More

  ಚಂದ್ರಯಾನ, ಸೌರಯಾನದ ಬಳಿಕ ಮತ್ತೊಂದು ಯಾನಕ್ಕೂ ಸಿದ್ಧವಾದ ಇಸ್ರೋ; ಇಲ್ಲಿದೆ ವಿವರ..

  ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಬೆನ್ನಿಗೇ ಸೌರಯಾನ ಕೈಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೊಂದು ಯಾನಕ್ಕೂ ಸಜ್ಜಾಗಿದೆ. ಅದು ಮತ್ಯಾವುದೂ ಅಲ್ಲ, ಗಗನಯಾನ. ಭಾರತದ ಮೊದಲ ಮಾನವಸಹಿತ ಗಗನಯಾನದ ಅಂಗವಾಗಿ ಮಾನವರಹಿತ ಪರೀಕ್ಷಾರ್ಥ ಹಾರಾಟವನ್ನು ಇದೇ ಅಕ್ಟೋಬರ್​ನಲ್ಲಿ ಇಸ್ರೋ ಕೈಗೊಳ್ಳಲಿದೆ.

  ಅಂದರೆ ಮನುಷ್ಯರನ್ನೇ ಗಗನಯಾನಕ್ಕೆ ಕಳಿಸುವ ಭಾರತದ ಮೊದಲ ಹಾಗೂ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಪೂರ್ವಭಾವಿಯಾಗಿ ಕ್ರ್ಯೂ ಮಾಡೆಲ್​​ನ ಮಾನವರಹಿತ ಹಾರಾಟ ಪರೀಕ್ಷೆ ಇಸ್ರೋ ಅ. 25ರಂದು ನಡೆಸುವ ಸಾಧ್ಯತೆ ಹೊರಹೊಮ್ಮಿದೆ. ಅಲ್ಲದೆ, ಗಗನಯಾನದ ಕ್ರ್ಯೂ ಮಾಡೆಲ್ ಕುರಿತ ಕೆಲವು ಫೋಟೋಗಳನ್ನು ಇಸ್ರೋ ಇಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

  ಈ ಮಿಷನ್​​ನ ಸಾಮರ್ಥ್ಯ ಪ್ರದರ್ಶಿಸಲು ಇಸ್ರೋ ಕ್ರ್ಯೂ ಮಾಡೆಲ್​​ನ ಇನ್​ಫ್ಲೈಟ್​ ಅಬಾರ್ಟ್​ ಟೆಸ್ಟ್​ ನಡೆಸಲು ಯೋಜನೆ ಹಾಕಿಕೊಂಡಿದೆ. ಇದನ್ನು ಸಾಧಿಸಿದ ನಂತರ, ಮಾನವರಹಿತ ಕಾರ್ಯಾಚರಣೆಯ ಸಿದ್ಧತೆಗಳೊಂದಿಗೆ ಮುಂದುವರಿಯಲಿರುವುದಾಗಿ ವಿಕ್ರಮ್​ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್​.ಉನ್ನಿಕೃಷ್ಣನ್​ ನಾಯರ್​ ಮಾಹಿತಿ ಹಂಚಿಕೊಂಡಿದ್ದಾರೆ.

  ಮುಂಬರುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ 1) ಗಗನಯಾನ ಕಾರ್ಯಕ್ರಮದ ನಾಲ್ಕು ಪ್ರಾಯೋಗಿಕ ಕಾರ್ಯಾಚರಣೆಗಳಲ್ಲಿ ಮೊದಲನೆಯದಾಗಿದೆ. ನಾಲ್ಕೂ ಪರೀಕ್ಷಾ ಫಲಿತಾಂಶ ಮತ್ತು ಮಾನವರಹಿತ ಕಾರ್ಯಾಚರಣೆಗಳ ಆಧಾರದ ಮೇಲೆ ಮಾನವಸಹಿತ ಕಾರ್ಯಾಚರಣೆಯನ್ನು ಯೋಜಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

  See also  ರಾಜ್ಯ ವಿದ್ಯಾರ್ಥಿನಿಯರ ಸಂಚಾಲಕರಾಗಿ ಆಯ್ಕೆ

  ಏನದು ಗಗನಯಾನ?: ಗಗನಯಾನ ಯೋಜನೆಯು ಇಬ್ಬರು ಅಥವಾ ಮೂವರನ್ನು ಒಂದರಿಂದ ಮೂರು ದಿನಗಳ ಕಾರ್ಯಾಚರಣೆಗಾಗಿ ಭೂಮಿಯ ಸುತ್ತಲೂ ಸುಮಾರು 400 ಕಿ.ಮೀ. ವೃತ್ತಾಕಾರದ ಕಕ್ಷೆಗೆ ಕರೆದೊಯ್ದು, ಸುರಕ್ಷಿತವಾಗಿ ಭೂಮಿಗೆ ಕರೆತರುವುದಾಗಿರುತ್ತದೆ. ಈ ಮೂಲಕ ಭಾರತದ ಇನ್ನೊಂದು ಸಾಮರ್ಥ್ಯವನ್ನು ಪ್ರದರ್ಶಿಸುವುದು ಗಗನಯಾನದ ಉದ್ದೇಶ.

  ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

  ಹೊಸದೂ ಬೇಡ, ಹಳೇದೂ ಬೇಡ: ಏನಿದು ಮಹಿಳೆಯರ ಒತ್ತಾಯ?; ಮಾನಿನಿಯರು ಒಲಿಯದ ಏಕೈಕ ಭಾಗ್ಯ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts