ಈ ರಾಶಿಯವರಿಗಿಂದು ಕುಟುಂಬ ಸೌಖ್ಯ, ಹಣಕಾಸಿನ ಪರಿಸ್ಥಿತಿ ಉತ್ತಮ: ನಿತ್ಯಭವಿಷ್ಯ

Daily Horoscope
Published on

ಮೇಷ: ಅನವಶ್ಯಕ ಖರ್ಚುಗಳು. ಅಲ್ಪ ಕಾರ್ಯಸಿದ್ಧಿ. ಇತರರ ಮಾತಿಗೆ ಮರುಳಾಗದಿರಿ. ಮಕ್ಕಳಿಂದ ನೋವು ಉಂಟಾದೀತು. ಶುಭಸಂಖ್ಯೆ: 1

ವೃಷಭ: ಚಂಚಲ ಮನಸ್ಸು. ತಾಳ್ಮೆಯಿಂದ ಇರಿ. ಅನಾರೋಗ್ಯ. ಅಲ್ಪ ಆದಾಯ ಅಧಿಕ ಖರ್ಚು. ಕುಟುಂಬದಲ್ಲಿ ಕಲಹ ಆಗಬಹುದು. ಶುಭಸಂಖ್ಯೆ: 2

ಮಿಥುನ: ಧಾರ್ವಿುಕ ಕಾರ್ಯಗಳಲ್ಲಿ ಒಲವು. ಪರಸ್ಥಳ ವಾಸ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ವಿಪರೀತ ಹಣವ್ಯಯ. ಮನೋವ್ಯಥೆ. ಶುಭಸಂಖ್ಯೆ: 6

ಕಟಕ: ವಿದೇಶ ವ್ಯವಹಾರಗಳಿಂದ ಅಲ್ಪ ಲಾಭ. ಅಧಿಕ ಕೆಲಸದಿಂದ ವಿಶ್ರಾಂತಿ. ಉದ್ಯೋಗದಲ್ಲಿ ತೊಂದರೆ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 7

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ. ಕೃಷಿಯಲ್ಲಿ ನಷ್ಟ. ರಿಯಲ್ ಎಸ್ಟೇಟ್​ನವರಿಗೆ ಲಾಭ. ಉದ್ಯೋಗದಲ್ಲಿ ಪ್ರಗತಿ ಕಾಣುವುದು. ಶುಭಸಂಖ್ಯೆ: 9

ಕನ್ಯಾ: ಬಂಧುಮಿತ್ರರ ಭೇಟಿ. ಸಂತಸದಾಯಕ ಕ್ಷಣಗಳು. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಅಶಾಂತಿ, ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 2

ತುಲಾ: ಕಾರ್ಯಗಳಲ್ಲಿ ಅಡತಡೆ. ಮನಕ್ಲೇಷ. ಚೋರಭಯ ವಿದೆ, ಎಚ್ಚರದಿಂದಿರಿ. ಅಧಿಕ ಕೋಪ ಒಳ್ಳೆಯದಲ್ಲ, ಸ್ತ್ರೀಯರಿಂದ ಸಹಕಾರ. ಶುಭಸಂಖ್ಯೆ: 4

ವೃಶ್ಚಿಕ: ಹಿರಿಯರ ಮಾತಿಗೆ ಮನ್ನಣೆ. ದಾಂಪತ್ಯದಲ್ಲಿ ವಿರಸ. ಆಂತರಿಕ ಕಲಹ. ದೂರ ಪ್ರಯಾಣ ಸಾಧ್ಯತೆ. ಅಲ್ಪ ಕಾರ್ಯಸಿದ್ದಿ. ಶುಭಸಂಖ್ಯೆ: 3

ಧನುಸ್ಸು: ಪರಸ್ತ್ರೀಯಿಂದ ತೊಂದರೆಯಿದೆ ಎಚ್ಚರ. ಉದರ ಬಾಧೆ. ಪ್ರಿಯ ಜನರ ಭೇಟಿ. ವ್ಯವಹಾರದಲ್ಲಿ ದೃಷ್ಟಿದೋಷ. ಶತ್ರು ಬಾಧೆ. ಶುಭಸಂಖ್ಯೆ: 8

ಮಕರ: ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಅತಿ ಬುದ್ಧಿವಂತಿಕೆ ಪ್ರದರ್ಶನ. ಸಾಲಬಾಧೆ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 3

ಕುಂಭ: ರಾಜ ಸನ್ಮಾನದಿಂದ ಸಂತೋಷ. ವಾಹನ ಖರೀದಿ ಮಾಡುವಿರಿ. ಸ್ಥಿರಾಸ್ತಿ ಪ್ರಾಪ್ತಿ, ಶತ್ರುಗಳ ನಾಶ. ಸಂತಸದ ಕ್ಷಣಗಳು. ಶುಭಸಂಖ್ಯೆ: 1

ಮೀನ: ಕುಟುಂಬ ಸೌಖ್ಯ. ಹಣಕಾಸಿನ ಪರಿಸ್ಥಿತಿ ಉತ್ತಮ. ಪ್ರತಿಷ್ಠಿತ ಜನರ ಪರಿಚಯ. ಬಾಕಿ ವಸೂಲಿ. ವಿವಾಹ ಯೋಗ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net