳೆಯರಿಗೆ ಉತ್ತಮ ದಿನ. ಸಂತಸದ ವಾತಾವರಣ. ಶುಭಸಂಖ್ಯೆ: 9

ವೃಷಭ: ಆರ್ಥಿಕ ಪರಿಸ್ಥಿತಿ ಹದಗೆಡುವುದು. ನೀವೇ ಮಾಡಿಕೊಂಡ ತಪು್ಪಗಳಿಂದ ನಷ್ಟ. ಕೆಲಸದಲ್ಲಿ ನಿಧಾನಗತಿ. ಶೀತ ಸಂಬಂಧಿ ಬಾಧೆ. ಶುಭಸಂಖ್ಯೆ:1

ಮಿಥುನ: ನಿಮ್ಮಲ್ಲಿನ ಚುರುಕು ಬುದ್ಧಿ ಇತರರಿಗೆ ಇಷ್ಟ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲೇರಲಿದೆ. ಅಲ್ಪ ಲಾಭ, ಖರ್ಚು. ಶುಭಸಂಖ್ಯೆ: 5

ಕಟಕ: ಮಕ್ಕಳ ಭಾವನೆಗಳಿಗೆ ಸ್ಪಂದಿಸುವಿರಿ. ಸ್ಥಿರಾಸ್ತಿ ಖರೀದಿ ಯೋಗ. ಮನಸ್ಸಿಗೆ ಸಮಾಧಾನ. ಧೈರ್ಯದಿಂದ ಯಶ. ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ: 6

ಸಿಂಹ: ಪಾಲಕರ ಜತೆ ಆಪ್ತ ಸಂವಹನ. ಅವಕಾಶಗಳು ಬರುವವು. ಹಣಕಾಸು ಸ್ಥಿತಿ ಚೇತರಿಕೆ. ಈ ದಿನ ಶುಭ ಫಲ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 2

ಕನ್ಯಾ: ಮಹಿಳೆಯರಿಗೆ ವಿಶೇಷ ಲಾಭ. ಅನಿರೀಕ್ಷಿತ ಪ್ರಯಾಣ. ಧಾರ್ವಿುಕ ಕಾರ್ಯದಲ್ಲಿ ಭಾಗಿ. ಮುಂಗೋಪ ಬಿಡಿ. ಮೋಸ ಸಾಧ್ಯತೆ. ಶುಭಸಂಖ್ಯೆ:8

ತುಲಾ: ಅಧ್ಯಾತ್ಮದತ್ತ ಒಲವು ತೋರುವಿರಿ. ದಾಂಪತ್ಯದಲ್ಲಿ ಸಾಮರಸ್ಯ. ಚಂಚಲ ಮನಸ್ಸು ನಿಯಂತ್ರಿಸಿ. ಆಲಸ್ಯ ಮನೋಭಾವ. ಶುಭಸಂಖ್ಯೆ:4

ವೃಶ್ಚಿಕ: ದಾಯಾದಿಗಳಿಂದ ತೊಂದರೆ. ಹಣ ಬರುವುದು, ಆದರೆ ಉಳಿಯದು. ಋಣಮುಕ್ತರಾಗಿ ನಿರಾಳತೆ. ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ. ಶುಭಸಂಖ್ಯೆ:7

ಧನುಸ್ಸು: ಮನೆಯಲ್ಲಿ ಸಂತಸ. ಧಾರ್ವಿುಕ ಕ್ಷೇತ್ರ ಭೇಟಿ. ಒಂದಷ್ಟು ಆಸ್ತಿ ಗಳಿಸುವಿರಿ. ಯತ್ನ ಕಾರ್ಯದಲ್ಲಿ ಉತ್ತಮ ಫಲ. ಸ್ಥಳ ಬದಲಾವಣೆ. ಶುಭಸಂಖ್ಯೆ:1

ಮಕರ: ನಿಮ್ಮಪ್ರತಿಭೆಗೆ ಸೂಕ್ತವಾದ ಫಲ ಸಿಕ್ಕು ಸಂತಸ. ಮಾನಸಿಕ ಸಮಾಧಾನ. ಅಧಿಕಾರ ಸಿಗಲಿದೆ. ಮಹಿಳೆಯರಿಗೆ ಉತ್ತಮ ಅವಕಾಶ. ಶುಭಸಂಖ್ಯೆ:3

ಕುಂಭ: ಕಾರಣವಿಲ್ಲದೇ ಅಲೆದಾಟ. ಪ್ರಸಿದ್ಧ ಜನರ ಭೇಟಿ, ಪರಸ್ಥಳದಲ್ಲಿ ಇರಬೇಕಾದೀತು. ಸುಖ ಭೋಜನ. ಕುಲದೇವರನ್ನು ಭಜಿಸಿ. ಶುಭಸಂಖ್ಯೆ:6

ಮೀನ: ಅಧಿಕಾರ ಪ್ರಾಪ್ತಿಯಾಗಿ ಸಂತಸ. ನೂತನ ಯೋಜನೆಗಳು ಕೈಹಿಡಿಯುವವು. ಶತ್ರುಗಳು ಹಿಂದೆ ಸರಿಯುವರು. ಕಾರ್ಯ ಪ್ರಗತಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net