ಮನೆಯೊಳಗಿನ ಗಣೇಶನ ಫೋಟೋ ಫ್ರೇಮ್​ ಒಳಗಿತ್ತು ನಾಗರಹಾವು!

Ganesha Photo Snake
Published on

ಬಾಗಲಕೋಟೆ: ಮನೆಯ ಯಾವುದೋ ಮೂಲೆಯಲ್ಲಿ, ಬೈಕ್​ನ ಗ್ಯಾಪ್​ನಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಆದರೆ ಇಲ್ಲೊಂದು ಕಡೆ ಗಣೇಶನ ಫೋಟೋ ಫ್ರೇಮ್​ನೊಳಗೇ ನಾಗರಹಾವು ಇದ್ದ ಪ್ರಕರಣವೊಂದು ನಡೆದಿದೆ.

ಅಷ್ಟಕ್ಕೂ ಇಂಥದ್ದೊಂದು ಫೋಟೋ ಒಳಗೆ ನಾಗರಹಾವು ಇದ್ದೀತು ಎಂದು ಯಾರೂ ಊಹಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಅಂಥದ್ದೊಂದು ಸನ್ನಿವೇಶ ಮನೆಯೊಂದರಲ್ಲಿ ಸೃಷ್ಟಿಯಾಗಿತ್ತು. ಬಾಗಲಕೋಟೆಯ ವಿದ್ಯಾಗಿರಿಯ ಕೊಣ್ಣೂರ ಮಠದ ಹಿಂಬದಿಯ ಮನೆಯೊಂದರಲ್ಲಿ ಈ ರೀತಿ ಆಗಿತ್ತು.

ಮನೆಯ ಗೋಡೆಗೆ ತಗುಲಿಸಿದ್ದ ದೊಡ್ಡ ಗಣಪತಿಯ ಫೋಟೋ ಫ್ರೇಮ್​ ಒಳಗೆ ನಾಗರಹಾವು ಕಂಡುಬಂದಿತ್ತು. ಹಾವಿನ ಇರುವಿಕೆ ತಿಳಿದು ಉರಗ ರಕ್ಷಕ ಸ್ನೇಕ್ ರಾಜು ಅವರಿಗೆ ಸುದ್ದಿ ಮುಟ್ಟಿಸಿದ್ದರು. ಮನೆಗೆ ಬಂದ ರಾಜು ಫೋಟೋ ಒಡೆದು ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದರಿಂದ ಮನೆಯವರು ನಿಟ್ಟುಸಿರು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net