

ಬೆಂಗಳೂರು: ಮದುವೆಗೆ ಮುಂಚೆ ವಧು ವಿಶೇಷವಾದ ಮೇಕಪ್ಗೆ ಒಳಗಾಗುವುದು ಸರ್ವೇಸಾಮಾನ್ಯ. ಮೇಕಪ್ ಇಲ್ಲದೆ ಮದುವೆಯೇ ನಡೆಯುವುದಿಲ್ಲವೆಂದರೂ ತಪ್ಪೇನಲ್ಲ. ಆದರೆ ಇಲ್ಲೊಂದು ಕಡೆ ಮೇಕಪ್ ವಧುವಿನ ಮುಖದ ಬಣ್ಣವನ್ನೇ ಕೆಡಿಸಿದ್ದಷ್ಟೇ ಅಲ್ಲ, ಇದೇ ಕಾರಣಕ್ಕೆ ಮದುವೆ ಕೂಡ ನಿಂತು ಹೋಗಿದೆ.
ಇದನ್ನೂ ಓದಿ: ಮನೆಯೊಳಗಿನ ಗಣೇಶನ ಫೋಟೋ ಫ್ರೇಮ್ ಒಳಗಿತ್ತು ನಾಗರಹಾವು!
ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಧುವಿನ ಕುಟುಂಬಸ್ಥರು ಬ್ಯೂಟಿಪಾರ್ಲರ್ನ ಗಂಗಾ ಎಂಬಾಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಗಂಗಾಳನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ನಡೆಯುತ್ತಿದೆ.
ವಧು ಹೊಸ ಥರದ ಸೌಂದರ್ಯವರ್ಧನೆಗೆ ಮನಸು ಮಾಡಿದ್ದು, ಫೌಂಡೇಷನ್ ಹಾಕಿದ ಬಳಿಕ ಸ್ಟೀಮ್ ತೆಗೆದುಕೊಂಡಿದ್ದಳು. ಅದಾದ ಸ್ವಲ್ಪ ಹೊತ್ತಿಗೆ ವಧುವಿನ ಮುಖದ ಬಣ್ಣಗೆಟ್ಟು ಊದಿಕೊಂಡಿತ್ತು. ವಧುವಿನ ವಿರೂಪಗೊಂಡ ಮುಖವನ್ನು ನೋಡಿದ ವರ ಮದುವೆಯನ್ನೇ ರದ್ದುಗೊಳಿಸಿದ್ದಾನೆ.